27 ರಂದು ಅಂಗನವಾಡಿ ಮಹಾಮಂಡಳಿಯ ಕಾರ್ಯಕಾರಿ ಸಭೆ
2021ರ ಸಾಲಿನ ಮಹಾಮಂಡಳಿಯ ಹೋರಾಟದ ಬಗೆಗೆ ರೂಪರೇಶೆಗಳನ್ನು ರೂಪಿಸಲು, ಮಹಾಮಂಡಳಿಯ ಯೋಜನೆಗಳನ್ನು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೆ ರೂಪಿಸುವ ಸಾಧ್ಯತೆ ಇದೆ..


ಬೆಂಗಳೂರು : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯು ತಮ್ಮ ಹಕ್ಕು ಸಾಧನೆಗಳ ಉದ್ದೇಶದಿಂದ ರಾಜ್ಯಮಟ್ಟದ ಕಾರ್ಯಕಾರಿ ಸಭೆಯನ್ನು ಕರೆದಿದೆ.
ಡಿಸೆಂಬರ್ 27 ರಂದು ಬೆಂಗಳೂರಿನ ಮಹಾಮಂಡಳಿಯ ಕಛೇರಿಯಲ್ಲಿ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿರುವ ಬಗೆಗೆ ಪ್ರಕಟಣೆಯನ್ನು ಹೊರಡಿಸಿದೆ.
‘ಕೋವಿಡ್ 19ರ ಮಹಾಮಾರಿಯ ಹಿನ್ನಲೆಯಲ್ಲಿ ಮಹಾಮಂಡಳಿ ತನ್ನ ಕಾರ್ಯಕಾರಿ ಸಭೆಯನ್ನು ಹಲವಾರು ತಿಂಗಳುಗಳಿಂದ ಕರೆದಿರಲಿಲ್ಲ. ಜಾಗೃತಿ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಸಭೆಯನ್ನು ಆಯೋಜಿಸಿದ್ದು ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷತೆಯೊಂದಿಗೆ ಸಭೆಗೆ ಹಾಜರಾಗಲು ಫೆಡೆರೇಷನ್ ನ ಅಧ್ಯಕ್ಷ ಜಿ.ಆರ್.ಶಿವಶಂಕರ್ ಮನವಿಯನ್ನು ಮಾಡಿದ್ದಾರೆ.
ತುರ್ತು ತೀರ್ಮಾನಗಳನ್ನು ಚರ್ಚಿಸಲು ಕಾರ್ಯಕಾರಿ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಿರುವ ಅಂಶಗಳನ್ನು ನೋಡುವುದಾದರೆ..
*ನಿವೃತ್ತಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸಾಮಾಜಿಕ ಭದ್ರತೆ, ಪಿಂಚಣಿ ವಿಷಯದಲ್ಲಿ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲು ಚರ್ಚೆ ಹಾಗೂ ತೀರ್ಮಾನ.
* ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ನಮ್ಮ ಮಹಾಮಂಡಳಿಯ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಅನುಸರಿಸಬೇಕಿರುವ
ಕ್ರಮಗಳ ಬಗ್ಗೆ ಚರ್ಚೆ
* ತಾವು ಬರುವಾಗ ನಿಮ್ಮ ಯೋಜನೆಯ ಹಾಗೂ ಬೇರೆ ಯೋಜನೆಯಲ್ಲಿ ತಮ್ಮ ಸಂಗತಿಗಳಿದ್ದಲ್ಲಿ ತಮ್ಮ ಯೋಜನಾ
ಮಟ್ಟದಲ್ಲಿ ವಾಟ್ಸ್ ಆಪ್ ಗ್ರೂಪ್ ರಚಿಸಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ವಾಟ್ಸ್ ಆಪ್ ನಂಬರ್ ಶೇಖರಣೆ ಮಾಡಿದ್ದು ಆ ವಾಟ್ಸ್ ಆಪ್ ಗ್ರೂಪ್ನ ವಿವರವನ್ನು ಸಭೆಗೆ ತರುವುದು.
* ಮುಂದಿನ 2021ರ ಸಾಲಿನಲ್ಲಿ ನಮ್ಮ ಮಹಾಮಂಡಳಿಯ ಹೋರಾಟದ ಕಾರ್ಯಕ್ರಮಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ನಡೆಸಲು, ಚರ್ಚೆ ಹಾಗೂ ತೀರ್ಮಾನ ನಡೆಸಬೇಕಿದೆ.
ಇವುಗಳ ಬಗೆಗೆ ಸಭೆಯಲ್ಲಿ ಚರ್ಚಿಸಿ ತಿರ್ಮಾನಗಳನ್ನು ತೆಗೆದುಕೊಳ್ಳಬೇಕೆಂದು ಮಹಾಮಂಡಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.