Take a fresh look at your lifestyle.

ಕಾರ್ಮಿಕ ಕಚೇರಿಯಲ್ಲೇ ಕಮೀಷನ್ ದಂಧೆ

ಎಪ್ಪತ್ತೇಳು ರೂಪಾಯಿಯ ಕಾರ್ಮಿಕ ಕಾರ್ಡ್ ಗೆ ಆರು ನೂರು ರೂಪಾಯಿ ವಸೂಲಿ

0
post ad

ಹುಬ್ಬಳ್ಳಿ : ಕಲಘಟಗಿ ತಾಲ್ಲೂಕಿನ ಕಾರ್ಮಿಕ ಇಲಾಖೆಯ ಆವರಣದಲ್ಲಿಯೇ ಏಜೆಂಟರ ದರ್ಬಾರ್ ನಡೆಯುತ್ತಿದೆ.
ಕಾರ್ಮಿಕರ ಕಾರ್ಡ್ ಮಾಡಿಕೊಡಲು 600 ರೂಪಾಯಿ ಸುಲಿಗೆ ಮಾಡುತ್ತ ರಸೂಲ್ ಎಂಬ ಏಜೆಂಟ್ ಮಾದ್ಯಮಗಳಿಗೆ ಸಿಕ್ಕಿ ಬಿದ್ದಿದ್ದಾನೆ.
ಸರ್ಕಾರಿ ಶುಲ್ಕ ಕೇವಲ 75 ರೂಪಾಯಿ ಇದ್ದರು ಕೂಡಾ ದಲ್ಲಾಳಿಗಳು ಕಾರ್ಮಿಕರಿಂದ 600 ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ.
ಮೂರು ವರ್ಷಕ್ಕೆ ಕೇವಲ 75 ರೂಪಾಯಿ ಸರ್ಕಾರಿ ಶುಲ್ಕ ಇದ್ದರು ಕೂಡಾ ಅಧಿಕಾರಿಗಳು ಮಧ್ಯವರ್ತಿಗಳ ಮುಖಾಂತರ 600 ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನು, ಈ 600 ರೂಪಾಯಿಯಲ್ಲಿ ಕಾರ್ಮಿಕ ಇಲಾಖೆಯು ಅಧಿಕಾರಿಗಳಿಗೂ ಪಾಲು ಇದೆ ಎಂಬ ಸಂಶಯ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟೆಲ್ಲ ಅಕ್ರಮಗಳು ಸರ್ಕಾರಿ ಕಚೇರಿಯ ಆವರಣದಲ್ಲಿ ನಡೆಯುತ್ತಿದ್ದರೂ ಕೂಡಾ ಕಂಡು ಕಾಣದಂತಾದ ಕಲಘಟಗಿಯ ಶಾಸಕರು ಮೌನ ವಹಿಸಿದ್ದಾರೆ.