Take a fresh look at your lifestyle.

ಐಕ್ಯ ಹೋರಾಟ ಸಮಿತಿಯ ಜನಾಂದೋಲನ ಆರಂಭ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ, ರೈತ-ಕಾರ್ಮಿಕ-ದಲಿತ-ಗ್ರಾಹಕ ವಿರೋಧಿ ಕಾಯ್ದೆ/ಸುಗ್ರೀವಾಜ್ಞೆಗಳನ್ನು ವಿರೋಧಿ ಪ್ರತಿಭಟನೆ

0
post ad

ಬೆಂಗಳೂರು : ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಐಕ್ಯ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಪ್ರತಿಭಟನೆಗೆ ಚಾಲನೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ, ರೈತ-ಕಾರ್ಮಿಕ-ದಲಿತ-ಗ್ರಾಹಕ ವಿರೋಧಿ ಕಾಯ್ದೆ/ಸುಗ್ರೀವಾಜ್ಞೆಗಳನ್ನು ಧಿಕ್ಕರಿಸಿ, ಇಂದಿನಿಂದ ರಾಜ್ಯವ್ಯಾಪಿ ಜನಾಂದೋಲನಕ್ಕೆ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕರೆ ನೀಡಿತ್ತು. ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಹಲವು ಕಾರ್ಮಿಕ, ರೈತ ಕಾನೂನುಗಳು ಸದನದಲ್ಲಿ ಮಂಡನೆಯಾಗಲಿವೆ.
ಇನ್ನು, ನಾಳೆ ನಡೆಯುವ ಭಾರತ್ ಬಂದ್ ಗೂ ಬೆಂಬಲ ಸೂಚಿಸಿರುವ ಐಕ್ಯ ಹೋರಾಟ ಸಮಿತಿಯ ಸಂಘಟನೆಗಳು
ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಈ ಆಂದೋಲನವನ್ನು ಆರಂಭಿಸಿವೆ.
ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಕರ್ನಾಟಕದ ರೈತ-ದಲಿತ-ಕಾರ್ಮಿಕರ ಹಾಗು ಇತರ ಪ್ರಗತಿಪರ ಸಂಘಟನೆಗಳು ಕೈ ಜೋಡಿಸಿ ಐತಿಹಾಸಿಕ ಐಕ್ಯ ಹೋರಾಟವನ್ನು ಹಮ್ಮಿಕೊಂಡು ರಾಜ್ಯ ಸರ್ಕಾರದ ಜನ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸುತ್ತಾ ಬರುತ್ತಿವೆ.
ಜನಾಭಿಪ್ರಾಯವನ್ನೂ ಬದಿಗಿಟ್ಟು ಲೋಕಸಭೆ, ವಿಧಾನ ಸಭೆಯಲ್ಲಿ ಪ್ರಜಾತಾಂತ್ರಿಕ ಚರ್ಚೆಗೂ ಒಳಪಡಿಸದೆ ರೈತ-ಕಾರ್ಮಿಕ-ದಲಿತ ಪರ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಜನವಿರೋಧಿ ಕಾಯ್ದೆಗಳನ್ನು ಜನರ ಮೇಲೆ ಹೇರುತ್ತಿವೆ ಈ ಧೋರಣೆಯನ್ನು ಸರ್ಕಾರಗಳು ಹಿಂಪಡೆಯಬೇಕೆನ್ನುವುದೇ ಐಕ್ಯ ಹೋರಾಟ ಸಮಿತಿಯ ಜನಾಂದೋಲನ ಮೂಲ ಉದ್ದೇಶವಾಗಿದೆ.