Take a fresh look at your lifestyle.

ಕೆಲಸ ಕಡಿತದ ವಿರುದ್ಧ ಕೆರಳಿದ ಕಾರ್ಮಿಕರು

ಲಾಕ್‌ಡೌನ್ ಪರಿಸ್ಥಿತಿಯನ್ನೇ ದುರುಪಯೋಗ ಮಾಡಿಕೊಂಡ ಎಸಿಸಿ ಆಡಳಿತ, ಕೆಲಸ ಕಸಿದುಕೊಂಡು ಕಾರ್ಮಿಕರನ್ನು ಮನೆಗೆ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಕಂಪನಿಯ ಕುತಂತ್ರದಿಂದ ಈಗಾಗಲೇ ನೂರಾರು ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ

0
post ad

ವಾಡಿ: ಸಿಮೆಂಟ್ ಉದ್ಯಮ ನಷ್ಟದಲ್ಲಿದೆ ಎಂಬ ನೆಪ ಹೇಳಿ  ಎಸಿಸಿ ಆಡಳಿತ ವರ್ಗ ಕಾರ್ಮಿಕರನ್ನು ಕಡಿತಗೊಳಿಸಿದೆ.  ಕಿರುಕುಳ ನೀಡುವ ಮೂಲಕ ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಮಹಿಳಾ ಕಾರ್ಮಿಕರನ್ನು ಗುರಿಯಾಗಿಸಿ ಕೆಲಸ ದಿನಗಳನ್ನು ಕಡಿತ ಮಾಡಿದೆ.  ತಿಂಗಳಿಗೆ ಮೂರ್ನಾಲ್ಕು ದಿನ ಮಾತ್ರ ಕೆಲಸವನ್ನು ನೀಡುತ್ತಿದೆ, ಕಾರ್ಮಿಕರ ಕಾಯ್ದೆಗಳ ಹಕ್ಕಿನಡಿ ಅನ್ಯಾಯ ಪ್ರಶ್ನಿಸಿದರೆ ಕೆಲಸದಿಂದ ತೆಗೆಯುವ ಬೆದರಿಗೆ ಹಾಕಲಾಗುತ್ತಿದೆ.
ಒಂದು ವರ್ಷದಿಂದ ಕೆಲಸವಿಲ್ಲದೆ ಕಂಗಾಲಾಗಿದ್ದು, ಬೀದಿಗೆ ಬಿದ್ದಿರುವ  ಎಸಿಸಿ ಗುತ್ತಿಗೆ ಕಾರ್ಮಿಕರು ಶಾಸಕ ಪ್ರಿಯಾಂಕ್ ಖರ್ಗೆ ಮುಂದೆ ತಮ್ಮ ಗೋಳು ತೋಡಿಕೊಂಡಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ ಸಿಮೆಂಟ್ ಕಂಪನಿಯು ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕಳುಹಿಸುತ್ತಿದ್ದರಿಂದ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಗುತ್ತಿಗೆ ಕಾರ್ಮಿಕ ಮುಖಂಡ ಗುರುಪಾದ ದೊಡ್ಡಮನಿ ನೇತೃತ್ವದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ನೂರಾರು ಜನ ಗುತ್ತಿಗೆ ಕಾರ್ಮಿಕರು, ಎಸಿಸಿ ವಿರುದ್ಧ ಕ್ರಮಕೈಗೊಂಡು ನಮಗೆ ನಿತ್ಯ ಕೆಲಸ ಕೊಡಿಸುವಂತೆ ಮನವಿ ಮಾಡಿದರು.

ಎಸಿಸಿ ಕಂಪನಿಯಲ್ಲಿ ಕಳೆದ ಎರಡು ದಶಕಗಳಿಂದ ಸಾವಿರಾರು ಜನ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕಂಪನಿ ಅಧಿಕಾರಿಗಳು ಮಹಿಳಾ ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಶೋಷಣೆ ಆರಭಿಸಿದೆ. ತಿಂಗಳಿಗೆ ಕೇವಲ ಮೂರು ಅಥವಾ ನಾಲ್ಕು ಹಾಜರಿ ಕೊಟ್ಟು ಅನ್ಯಾಯ ಮಾಡಲಾಗುತ್ತಿದೆ. ಜೀವನ ನಡೆಸಲಾಗದೆ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.

ಪ್ರತಿ ತಿಂಗಳು 26 ಹಾಜರಿ ಕೊಡುವಂತೆ ಆದೇಶಿಸಬೇಕು ಅಥವ ಸ್ವಯಂ ನಿವೃತ್ತಿಗೆ ರೂ.5 ಲಕ್ಷ ಪರಿಹಾರ ಘೋಷಿಸುವಂತೆ ಎಸಿಸಿಗೆ ಸೂಚಿಸಬೇಕು ಎಂದು ಮುಖಂಡ ಗುರುಪಾದ ದೊಡ್ಡಮನಿ ಖಾರ್ಮಿಕರ ಪರವಾಗಿ ಶಾಸಕರಿಗೆ ಮನವಿ ಮಾಡಿದರು. ಕಾರ್ಮಿಕರ ಅಳಲು ಆಲಿಸಿದ ಶಾಸಕ ಪ್ರಿಯಾಂಕ್, ಎಸಿಸಿ ಆಡಳಿತದೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಹುಡುಕುವುದಾಗಿ ಭರವಸೆ ನೀಡಿದರು.