Take a fresh look at your lifestyle.

ಅರವಿಂದ್ ಗಾರ್ಮೆಂಟ್ಸ್ ಗೆ ಬೀಗಮುದ್ರೆ, ಬೀದಿಪಾಲಾದ ಕಾರ್ಮಿಕರಿಂದ ಮುಂದುವರೆದ ಪ್ರತಿಭಟನೆ

ಬೇರೆಡೆ ನೂತನ ಘಟಕವನ್ನು ಆರಂಭಿಸಿರುವ ಸಂಸ್ಥೆ ಲಾಕೌಟ್ ಗೆ ನಷ್ಟದ ಕಾರಣ ನೀಡುತ್ತಿರುವುದು ಯಕ್ಷ ಪ್ರಶ್ನೆಯಾಗಿದ್ದು, ಇದು ಕಾನೂನುಬಾಹಿರ ಲಾಕೌಟ್ ಎಂಬುದು ಮೇಲ್ನೋಟಕ್ಕೆ ಸಾಭೀತು

0
post ad

ರಾಮನಗರ : ಇಲ್ಲಿನ ಅರವಿಂದ್ ಬ್ರಾಂಡ್‌ ಲೈಫ್‌ಸ್ಟೈಲ್‌ ಲಿಮಿಟೆಡ್ ಕಂಪನಿ ಶಾಶ್ವತ ಲಾಕ್ ಔಟ್ ಅನ್ನು ಘೋಷಿಸಿದ್ದರ ಪರಿಣಾಮ ಗಾರ್ಮೆಂಟ್ಸ್ ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದಿದ್ದು, ಕಾರ್ಮಿಕರು ಎರಡನೇ ದಿನ ಕಾರ್ಖಾನೆಯ ಹೊರಗೆ   ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ತಾತ್ಕಾಲಿಕ ಲಾಕೌಟ್‌ ನ ನಂತರ ಸನಿಹದಲ್ಲೇ ಇರುವ ಅರವಿಂದ್  ಗಾರ್ಮೆಂಟ್ಸ್ ನ ಶಾಶ್ವತ ಬೀಗಮುದ್ರೆಗೆ ಕಾರ್ಮಿಕರು ಬಲಿಯಾಗಿದ್ದಾರೆ.

ರಾಮನಗರದ ಅರವಿಂದ್ ಬ್ರಾಂಡ್‌ ಲೈಫ್‌ಸ್ಟೈಲ್‌ ಲಿಮಿಟೆಡ್ ಕಾರ್ಖಾನೆಯಲ್ಲಿ ಸುಮಾರು 66 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಒಂದು ದಶಕದಿಂದ ದುಡಿಯುತ್ತಿದ್ದ ಕಾರ್ಮಿಕರಿಗೆ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ಬೀದಿಗೆ ತಳ್ಳಿದ ಆಡಳಿತ ವರ್ಗದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾರ್ಮಿಕರ ಧರಣಿ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕ ಇಲಾಖೆಯಲ್ಲಿ ರಾಜೀ ಸಂಧಾನ ಸಭೆ ನಡೆಯುತ್ತಿದ್ದು, ಬೀಗಮುದ್ರೆ ತೆರವಿಗೆ ಕಾರ್ಮಿಕ ಇಲಾಖೆ ಸೂಚನೆಯನ್ನು ನೀಡಿದ್ದರು, ಆಡಳಿತ ಮಂಡಳಿ ಅದನ್ನು ಪಾಲಿಸದೇ ಲಾಕ್ ಔಟ್ ಗೆ ಜೋತು ಬಿದ್ದಿದೆ.
ಕಾರ್ಮಿಕರು ಕಾನೂನು ರೀತ್ಯ ಸವಲತ್ತುಗಳನ್ನು ಕೇಳಿ,  ಖಾಯಂ ಮಾಡಬೇಕೆಂದು ಕಾರ್ಮಿಕ ಇಲಾಖೆಯಲ್ಲಿ ವ್ಯಾಜ್ಯ ಸಲ್ಲಿಸಿದನ್ನು ಆಡಳಿತ ಮಂಡಳಿ ಸಹಿಸಿಕೊಳ್ಳದೆ  ನಷ್ಟದ ಕಾರಣ ನೀಡಿ  ಕಾನೂನುಬಾಹಿರವಾಗಿ ಲಾಕೌಟ್ ಘೋಷಿಸಿದೆ ಎನ್ನಲಾಗುತ್ತಿದೆ.
ಈ ವಿಚಾರವಾಗಿ,  ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರ ಬಳಿ ಪ್ರಕರಣ ದಾಖಲಾಗಿದ್ದು, ರಾಜೀ ಸಂಧಾನ ಸಭೆ ನಡೆಯುತ್ತಿದೆ.
ಇದು ಕೈಗಾರಿಕಾ ವಿವಾದ ಕಾಯ್ದೆ, ಕಲಂ  33 ರ ಸ್ಪಷ್ಟ ಉಲ್ಲಂಘನೆ ಎಂಬುದು ಕಾರ್ಮಿಕರ ವಾದ.