Take a fresh look at your lifestyle.

ಮಾರ್ಚ್ 1ಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಸಮಗ್ರ ಬಾಲವಿಕಾಸ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ / ಸಹಾಯಕಿಯರ ನಿವೃತ್ತಿ ವೇತನ ಹಾಗೂ ಇತರೆ ಬೇಡಿಕೆಗಳನ್ನು ಒತ್ತಾಯಿಸಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ನಡೆಯಲಿದೆ.

0
post ad

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯು ಪ್ರತಿಭಟನೆಗೆ ಕರೆ ನೀಡಿದೆ.
ಮಾರ್ಚ್ 1 ಸೋಮವಾರದಂದು ಬೆಳಗ್ಗೆ 10-00ಕ್ಕೆ ಆನಂದ್‌ರಾವ್‌ ಸರ್ಕಲ್ ಬಳಿಯ ಮೌರ್ಯ ವೃತ್ತದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿದೆಡೆಗಳಿಂದ ಆಗಮಿಸುವ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಯಾವುದೇ ಮೆರವಣಿಗೆಯನ್ನು ಏರ್ಪಡಿಸದೆ, ಕೇವಲ ಸಾಮಾಜಿಕ
ಅಂತರ ಕಾಪಾಡಿಕೊಂಡು ಮಾಸ್ಕ್‌ ಕಡ್ಡಾಯವಾಗಿ ಹಾಕಿಕೊಂಡು ಪ್ರತಿಭಟನೆಯಲ್ಲಿ ಹಾಜರಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಹಾಮಂಡಳಿ ತಿಳಿಸಿದೆ.

ಕರ್ನಾಟಕ ರಾಜ್ಯದಲ್ಲಿ 204 ಸಮಗ್ರ ಶಿಶು ಅಭಿವೃ ದ್ಧಿ ಯೋಜನೆಗಳು ಇವುಗಳಲ್ಲಿ 181 ಗ್ರಾಮಾ೦ತರ, 11 ನಗರ ಹಾಗೂ 12 ಬುಡಕಟ್ಟು ಯೋಜನೆಗಳಿವೆ. ಇವುಗಳಲ್ಲಿ 61,187 ಅಂಗನವಾಡಿ ಕೇಂದ್ರಗಳು, 3331 ಮಿನಿ ಅಂಗನವಾಡಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. 1,28,000/- ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ನಿವೃತ್ತಿಯಾಗುತ್ತಿದ್ದು ಅವರಿಗೆ ಹಿಂದೆ ಸರ್ಕಾರ ನೀಡುತ್ತಿದ್ದ ಇಡಿಗಂಟು ಸಹ ಇಲ್ಲದೇ ನಿವೃತ್ತಿಯಾಗುತ್ತಿದ್ದಾರೆ. ಈ ನಿವೃತ್ತಿಯಾದ
ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ಪ್ರತಿ ದಿನ 2 ಹೊತ್ತಿನ ಗಂಜಿ ಇಲ್ಲದೇ ಅನಾರೋಗ್ಯದಿಂದ ವೈದ್ಯಕೀಯ ಸವಲತ್ತು ಇಲ್ಲದೇ ಅನಾಥರಾಗಿದ್ದಾರೆ. ಇವರ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ.

ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ್‌ ನೇತೃತ್ವದ ಉನ್ನತ ಸಮಿತಿ ಮಾಡಿದ ಸಲಹೆಗಳನ್ನು ಸಹ ರಾಜ್ಯದಲ್ಲಿ ಸ ಸಮರ್ಪಕವಾಗಿ. ಅನುಷ್ಠಾನಗೊಳಿಸಿಲ್ಲ. ಹಿಂದೆ ಸಚಿವೆಯಾಗಿದ್ದ ಉಮಾಶ್ರೀಯವರ ಕಾಲದಲ್ಲಿ ಸಮಗ್ರ ಬಾಲ ವಿಕಾಸ ಯೋಜನೆ ಸಂಪೂರ್ಣವಾಗಿ ರಾಜ್ಯದಲ್ಲಿ ಹಳ್ಳ ಹಿಡಿದಿದೆ. ಇವರ ಅವೈಜ್ಯಾನಿಕ ತೀರ್ಮಾನಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ಹಾಗೂ ಲಕ್ಷಾಂತರ
ಫಲಾನುಭವಿಗಳಿಗೆ ತೊಂದರೆಯಾಗಿರುವ ಬಗ್ಗೆ ಸರ್ಕಾರಕ್ಕೆ ನಿರಂತರವಾಗಿ ಮನವಿ ಹಾಗೂ ಹೋರಾಟ ನಡೆಸಿದರು ಇಲ್ಲಿಯವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಾಮಂಡಳಿಯ ಅಧ್ಯಕ್ಷ ಜಿಆರ್ ಶಿವಶಂಕರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲ ವಿಕಾಸ ಯೋಜನಾಧಿಕಾರಿಗಳು,
ಮೇಲ್ವಿಚಾರಕರು, ಉಪ ನಿರ್ದೇಶಕರುಗಳು ಇಲ್ಲದೇ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಆಯ್ಕೆಯಲ್ಲಿ ಲಕ್ಷಾಂತರ ರೂ.ಲಂಚ ಪಡೆಯುತ್ತಿರುವುದಾಗಿ ಮಹಾಮಂಡಳಿಯ ಪದಾಧಿಕಾರಿಗಳು ಆರೋಪಿಸಿದ್ದಾರೆ. ಭ್ರಷ್ಟ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ /ಸಹಾಯಕಿಯರ ಆಯ್ಕೆಯಲ್ಲಿ ಲಕ್ಷಾಂತರ ಲಂಚ ಪಡೆದರು ಸರ್ಕಾರ ಇವರ ಮೇಲೆ ಯಾವುದೇ ಸೂಕ್ತ ಕ್ರಮವಹಿಸಿಲ್ಲ. ಬಹುತೇಕ ಯೋಜನೆಗಳಲ್ಲಿ ಮೇಲ್ವಿಚಾರಕಿಯರೇ ಬಾಲ ವಿಕಾಸ ಯೋಜನಾಧಿಕಾರಿಗಳಾಗಿದ್ದು ನಿರಂತರವಾಗಿ ಯೋಜನೆಗಳಲ್ಲಿ ಲೂಟಿ ಮಾಡುತ್ತಿದ್ದು ಯೋಜನೆಗಳು ಹಳ್ಳ ಹಿಡಿದಿವೆ.
ಮೇಲಾಧಿಕಾರಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಸಹಕಾರ ನೀಡುತ್ತಿರುವುದನ್ನು
ಖಂಡಿಸಿ, ಸಮಗ್ರ ಬಾಲ ವಿಕಾಸ ಯೋಜನೆ ಉಳಿಸಿ ಶೀರ್ಷಿಕೆಯೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ಸೋಮವಾರದಂದು ರಾಜ್ಯದಾಧ್ಯಂತ ಪ್ರತಿಭಟನೆ ನಡೆಸಲಿದ್ದಾರೆ.
ಮಹಾಮಂಡಳಿಯ ಹಕ್ಕೊತ್ತಾಯಗಳು ;
* ರಾಜ್ಯದಲ್ಲಿ ನಿವೃತ್ತಿಯಾದ ಹಾಗೂ ನಿವೃತ್ತಿಯಾಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು
ಕಳೆದ 35 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿ ಇಂದು ಬೀದಿ ಪಾಲಾಗಿದ್ದಾರೆ. ಇವರಿಗೆ ತಾವೇ ಹಿಂದೆ ನೀಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000/-, ಸಹಾಯಕಿಯರಿಗೆ 30,000/- ಹಿಡಿಗಂಟು ನೀಡುತ್ತಿದ್ದು ಅದನ್ನು ಹಿಂದೆ ಇದ್ದ ಸರ್ಕಾರ ನಿಲ್ಲಿಸಿ ಹಾಲಿ ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ಹಿಡಿಗಂಟಾಗಲೀ, ನಿವೃತ್ತಿ ವೇತನವಾಗಲೀ ನೀಡುತ್ತಿಲ್ಲ. ತಾವು ಕೂಡಲೇ ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ತಾವೇ ನೀಡುತ್ತಿದ್ದ
ಹಿಡಿಗಂಟು ಹಾಗೂ ನಿವೃತ್ತಿ ವೇತನ ನೀಡಬೇಕೆಂದು ಒತ್ತಾಯ
* ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ಬರುವ ಬಜೆಟ್‌ನಲ್ಲಿ ವೇತನವನ್ನು ಹೆಚ್ಚಳ ಮಾಡಬೇಕು.
* ಕರ್ನಾಟಕ ರಾಜ್ಯದಲ್ಲಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಸ್ಥಿತಿ ನಿರೀಕ್ಷೆಗೂ ಮೀರಿದಷ್ಟು ತೊಂದರೆಯಲ್ಲಿದ್ದು ಬೀದಿಪಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ನಿವೃತ್ತಿಯಾದ ಈ ಮಹಿಳೆಯರಿಗೆ ಪಿಂಚಣಿ ಹಾಗೂ ವೈದ್ಯಕೀಯ ಸವಲತ್ತನ್ನು ಕೂಡಲೇ ಜಾರಿಗೆ ತರಬೇಕು.
* ಮಾತೃಪೂರ್ಣ ಯೋಜನೆಯ ಬಗ್ಗೆ ಸರ್ಕಾರ ಸಮಗ್ರವಾಗಿ ಅಧ್ಯಯನ, ಸಮೀಕ್ಷೆ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಫಲಾನುಭವಿಗಳ ಹಿತದೃಷ್ಠಿಯಿಂದ ಹಾಲಿ ಚಾಲ್ತಿಯಲ್ಲಿದ್ದ ಟೇಕ್‌ಹೋಂ (ಪೌಷ್ಠಿಕ ಆಹಾರ) ವನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಬೇಕು ಅಥವಾ ಆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು.
* ಅಂಗನವಾಡಿ ಕೇಂದ್ರಗಳ ಕೆಲಸದ ವೇಳೆಯನ್ನು ಹಿಂದೆ ಇದ್ದ ಬೆಳಗ್ಗೆ 9-30 ರಿಂದ ಮಧ್ಯಾಹ್ನ 1-30 ರವರೆಗೆ ನಡೆಸುವಂತೆ ಸರ್ಕಾರ ಆದೇಶಿಸಬೇಕು.
* ಮಿನಿ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಸಹಾಯಕಿಯನ್ನು ನೇಮಿಸುವುದಲ್ಲದೇ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರನ್ನು ಯೋಜನೆಯಲ್ಲಿ ಖಾಲಿಯಾದ ಸ್ಥಳಗಳಿಗೆ ಅಂಗನವಾಡಿ
ಕಾರ್ಯಕರ್ತೆಯಾಗಿ ನೇಮಿಸಬೇಕು.
* ಕರ್ನಾಟಕ ರಾಜ್ಯದ ಎಲ್ಲಾ ಸಮಗ್ರ ಬಾಲ ವಿಕಾಸ ಯೋಜನೆಯಲ್ಲಿ ಕಳೆದ 5 ವರ್ಷಕ್ಕೆ ಮೇಲ್ಪಟ್ಟು ಕೆಲಸ ಮಾಡುತ್ತಿರುವ ಎಲ್ಲಾ ಮೇಲ್ವಿಚಾರಕಿಯರನ್ನು ವರ್ಗಾವಣೆ ಮಾಡಲು ಆದೇಶಿಸುವುದು.
* ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ನೀಡುತ್ತಿರುವ ಸಮವಸ್ತ್ರ ಕಳಪೆ ಮಟ್ಟದಿಂದ ಕೂಡಿದ್ದು ಆ ಕಳಪೆ ಮಟ್ಟದ ಸಮವಸ್ತ್ರವನ್ನು ವಾಪಸ್‌ ಪಡೆಯಬೇಕು.
* ಈಗಾಗಲೇ ಮಹಿಳಾ ಮತ್ತು ಮಕ್ಕಳಿ ಸಚಿವೆಯರು ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ಮಾಡುವ ಬಗ್ಗೆ ಘೋಷಿಸಿರುವುದರಿಂದ ಅದನ್ನು ಜಾರಿಗೊಳಿಸಬೇಕು.