Take a fresh look at your lifestyle.

ಟಿಕೆಎಂ ಕಾರ್ಮಿಕರಿಗೆ AISA, AICCTU ಸಂಘಟನೆಗಳ ಬೆಂಬಲ

AISA ನ ರಾಷ್ಟೀಯ ಪದಾಧಿಕಾರಿ ಕಿಶನ್ ಮತ್ತವರ ತಂಡ ಹಾಗೂ AICCTU ನ ಲೇಖಾ ಭಾಗವಹಿಸಿ ಬೆಂಬಲ ಸೂಚಿಸಿದರು

0
post ad

ಬಿಡದಿ: ಟಿಕೆಎಂ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಸರ್ಕಾರ, ಕಾರ್ಮಿಕ ಇಲಾಖೆ ವಿಫಲವಾಗುತ್ತಿರುವ ಹಿನ್ನಲೆಯಲ್ಲಿ ಹಲವು ಸಂಘಟನೆಗಳು ಕಾರ್ಮಿಕರ ಪರ ನಿಂತು ಬೆಂಬಲ ಘೋಷಿಸುತ್ತಿವೆ.
ಟೊಯೋಟಾ ಕಾರ್ಮಿಕರ ಸ್ವಾಭಿಮಾನಿ ಹೋರಾಟ ಸ್ಥಳಕ್ಕೆ AISA (all India students association) ಅಖಿಲ ಭಾರತ ವಿಧ್ಯಾರ್ಥಿಗಳ‌ ಸಂಘ ಮತ್ತು AICCTU ನಿಯೋಗಗಳು ಭೇಟಿ ನೀಡಿ ಬೆಂಬಲವನ್ನು ನೀಡಿದವು.
ಮಂಡಳಿಯ ಅಸಹಜ ಕಾರ್ಮಿಕ ನೀತಿ, ನಿರಂಕುಶ ಧೋರಣೆಗಳ ವಿರುದ್ಧ ಸ್ವಾಭಿಮಾನಿ ಹೋರಾಟದ ಅಂಗವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ನ ಕಾರ್ಮಿಕರು ಹಮ್ಮಿಕೊಂಡಿರುವ ಹೋರಾಟವೂ 62ನೇ ದಿನಕ್ಕೆ ಕಾಲಿಟ್ಟಿದೆ.


AISA ನ ರಾಷ್ಟೀಯ ಪದಾಧಿಕಾರಿ ಕಿಶನ್ ಮತ್ತವರ ತಂಡ  ಹಾಗೂ AICCTU ನ ಲೇಖಾ ಭಾಗವಹಿಸಿ ಬೆಂಬಲ ಸೂಚಿಸಿದರು.
ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ವಿಧ್ಯಾರ್ಥಿಗಳಿಗೆ ಈ ವಿಚಾರ ಮನವರಿಕೆ ಮಾಡಿ ಸಂಪೂರ್ಣ ಬೆಂಬಲ ನೀಡಿ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಕಾರ್ಮಿಕರ ಸಮಸ್ಯೆಗಳನ್ನು ಅರಿತು ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿ ಆಗುವುದು ನಮ್ಮ ಸಂಘದ ಉದ್ದೇಶ ಎಂದು AISA ಪದಾಧಿಕಾರಿಗಳು ತಿಳಿಸಿದರು.
ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕ  ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿಯೂ ಈ ವೇಳೆ ತಿಳಿಸಿದರು.
ಟೊಯೋಟಾ  ಆಡಳಿತ ವರ್ಗ ಮತ್ತು ಕಾರ್ಮಿಕ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು  71 ಕಾರ್ಮಿಕರ ಅಮಾನತ್ತು, 61 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.