Take a fresh look at your lifestyle.

ಟ್ರಕ್‌ ಹರಿದು 13 ಕಾರ್ಮಿಕರ ಸಾವು

ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿರುವ ಕಬ್ಬು ತುಂಬಿದ್ದ ಟ್ರಕ್‌, ಚಾಲಕನ ನಿಯಂತ್ರಣಕ್ಕೆ ಸಿಗದೆ ಫುಟ್‌ಪಾತ್‌ ಮೇಲೆ ಸಾಗಿದೆ

0
post ad

ಸೂರತ್‌: ಟ್ರಕ್‌ ಹರಿದು 13 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ದುರ್ಘಟನೆ ಗುಜರಾತ್‌ನಲ್ಲಿ ನಡೆದಿದೆ. ಸೂರತ್ ನ ಕೋಸಂಬಾದಲ್ಲಿ ಈ ಭೀಕರ ದುರಂತ ಸಂಭವಿಸಿದ್ದು ಮಧ್ಯರಾತ್ರಿ 12.30 ಕ್ಕೆ ಅವಘಡ ನಡೆದು ಹೋಗಿದೆ.

ಮೃತಪಟ್ಟಿರುವ ಎಲ್ಲರೂ ರಾಜಸ್ಥಾನದಿಂದ ಬಂದಿದ್ದ ವಲಸೆ ಕಾರ್ಮಿಕರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ಕಾರ್ಮಿಕರು ಫೂಟ್‌ಪಾತ್‌ ಮೇಲೆ
ನಿದ್ರೆಯಲ್ಲಿದ್ದಾಗ ಈ ಘಟನೆ ನಡೆದಿದೆ.
ಕಾರ್ಮಿಕರೆಲ್ಲರೂ ರಾಜಸ್ಥಾನದ ಬಾಂಸ್ವಾಡಾ ಮೂಲದವರೆಂದು ವರದಿಯಾಗಿದೆ.
ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿರುವ ಕಬ್ಬು ತುಂಬಿದ್ದ ಟ್ರಕ್‌, ಚಾಲಕನ ನಿಯಂತ್ರಣ ಚಕ್ಕೆ ಸಿಗದೆ ಫೂಟ್‌ಪಾತ್‌ ಮೇಲೆ ಸಾಗಿದೆ. ಅಲ್ಲಿ ಮಲಗಿದ್ದವರ ಪೈಕಿ 13 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.