Take a fresh look at your lifestyle.

ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆಯಾಗಲು ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರಾಗಲು ಕನಿಷ್ಠ 4ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು

0
post ad

ಬೆಂಗಳೂರು: ಗದಗ, ಹಾಸನ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌
ಮೂಲಕವೇ ಸಲ್ಲಿಸಬೇಕು.
ಅಂಗನವಾಡಿ ಕಾರ್ಯಕರ್ತೆಯಾಗಲು ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರಾಗಲು ಕನಿಷ್ಠ 4ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ಹಾಸನ
1) ಅಂಗನವಾಡಿ ಕಾರ್ಯಕರ್ತೆ: 21
2) ಅಂಗನವಾಡಿ ಸಹಾಯಕಿ: 80
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 30/01/2021
ಕೊನೆಯ ದಿನವಾಗಿರುತ್ತದೆ.

ದಕ್ಷಿಣ ಕನ್ನಡ
1) ಅಂಗನವಾಡಿ ಕಾರ್ಯಕರ್ತೆ: 15
2) ಅಂಗನವಾಡಿ ಸಹಾಯಕಿ: 45

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 06/02/2021 ಕೊನೆಯ ದಿನವಾಗಿರುತ್ತದೆ.

ಗದಗ
1) ಅಂಗನವಾಡಿ ಕಾರ್ಯಕರ್ತೆ: 20
2) ಅಂಗನವಾಡಿ ಸಹಾಯಕಿ: 103
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 08/02/2021 ಕೊನೆಯ ದಿನವಾಗಿರುತ್ತದೆ.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು
1. ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿ(ಆನ್‌ಲೈನ್‌)
2. ಜನನ ಪ್ರಮಾಣ ಪತ್ರ /ಜನ್ಮದಿನಾಂಕ ಇರುವ
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
3. ತಹಶೀಲ್ದಾರರು /ಉಪತಹಶೀಲ್ದಾರರು ಪಡೆದ 1
ವರ್ಷದೊಳಗಿನ ವಾಸಸ್ಥಳ ದೃಢೀಕರಣ
4. ಅಗತ್ಯ ಶೈಕ್ಷಣಿಕ ದಾಖಲೆ ಪತ್ರಗಳುನ್ನು ಲಗತ್ತಿಸಬೇಕು.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವುದು.
ವೆಬ್‌ಸೈಟ್‌: https://anganwadirecruit.kar.nic.in/