Take a fresh look at your lifestyle.

ಕಾರ್ಮಿಕ ಭವನದ ಮುಂದೆ ಎಐಸಿಸಿಟಿಯು ಪ್ರತಿಭಟನೆಗೆ ಕರೆ

ವಿಸ್ಟ್ರಾನ್ ಕಾರ್ಖಾನೆ ಕಾರ್ಮಿಕರು, ಟೊಯೋಟಾ ಕಿರ್ಲೋಸ್ಕರ್‌ ಮೋಟರ್ಸ್‌ ಬಿಕ್ಕಟ್ಟು, ಅರವಿಂದ್‌ ಗಾರ್ಮೆಂಟ್ಸ್ ಕಾರ್ಮಿಕರ ಪರವಾಗಿ ಪ್ರತಿಭಟನೆ..

0
post ad

ಬೆಂಗಳೂರು : ರಾಜ್ಯದಲ್ಲಿ ಕಾರ್ಮಿಕರು ನ್ಯಾಯಕ್ಕಾಗಿ ಆರಂಭಿಸಿರುವ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸುತ್ತಾ ಹಾಗೂ ಕಂಪೆನಿಗಳ ಆಡಳಿತ ಮಂಡಳಿಗಳು ಕಾರ್ಮಿಕರು ಕಾರ್ಮಿಕ ಕಾಯ್ದೆಗಳ ವಿರುದ್ಧ ನಡೆದುಕೊಳ್ಳುತ್ತಿರುವ ಕ್ರಮಗಳನ್ನು ಖಂಡಿಸುತ್ತಾ ಎಐಸಿಸಿಟಿಯು ಕಾರ್ಮಿಕ ಸಂಘಟನೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. 

ಇಂದು ಮಧ್ಯಾಹ್ನ ಬೆಂಗಳೂರಿನ ಡೈರಿ ವೃತ್ತದ ಬಳಿಯ ಕಾರ್ಮಿಕ ಭವನದ ಎದುರು ಪ್ರತಿಭಟನೆಗೆ ಕರೆ ನೀಡಿದ್ದು, ಸಂಘಟನೆಯ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ನಡು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್, ರಾಮನಗರದ ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಕಾರ್ಮಿಕ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲು ವಿಫಲವಾದ ಸಂಸ್ಥೆಯ ಲೋಪದಿಂದ ಜೈಲು ಸೇರಿರುವ ವಿಸ್ಟ್ರಾನ್ ಕಾರ್ಮಿಕರ ಪರವಾಗಿ  ಎಐಸಿಸಿಟಿಯು ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಸರ್ಕಾರವು ಕಾರ್ಮಿಕರ ಕಷ್ಟನಷ್ಟಗಳನ್ನು ಕೇಳಿಸಿಕೊಳ್ಳುವ ಬದಲು, ಮಾಲೀಕರಿಗೆ ಬೆಂಬಲವನ್ನು ಬಹಿರಂಗವಾಗಿ ಸೂಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಸಂಘಟನೆ ಪ್ರಕಟಣೆ ಹೊರಡಿಸಿದೆ.

ಯಾರ ಪರವಾಗಿ ಪ್ರತಿಭಟನೆ ಎಂದರೆ..

ವಿಸ್ಟ್ರಾನ್ ಕಾರ್ಖಾನೆ ಘಟನೆ..
ನರಸಾಪುರ ಕೈಗಾರಿಕಾ ಇಲಾಖೆಯಲ್ಲಿ ಇತ್ತೀಚಿಗೆ ಸ್ಥಾಪಿತಗೊಂಡ ವಿಸ್ಟ್ರಾನ್ ಕಾರ್ಖಾನೆಯಲ್ಲಿ ದಿನಾಂಕ 12.12 2020ರಂದು ಕಾರ್ಖಾನೆ ಕಾರ್ಮಿಕರು ಘರ್ಷಣೆಗೆ ಇಳಿದಿದ್ದರು. ಇದಕ್ಕೆ ಕಾರಣ ಕಾರ್ಖಾನೆಯ ಮಾಲೀಕರು ಕಾರ್ಮಿಕರ ವೇತನವನ್ನು ಕಡಿತ ಮಾಡಿರುವುದು, ಜೊತೆಗೆ ಸಂಸ್ಥೆ ಕಾರ್ಮಿಕ ಕಾಯ್ದೆಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿತ್ತು.
ಸುಮಾರು 130 ಜನ ಕಾರ್ಮಿಕರನ್ನು ಬಂಧಿಸಿದ್ದಾರೆ. ಆಪಲ್‌ ಕಂಪನಿ ಮತ್ತು ವಿಸ್ಟಾನ್‌ ಕಾರ್ಖಾನೆಯ ಮಾಲೀಕರು ಕಾರ್ಮಿಕರಲ್ಲಿ, ಕ್ಷಮಾಪಣೆ ಕೇಳಿದರೆ ಹೊರೆತು, ಬಂಧನದಲ್ಲಿರುವ ಕಾರ್ಮಿಕರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ.
ಟೊಯೋಟಾ ಕಿರ್ಲೋಸ್ಕರ್‌ ಮೋಟರ್ಸ್‌ ಬಿಕ್ಕಟ್ಟು..

ಟೊಯೋಟಾ ಕಿರ್ಲೋಸ್ಕರ್‌ ಮೋಟರ್ಸ್‌ ಲಿ. ಆಡಳಿತ ವರ್ಗದವರು ಕಾನೂನು ಬಾಹಿರ ಲಾಕ್‌ ಔಟ್‌ ಘೋಷಿಸಿದ್ದು. ಸಂಘಟನೆಯ ಪದಾಧಿಕಾರಿಗಳನ್ನು ಒಳಗೊಂಡಂತೆ ಸುಮಾರು 65  ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಅಮಾನತುಗೊಳಿಸಿದ್ದಾರೆ.
ಅಮಾನವೀಯ ಕೆಲಸದ ಒತ್ತಡ, ಕಡಿಮೆ ವೇತನ, ವಿರಾಮ ಆಥವಾ ರಜೆಗಳ ಗೊಂದಲ, ಕೆಲಸದಿಂದ ಸೃಷ್ಟಿಯಾದ ಆರೋಗ್ಯ ಸಮಸ್ಯೆಗಳು, ಉತ್ಪಾದನಾ ನಿಯಮಗಳನ್ನು ಏಕಾಏಕಿಯಾಗಿ
ಬದಲಿಸುವುದು ಸೇರಿದಂತೆ ಹಲವಾರು ನಿಯಮಗಳ ಬಗೆಗೆ ಆಡಳಿತ ಮಂಡಳಿ ಮೊಂಡು ಧೋರಣೆ ಅನುಸರಿಸುತ್ತಾ ಕಾರ್ಮಿಕರನ್ನು ಬೀದಿ ಪಾಲು ಮಾಡುತ್ತಿರುವುದು.

ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರ ಹೋರಾಟ
ಗಾರ್ಮೆಂಟ್ಸ್‌ ವಲಯದಲ್ಲಿ ಪ್ರಾಮುಖ್ಯತೆ ಪಡೆದ ಅರವಿಂದ್‌ ಗಾರ್ಮೆಂಟ್ಸ್ ರಾಮನಗರದ ಘಟಕಕ್ಕೆ ಬೀಗ ಮುದ್ರೆ ಹಾಕಿ ಕಾರ್ಮಿಕರನ್ನು ಬೀದಿಪಾಲಾಗಿಸಿದೆ‌. ಆಡಳಿತ ಮಂಡಳಿ ಯಾವುದೇ ಸೂಚನೆಯನ್ನು ನೀಡದೇ ಸುಮಾರು 66 ಕಾರ್ಮಿಕರ ಕೆಲಸವನ್ನು ಕಿತ್ತುಕೊಂಡಿದೆ.
ಪರಿಹಾರವನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನಾ ಹೋರಾಟವನ್ನು ಮುಂದುವರೆಸಿದ್ದರು, ಆಡಳಿತ ಮಂಡಳಿ ಈ ಬಗೆಗೆ ಗಮನ ಹರಿಸುತ್ತಿಲ್ಲ.  ಜರೂರಾಗಿ ಪ್ರಕರಣವನ್ನು ಕಾರ್ಮಿಕ ಇಲಾಖೆ ಇತ್ಯರ್ಥಗೊಳಿಸುವುದು.