Take a fresh look at your lifestyle.

ಕುಂದಗೋಳದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಪೆಬ್ರವರಿ 2 ರಂದು ಆನೇಕಲ್ ನ ಕಂದಾಯ ನಿರೀಕ್ಷಕ ರಮೇಶ್ ನಾಯಕ್ ರವರು ಅಂಗಡಿ ಪರವಾನಗಿ ನೀಡಲು ಲಂಚ ಸ್ವೀಕರಿಸುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಭ್ರಷ್ಟ ಅಧಿಕಾರಿ ಕೊನೆಗೂ ಗ್ರಾಹಕನಿಗೆ ಕ್ಷಮಾಪಣೆ ಕೋರಿ, ಪೇಚಿಗೆ ಸಿಲುಕಿ ನಾಗರಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದರು

0
post ad

ಕುಂದಗೋಳ : ಮನಶ್ವಿನಿ ಯೋಜನೆಗೆ ಹಣ ಬಿಡುಗಡೆ ಮಾಡಲು 600 ರೂಪಾಯಿ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಧಾರವಾಡ ಜಿಲ್ಲೆಯ ಕುಂದಗೋಳದ
ಕಂದಾಯ ಇಲಾಖೆಯಲ್ಲಿ ಈ ದಾಳಿ ನಡೆದಿದ್ದು
ಕಂದಾಯ ನಿರೀಕ್ಷಕ ಶಿವಾನಂದ ಶಿರಹಟ್ಟಿ ಲಂಚದ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾನೆ.

ಬೆಟದೂರಿನ ಮಹಿಳೆಯೊಬ್ಬರಿಗೆ ಮದುವೆಯಾದ
ಹಿನ್ನಲೆಯಲ್ಲಿ ಮನಶ್ವಿನಿ ಯೋಜನೆಯಲ್ಲಿ
ಫಲಾನುಭವಿ ಹಣವನ್ನು ಬಿಡುಗಡೆ ಮಾಡಲು 600
ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಮಹಿಳೆ
ಎಸಿಬಿಗೆ ದೂರನ್ನು ನೀಡಿದ್ದಳು.
ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ
ಎಸಿಬಿ ಡಿಎಸ್ಪಿ ವೇಣುಗೊಪಾಲ, ಇನಸ್ಪೇಕ್ಟರ್‌
ಅಧಿಕಾರಿಗಳಾದ ಜಾಧವ, ಮತ್ತು ಹಿರೇಮಠ ಇವರ
ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 600
ರೂಪಾಯಿಗೆ ಬೇಡಿಕೆ ಇಟ್ಟದ್ದ ಕಂದಾಯ
ನಿರೀಕ್ಷಕನನ್ನು ಬಲೆಗೆ ಹಾಕಲಾಗಿದೆ. ಇನ್ನೂ ಹಣದ
ಸಮೇತ ಕಂದಾಯ ನಿರೀಕ್ಷಕನನ್ನು ಎಸಿಬಿ
ಅಧಿಕಾರಿಗಳು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಬಿ ಸಿಬ್ಬಂದಿಗಳಾದ ಲೊಕೇಶ ಬೆಂಡಿಕಾಯಿ, ಶ್ರೀಶೈಲ ಮನಸೂರು, ಗಿರೀಶ
ಮನಸೂರು, ಕಟ್ಟಿಯವರು, ಕಾರ್ತಿಕ
ಹುಯಿಲಗೋಳ ಭಾಗವಹಿಸಿದ್ದರು.
ಪೆಬ್ರವರಿ 2 ರಂದು ಆನೇಕಲ್ ನ ಕಂದಾಯ ನಿರೀಕ್ಷಕ ರಮೇಶ್ ನಾಯಕ್ ರವರು ಅಂಗಡಿ ಪರವಾನಗಿ ನೀಡಲು ಲಂಚ ಸ್ವೀಕರಿಸುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಭ್ರಷ್ಟ ಅಧಿಕಾರಿ ಕೊನೆಗೂ ಗ್ರಾಹಕನಿಗೆ ಕ್ಷಮಾಪಣೆ ಕೋರಿ, ಪೇಚಿಗೆ ಸಿಲುಕಿ ನಾಗರಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಇತ್ತೀಚೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಒಂದೊಂದೆ ಲಂಚದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಒಟ್ಟಾರೆ ಇಲಾಖೆಯೇ ಭ್ರಷ್ಟವಾಗುತ್ತಿದೆ.