Take a fresh look at your lifestyle.

ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ನೌಕರರ ಪ್ರತಿಭಟನೆ

ಅಂಗನವಾಡಿ ನೌಕರರಿಗೆ ಕರೋನಾ ಸಂರಕ್ಷಣೆಯನ್ನು ಒದಗಿಸಿ, ಒಳ್ಳೆ ಗುಣಮಟ್ಟದ ಸ್ಯಾನಿಟೇಸರ್, ಮಾಸ್ಕ್, ಪಿಪಿಟಿ ಕಿಟ್‌ಗಳನ್ನು ಒದಗಿಸಬೇಕು ಎಂದು ಒತ್ತಾಯ

0
post ad

ಕೋಲಾರ: ಅಂಗನವಾಡಿ ನೌಕರರಿಗೆ ಅನುದಾನವನ್ನು ಹೆಚ್ಚಳ ಮಾಡಿ ದೇಶದ ಮಕ್ಕಳ ಮತ್ತು ಮಹಿಳೆಯರನ್ನು ಕಾಪಾಡಬೇಕು ಅಂಗನವಾಡಿ ಕೇಂದ್ರಗಳಿಗೆ ಮತ್ತು ಅಂಗನವಾಡಿ ನೌಕರರಿಗೆ ಕರೋನಾ ಸಂರಕ್ಷಣೆಯನ್ನು ಒದಗಿಸಿ, ಒಳ್ಳೆ ಗುಣಮಟ್ಟದ ಸ್ಯಾನಿಟೇಸರ್, ಮಾಸ್ಕ್, ಪಿಪಿಟಿ ಕಿಟ್‌ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ನಗರದ ತಹಶಿಲ್ದಾರ್ ಕಛೇರಿ ಮುಂಭಾಗ ಧರಣಿ ನಡೆಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳನ್ನು ಫಲಾನುಭವಿಗಳಿಗೆ ಹಂಚುವ ಕೆಲಸ ಮಾಡುವಾಗ ಕಾರ್ಯಕರ್ತೆಯರ ಮೇಲೆ ಹಲ್ಲೆಗಳಾಗಿವೆ ಕರಾವಳಿ ಜಿಲ್ಲೆಗಳಲ್ಲಿ ದೋಣಿಯಲ್ಲಿ ಹೋಗಿ ಆಹಾರ ಸಾಮಾಗ್ರಿಗಳನ್ನು ಹಂಚಿದ್ದಾರೆ. ಹಲವಾರು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳಾಗಿವೆ. ಶಿಡ್ಲಘಟ್ಟ, ಹೊನ್ನಾಳಿ, ಬೆಳಗಾಂ ಇನ್ನು ಮುಂತಾದೆಡೆ ಘಟನೆಯಾದ ನಂತರ ರಕ್ಷಣೆ ಕೊಡಬೇಕು ಘಟನೆಯಾಗದಂತೆ ಮುಂಜಾಗ್ರತೆಗಳು ವಹಿಸಬೇಕು ಎಂದರು.

ಕೋವಿಡ್-19 ಭಾಗವಾಗಿ ಇಡೀ ರಾಜ್ಯದ ಜನತೆ ಲಾಕ್‌ಡೌನ್ ನಿಂದಾಗಿ ಮನೆಯಲ್ಲಿದ್ದರು ಇಡೀ ರಾಜ್ಯದ ಅಂಗನವಾಡಿ ನೌಕರರು ಯಾವುದೇ ಸಮಯದಲ್ಲಿ ಸರ್ಕಾರ ಮತ್ತು ಇಲಾಖೆ ಹೇಳಿದ ಕೆಲಸಗಳನ್ನು ನಿರ್ವಹಿಸುತ್ತಿದ್ದು ಸರ್ಕಾರ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.

ಮಕ್ಕಳ ಮಾಸಿಕ ತಪಾಸಣೆ ಮತ್ತು ತೂಕ ಮಾಡುವಾಗ ಅಂಗನವಾಡಿ ಕೇಂದ್ರಗಳನ್ನು ಮತ್ತು ತೂಕದ
ಯಂತ್ರಗಳನ್ನು ಸ್ಯಾನಿಟೇಸ್ ಮಾಡಿಸಲು ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 25 ಸಾವಿರ ಪ್ರೋತ್ಸಾಹಧನ ಮತ್ತು ಸ್ಥಳೀಯ ಸಾರಿಗೆ ಬಸ್ ಪಾಸ್ ಮತ್ತು ಊಟದ ವೆಚ್ಚವನ್ನು ಭರಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರಿಗೆ ನಿವೃತ್ತಿ ವೇತನ ಕೊಡಬೇಕು, ಮೇಲ್ವಿಚಾರಕಿಯರ ಹುದ್ದೆಗೆ 100% ಮೀಸಲಾತಿ ಮತ್ತು ಸೇವಾಹಿರಿತನದ ಆಧಾರದಲ್ಲಿ ಅಂಗನವಾಡಿ ನೌಕರರಿಗೆ ಮುಂಬಡ್ತಿ ಕೊಡಬೇಕು ಪದವಿ ತನಕ ವಿದ್ಯಾರ್ಹತೆ ಎಂಬುದನ್ನು ಸೇರಿಸಬೇಕು
ಹಾಗೂ ೭೫% ನ್ನು ಕಡ್ಡಾಯವಾಗಿ ಅಂಗನವಾಡಿ ನೌಕರರಿಗೆ ಮೀಸಲಿಡಬೇಕು ಅಂಗನವಾಡಿ ನೌಕರರು ಕರೋನಾ ವಾರಿಯರ್ಸ್‌ ಆಗಿರುವುದರಿಂದ 50 ಲಕ್ಷ ವಿಮೆಯನ್ನು ಕೊಡಬೇಕು. ಕರೋನಾ ಸೋಂಕಿತರಿಗೆ 5 ಲಕ್ಷ ಪರಿಹಾರವನ್ನು ನೀಡಬೇಕು,

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ತಾಲೂಕು ಅದ್ಯಕ್ಷರಾದ ಕಲ್ಪನಾ, ಕಾರ್ಯದರ್ಶಿ ಮಂಜುಳ, ಮುಖಂಡರಾದ ಲಕ್ಷ್ಮಿದೇವಿ, ಉಮಾ, ರಾಜಮ್ಮ, ಜಯಲಕ್ಷ್ಮಿ, ಮಂಗಮ್ಮ, ನಾಗರತ್ನ, ಮತ್ತಿತರರು ಉಪಸ್ಥಿತರಿದ್ದರು..