Take a fresh look at your lifestyle.

ಸಂಧಾನ ವಿಫಲ, ಮುಂದುವರೆದ ಕಾರ್ಮಿಕರ ಪ್ರತಿಭಟನೆ

ಕಾರ್ಮಿಕ ಇಲಾಖೆ ನಡೆಸಿದ ರಾಜೀ ಸಂಧಾನ ಸಭೆಯು ವಿಫಲವಾದ್ದರಿಂದ ಪಟ್ಟು ಬಿಡದ ನೌಕರರು ಹೋರಾಟವನ್ನು ಮುಂದುವರೆಸಿದ್ದಾರೆ

0
post ad

ರಾಮನಗರ : ಅರವಿಂದ್ ಕಾರ್ಖಾನೆಯ ಆಡಳಿತ ಮಂಡಳಿ ಲಾಕೌಟ್ಅನ್ನು ಘೋಷಿಸಿ ಏಕಾಏಕಿ ಘಟಕವನ್ನು ಮುಚ್ಚಿದ್ದನ್ನು ಖಂಡಿಸಿ ಕಾರ್ಮಿಕರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.


ನೆನ್ನೆ ಅಪರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ರಾಜೀ ಸಂಧಾನ ಸಭೆ ವಿಫಲವಾಗಿದ್ದರಿಂದ ಕಾರ್ಮಿಕರು ಆರನೇಯ ದಿನವಾದ ಇಂದು ಪ್ರತಿಭಟನಾ ಹೋರಾಟವನ್ನು ಮುಂದುವರೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ನೆನ್ನೆ ಸ್ಥಳೀಯ ಮಹಿಳೆಯರು ಸೇರಿ ಅತಂತ್ರವಾಗಿರುವ 66 ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯನ್ನು ಅವರ ಸಮಸ್ಯೆಯನ್ನು ಆಲಿಸಿದರು. ಸಂಸ್ಥೆಯ ಲಾಕೌಟ್ ಬಗೆಗೆ ಮನವಿ ಪತ್ರವನ್ನು ಕಾರ್ಮಿಕರು ನೀಡಿದರು.
GATWU ಪದಾಧಿಕಾರಿ ಎ.ಎಚ್. ಜಯರಾಮ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಮಿಕರ ಹೋರಾಟವನ್ನು ಕಾರ್ಮಿಕರು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ.
ರಾಮನಗರದ ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆಯನ್ನು ನೀಡದೇ ಲಾಕೌಟ್ ಘೋಷಿಸಿದ್ದ ಪ್ರಕರಣದ ಸಂಧಾನ ಸಭೆಗೆ ಆಡಳಿತ ಮಂಡಳಿಯ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿ ಬಾರದೇ ಇದ್ದರಿಂದ, ಅಪರ ಆಯುಕ್ತರು ಸೂಚಿಸಿದ ಪರಿಹಾರವನ್ನು ಕೊಡಲು ಆಡಳಿತ ಮಂಡಳಿ ತಿರಸ್ಕರಿಸಿದ್ದರಿಂದ ರಾಜೀ ಸಂಧಾನ ಸಭೆ ವಿಫಲಗೊಂಡಿದೆ.
ಇನ್ನು, ಹೋರಾಟವನ್ನು ತೀವ್ರತರಗೊಳಿಸಲು ಯೋಜಿಸಿರುವ ಪ್ರತಿಭಟನಾಕಾರರು ಮುಂದೆ ವಿಭಿನ್ನವಾಗಿ ಪ್ರತಭಟನೆಯನ್ನು ಮುನ್ನಡೆಸುವ ಸುಳಿವನ್ನು ನೀಡಿದರು.