Take a fresh look at your lifestyle.

ಮಳೆಯಲ್ಲೇ ಮುಂದುವರೆದ ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರಿಂದ ಪ್ರತಿಭಟನೆ

ಕಾರ್ಮಿಕ ಇಲಾಖೆಯ ಯಥಾಸ್ಥಿತಿ ಸೂಚನೆಯನ್ನು ಲೆಕ್ಕಿಸದ ಆಡಳಿತ ಮಂಡಳಿ, ಮಳೆಯನ್ನು ಲೆಕ್ಕಿಸದೇ ಕಾರ್ಮಿಕರ ಧರಣಿ ಮುಂದುವರಿಕೆ

0
post ad

ರಾಮನಗರ : ಅರವಿಂದ್ ಕಾರ್ಖಾನೆಯ ಕಾರ್ಮಿಕರು ಆಡಳಿತ ಮಂಡಳಿಯ ನಡೆ ಖಂಡಿಸಿ ನಾಲ್ಕನೇ ದಿನವಾದ ಇಂದೂ ಸಹ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಕಂಪನಿ ಶಾಶ್ವತ ಲಾಕ್ ಔಟ್ ಅನ್ನು ಘೋಷಿಸಿದ್ದರ ಪರಿಣಾಮ
ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರು ಜಿಟಿ ಜಿಟಿ ಮಳೆಯಲ್ಲೂ ಬೆಳಗ್ಗೆಯಿಂದಲೂ ಕಾರ್ಖಾನೆಯ ಮುಖ್ಯದ್ವಾರದಲ್ಲಿ ಕೂತು ತಮ್ಮ ಪ್ರತಿಭಟನಾ ಹೋರಾಟವನ್ನು ಮುಂದುವರೆಸಿದ್ದಾರೆ.


ರಾಮನಗರದ ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಆಡಳಿತ ಮಂಡಳಿ ಯಾವುದೇ ಸೂಚನೆಯನ್ನು ನೀಡದೇ ಸುಮಾರು 66 ಕಾರ್ಮಿಕರು ಕೆಲಸ ಮಾಡುತ್ತಿದ್ದ ಘಟಕವನ್ನು ಮುಚ್ಚಿದ್ದೇ ಪ್ರತಿಭಟನೆಗೆ ಕಾರಣವಾಗಿದೆ.
ದಶಕದಿಂದ ದುಡಿಯುತ್ತಿದ್ದ ಕಾರ್ಮಿಕರಿಗೆ ಸೂಲಿಬೆಲೆಯಲ್ಲಿ ನೂತನವಾಗಿ ಆರಂಭವಾಗುತ್ತಿರುವ ಘಟಕದಲ್ಲಿ ಕೆಲಸ ನೀಡಬೇಕು, ಇಲ್ಲವೇ ವಾರ್ಷಿಕ ಅರ್ಧ ವೇತನವನ್ನು ಪರಿಹಾರವಾಗಿಯಾದ್ರೂ ನೀಡಬೇಕು ಅಲ್ಲಿಯವರೆಗೆ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು GATWU ಪದಾಧಿಕಾರಿ ಎ.ಎಚ್. ಜಯರಾಮ್ ‘ವಾಯ್ಸ್ ಆಪ್ ವರ್ಕರ್ಸ್’ ಗೆ ತಿಳಿಸಿದರು.


ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯುನಿಯನ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು
ಅತಂತ್ರವಾಗರುವ ಕಾರ್ಮಿಕರು ಚಳಿ, ಬಿಸಿಲು, ಮಳೆ ಎನ್ನದೇ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.