Take a fresh look at your lifestyle.

ಕಾರ್ಮಿಕ ಸಂಘಟನೆಗಳ ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ಶಿಗ್ಗಾಂವ, ಬಂಕಾಪುರ ಘಟಕ, ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಹಾವೇರಿ ಸಹಯೋಗದಲ್ಲಿ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಹಾಗೂ ಉಚಿತ ನೇತ್ರ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ ನಡೆಯಿತು

0
post ad

ಶಿಗ್ಗಾವಿ : ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಶ್ರೇಯೋಭಿವೃದ್ದಿಯ ಜೊತೆಗೆ ಆರೋಗ್ಯಕ್ಕೆ ಒತ್ತು ಕೊಡುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ, ಇದು ನಿರಂತರವಾಗಿರಲಿ ಎಂದು ಶಿಗ್ಗಾಂವ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಎಸ್.ಎ.ಕ್ಯೂ ಶಾದಿಮಹಲ್ ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾರ್ಮಿಕ ವಿಕಾಸ ವೇದಿಕೆ ಶಿಗ್ಗಾಂವ, ಬಂಕಾಪುರ ಘಟಕ, ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಹಾವೇರಿ ಇವರ ಸಹಯೋಗದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಹಾಗೂ ಉಚಿತ ನೇತ್ರ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣಾ ಶಿಬೀರದ ಸಾನಿದ್ಯ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಾರ್ಮಿಕ ವಿಕಾಸ ವೇದಿಕೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ, ದುಡಿಮೆಯ ಒತ್ತಡದ ಜೀವನದಲ್ಲಿ ಆರೋಗ್ಯಕ್ಕೆ ಒತ್ತು ಕೊಡುವುದಿಲ್ಲ ಅದು ಆಗಬಾರದು ಆರೋಗ್ಯಕ್ಕೆ ಗಮನ ಕೊಟ್ಟಾಗ ಮಾತ್ರ ಕಾರ್ಮಿಕರ ಜೀವನ ಸಾರ್ಥಕ ಎಂದರು,
ಸಾನಿದ್ಯವನ್ನು ವಹಿಸಿ ಮಾತನಾಡಿದ ಬಂಕಾಪೂರ ಧಾರ್ಮಿಕ ಗುರು ಹಜರತ್ ಸೈಯದ್ ಖುತುಬ್ ಎ ಆಲಂ ಅವರು, ಎಲ್ಲ ಕಾರ್ಮಿಕರು ಒಗ್ಗಟ್ಟಾಗಿ ಕೆಲಸ ಮಾಡಿ ಸಂಘಟಿತರಾಗಿ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು ಎಂದರು.
ನ್ಯಾಯವಾದಿ ಎಎ ಗಂಜೇನವರ ಮಾತನಾಡಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಕಾರ್ಮಿಕರ ವಿಕಾಸ ವೇದಿಕೆಯ ಕಾರ್ಯ ಶ್ಲಾಘನಿಯವಾದದ್ದು, ಕಾರ್ಮಿಕರಲ್ಲಿ ಹಲವಾರು ವಿಂಗಡೆಗಳಿವೆ ಅದೇ ರೀತಿ ಕಾನೂನುಗಳಿವೆ ಅವುಗಳನ್ನು ಎಲ್ಲ ಕಾರ್ಮಿಕರೂ ತಿಳಿಯಬೇಕು, ಕಾರ್ಮಿಕರ ಶಕ್ತಿ ಅಮೂಲ್ಯವಾದದ್ದು ಮತ್ತು ಕಾರ್ಮಿಕರ ಎಲ್ಲ ದಾಖಲೆಗಳನ್ನು ಸಂಘಟಿಕರು ಸಂಗ್ರಹಿಸಿ ವ್ಯವಸ್ಥಿತವಾಗಿ ನಿರ್ವಹಿಸಿ ಅವರಿಗೆ ಎಲ್ಲ ಪ್ರಕಾರದ ಅನೂಕುಲಗಳನ್ನು ಒದಗಿಸಬೇಕು ಎಂದರು.
ಬಂಕಾಪೂರ ಎಎಸ್‍ಐ ಡಿ ಎಮ್ ಕುಡ¯ ಮಾತನಾಡಿ ಆರೋಗ್ಯ ಸಂಪತ್ತು ಮುಖ್ಯವಾದದ್ದು ಅದನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಮಿಕರ ವಿಕಾಸ ವೇದಿಕೆಯ ಕಾರ್ಯಕ್ಕೆ ಧನ್ಯವಾಗಳು ಎಂದ ಅವರು ಕಾರ್ಮಿಕರು ಕಾನೂನುಗಳನ್ನು ತಿಳಿದಿಕೊಂಡು ಕಾರ್ಯ ನಿರ್ವಹಿಸಬೇಕು ಅವಸರದಿಂದ ಅಪಾಯಕ್ಕೆ ಹೋಗಬಾರದು, ತುರ್ತು ಪರಿಸ್ಥಿತಿಯಲ್ಲಿ 112 ಕ್ಕೆ ಕರೆ ಮಾಡಬೇಕು, ಪರವಾನಿಗೆ ಪಡೆದು ತಮ್ಮ ಕಾರ್ಯಗಳನ್ನು ಮಾಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಮಾತನಾಡಿ ಪುರಸಭೆಯಿಂದ ಕಾರ್ಮಿಕರಿಗೆ ಬರುವಂತಹ ಎಲ್ಲ ಸೌಲಭ್ಯಗಳನ್ನು ನೀಡಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಕ.ರಾ.ಕಾ.ವಿ.ವೇದಿಕೆ ರಾಜ್ಯಾಧ್ಯಕ್ಷ ಅಬ್ದುಲ್ ಕರೀಂ ಮೊಗಲಲ್ಲಿ, ಬಂಕಾಪುರ ಘಟಕದ ಅಧ್ಯಕ್ಷ ಅಬ್ದುಲಖಾದರ ಸವಣೂರ, ಗೌರವಾಧ್ಯಕ್ಷರು ಜೀಲಾನಿ ಜಂಗ್ಲಿ, ತಾಲೂಕಾ ಅಧ್ಯಕ್ಷ ಇಮಾಮಹುಸೇನ ಆದಂಭಾಯಿ ವೆಂಕಟೇಶ ಬಂಡಿವಡ್ಡರ, ಹನುಮಂತಪ್ಪ ಬಂಡಿವಡ್ಡರ, ಮಹಾದೇವ ಹಡಪದ, ಲಲಿತಾ ಸಾತೇನಹಳ್ಳಿ, ಮಹ್ಮದಹುಸೇನ ಖತೀಬ ಸೇರಿದಂತೆ ಕಾರ್ಮಿಕರ ಸಂಘದ ಪಧಾಧಿಕಾರಿಗಳು ವಿವಿಧ ಮುಖಂಡರು ಫಲಾನುಭವಿಗಳು ಹಾಗೂ ಜಯಪ್ರಿಯಾ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.