Take a fresh look at your lifestyle.

ವಿಸ್ಟ್ರಾನ್ ಕಂಪನಿಯ 80 ನೌಕರರು ಪೊಲೀಸರ ವಶಕ್ಕೆ

ಆರಂಭದಲ್ಲಿ ಆರಂಭದಲ್ಲಿ ಸಂಸ್ಥೆ ವೇತನ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ಪೂರ್ಣವಾದ ಮೇಲೆ ಘರ್ಷಣೆಗೆ ಕಾರಣ ತಿಳಿಯಲಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಾರ್ಮಿಕರ ಗುಂಪಿನಲ್ಲಿ ಮಾತುಕತೆ ನಡೆದು ಗಲಾಟೆ ಆರಂಭವಾಗಿದೆ

0
post ad

ಕೋಲಾರ : ವಿಸ್ಟ್ರಾನ್ ಕಂಪನಿಯ ಮೇಲೆ ತನ್ನದೇ ನೌಕರರಿಂದ ನಡೆದ ದಾಳಿಯ ಪ್ರಕರಣದಲ್ಲಿ 80 ಕ್ಕೂ ಹೆಚ್ಚು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.

ಮೇಲ್ನೋಟಕ್ಕೆ ಸಂಬಳದ ವಿಚಾರವಾಗಿ ನಡೆದ ಗಲಾಟೆ ಎನ್ನಲಾಗುತ್ತಿರುವ ಈ ಪ್ರಕರಣದ ತಕ್ಷಣದ ತನಿಖೆಗೆ 10 ಪೊಲೀಸ್ ತಂಡಗಳನ್ನು ರಚನೆ ಮಾಡಿ ತನಿಖೆ ಆರಂಭಿಸಲಾಗಿದೆ.
ಆರಂಭದಲ್ಲಿ ಆರಂಭದಲ್ಲಿ ಸಂಸ್ಥೆ ವೇತನ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ಪೂರ್ಣವಾದ ಮೇಲೆ ಘರ್ಷಣೆಗೆ ಕಾರಣ ತಿಳಿಯಲಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಾರ್ಮಿಕರ ಗುಂಪಿನಲ್ಲಿ ಮಾತುಕತೆ ನಡೆದು ಗಲಾಟೆ ಆರಂಭವಾಗಿದೆ. ಅದು ಪಾಳಿಯ ವಿಚಾರವು ಘರ್ಷಣೆಗೆ ಕಾರಣವಾಗಿರುವ ಸಾಧ್ಯತೆ ಇದ್ದು,
ಶಿಫ್ಟ್ ಬದಲಾವಣೆ ಆದಾಗ ನಡೆದಿದೆ ಎನ್ನಲಾಗುತ್ತಿದೆ.
ಕಂಪನಿಯ ಕಟ್ಟಡ, ಪೀಠೋಪಕರಣಗಳು, ವಾಹನಗಳು ಸೇರಿದಂತೆ ಸಾಕಷ್ಟು ಹಾನಿಯಾಗಿದೆ.
ಘಟನೆ ಮತ್ತು ಹಾನಿ ಬಗೆಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಘಟನೆ ಕುರಿತು ಕೇಂದ್ರೀಯ ಐಜಿ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸಿಸಿ ಟಿವಿ, ಫೋಟೋ ಹಾಗೂ ವಿಡಿಯೋಗ್ರಾಫಿ ಆಧಾರದ ಮೇಲೆ ತನಿಖೆ ಆರಂಭಿಸಿದ್ದೇವೆ
ಆರೋಪಿಗಳು ಎಲ್ಲೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ಕಾನೂನು ಕೈಗೆತ್ತಿಕೊಂಡಿರುವುದು ತಪ್ಪು ಎಂದರು.
ಬೆಳಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ನಾವು ಬಂದಿದ್ದೇವೆ, ಘರ್ಷಣೆಯನ್ನು ಆದಷ್ಟು ಬೇಗ ಹತೋಟಿಗೆ ತಂದಿದ್ದೇವೆ ಎಂದರು. ಬೆಂಗಳೂರು,ಕೆಜಿಎಫ್ ಭಾಗದಿಂದ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ.
ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.