Take a fresh look at your lifestyle.

ಕಾರ್ಮಿಕರ ಪ್ರತಿಭಟನೆ ಎಂಟನೇ ದಿನಕ್ಕೆ

ಕಾರ್ಮಿಕರಿಗೆ ಕಾನೂನು ಪ್ರಕಾರದ ಪರಿಹಾರವನ್ನು ನೀಡಲು ವಿಫಲವಾದ ಆಡಳಿತ ಮಂಡಳಿಯ ವಿರುದ್ಧ ನೌಕರರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

0
post ad

ರಾಮನಗರ : ಅಪರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ರಾಜೀ ಸಂಧಾನ ಸಭೆಯಲ್ಲಿ ಕಾರ್ಮಿಕರಿಗೆ ಕಾನೂನು ರೀತ್ಯಾ ಪರಿಹಾರವನ್ನು ನೀಡಲು ಒಪ್ಪಿಕೊಳ್ಳದ ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಆಡಳಿತ ಮಂಡಳಿ ವಿರುದ್ಧ
ಕಾರ್ಮಿಕರು ಇಂದು ಸಹ ಪ್ರತಿಭಟನಾ ಹೋರಾಟವನ್ನು ಮುಂದುವರೆಸಿದ್ದಾರೆ.

ಪರ್ಯಾಯ ಕೆಲಸ ಅಥವಾ ಸೂಕ್ತ ಪರಿಹಾರವನ್ನು ಕೇಳಿ ನೌಕರರು ಕಾರ್ಖಾನೆಯ ಮುಂದೆ ನಡೆಸುತ್ತಿರುವ ಹೋರಾಟವು ಎಂಟನೇ ದಿನಕ್ಕೆ ಕಾಲಿಟ್ಟಿದೆ.
ರಾಮನಗರದಲ್ಲಿ ಅರವಿಂದ್ ವಸ್ತ್ರ ಕಾರ್ಖಾನೆಯ ಆಡಳಿತ ಮಂಡಳಿ ಲಾಕೌಟ್ಅನ್ನು ಘೋಷಿಸಿ ಏಕಾಏಕಿ ಘಟಕವನ್ನು ಮುಚ್ಚಿದ್ದನ್ನು ಖಂಡಿಸಿ ಕಾರ್ಮಿಕರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಮಹಿಳೆಯರು ಸೇರಿ 66 ಕಾರ್ಮಿಕರು ಅತಂತ್ರವಾಗಿದ್ದರು. GATWU ಪದಾಧಿಕಾರಿ ಎ.ಎಚ್. ಜಯರಾಮ್ ಕಾರ್ಮಿಕರ ಹೋರಾಟಕ್ಕೆ ನೇತ್ರತ್ವವಹಿಸಿದ್ದು, ಕಾರ್ಮಿಕರು ಕಂಪೆನಿಯ ವಿರುದ್ಧ ಘೋಷಣೆ ಕೂಗಿದರು.
ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯುನಿಯನ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು
ಕಾರ್ಮಿಕರು ಉಪವಾಸ ಸತ್ಯಾಗ್ರಹ ಸೂಚನೆಯನ್ನು ನೀಡಿದ್ದಾರೆ.