Take a fresh look at your lifestyle.

ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ, ಸೌಜನ್ಯಕ್ಕಾದ್ರೂ ಬೇಟಿ ನೀಡದ ಕಾರ್ಮಿಕ ಅಧಿಕಾರಿಗಳು

ಕಾರ್ಮಿಕ ಇಲಾಖೆಯ ಸೂಚನೆಯನ್ನು ಪಾಲಿಸದ ಆಡಳಿತ ವರ್ಗದ ಕ್ರಮವನ್ನು ವಿರೋಧಿಸಿ ಕಾರ್ಮಿಕರ ಧರಣಿ ಮುಂದುವರೆದಿದ್ದು, ಸ್ಥಳಕ್ಕೆ ಬಾರದ ಕಾರ್ಮಿಕ ಅಧಿಕಾರಿಗಳು

0
post ad

ರಾಮನಗರ : ಅರವಿಂದ್ ಕಾರ್ಖಾನೆಯ ಕಾರ್ಮಿಕರು ಆಡಳಿತ ಮಂಡಳಿಯ ಲಾಕೌಟ್ ಕ್ರಮವನ್ನು ಖಂಡಿಸಿ ಕಳೆದ ಐದು ದಿನಗಳಿಂದ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಚಳಿ, ಬಿಸಿಲು, ಮಳೆಯೆನ್ನದೇ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಮಹಿಳೆಯರು ಸೇರಿ ಅತಂತ್ರವಾಗಿರುವ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಇಲ್ಲಿಯವರೆಗೂ ಕಾರ್ಮಿಕ ಅಧಿಕಾರಿಗಳು ಬೇಟಿ ನೀಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ನೆನ್ನೆ ಮಳೆಯನ್ನು ಲೆಕ್ಕಿಸದೇ ಕಾರ್ಮಿಕರು ನಡೆಸಿದ್ದ ಪ್ರತಿಭಟನೆ ಸಾಮಾಜಿಕ ಮಾಧ್ಯಮಗಳ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಕಾರ್ಮಿಕ ಅಧಿಕಾರಿಗಳಿಗೆ ಪ್ರತಿಭಟನೆಯ ವಿಚಾರವನ್ನು ಮುಟ್ಟಿಸಿದರೂ ಇಲ್ಲಿಯವರೆಗೆ ಯಾವ ಅಧಿಕಾರಿಯೂ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿಲ್ಲ, ಸೌಜನ್ಯಕ್ಕಾದರೂ ಕಾರ್ಮಿಕರ ಕಷ್ಟವನ್ನು ಕೇಳಲಿಲ್ಲ ಎಂದು GATWU ಪದಾಧಿಕಾರಿ ಎ.ಎಚ್. ಜಯರಾಮ್ ‘ವಾಯ್ಸ್ ಆಫ್ ವರ್ಕರ್ಸ್’ ಬಳಿ ಅಳಲು ತೋಡಿಕೊಂಡರು.
ರಾಮನಗರದ ಅರವಿಂದ್ ಲೈಫ್‌ಸ್ಟೈಲ್‌ ಬ್ರಾಂಡ್‌ ಲಿಮಿಟೆಡ್ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆಯನ್ನು ನೀಡದೇ ಸುಮಾರು 66 ಕಾರ್ಮಿಕರು ಕೆಲಸ ಮಾಡುತ್ತಿದ್ದ ಘಟಕವನ್ನು ಏಕಾಏಕಿ ಮುಚ್ಚಿದ್ದು, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ದಶಕದಿಂದ ದುಡಿಯುತ್ತಿದ್ದ ಕಾರ್ಮಿಕರಿಗೆ ಬೇರೆ ಘಟಕದಲ್ಲಿ ಕೆಲಸ ಅಥವಾ ಪರಿಹಾರ ಯಾವುದನ್ನು ನೀಡದೇ ಕಾರ್ಮಿಕರನ್ನು ಅತಂತ್ರಗೊಳಿಸಿರುವ ಬಗೆಗೆ ಹಲವು ಕಾರ್ಮಿಕ ಒಕ್ಕೂಟಗಳು ಆಕ್ರೋಶವನ್ನು ಹೊರಹಾಕಿವೆ.
ಇಂದು ಅಪರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀ ಸಂಧಾನ ಸಭೆ ನಡೆಯಲಿದ್ದು ಕಾರ್ಮಿಕರ ಭವಿಷ್ಯ ನಿರ್ಧಾರವಾಗಲಿದೆ.
ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯುನಿಯನ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು
ಕಾರ್ಮಿಕರು ಉಪವಾಸ ಸತ್ಯಾಗ್ರಹ ಸೂಚನೆಯನ್ನು ನೀಡಿದ್ದಾರೆ.