Take a fresh look at your lifestyle.

ಆಶಾ ಕಾರ್ಯಕರ್ತೆಯರ “ಸೇವೆ ಮರೆತ ಸರ್ಕಾರ”!

ಆಶಾ ಕಾರ್ಯಕರ್ತೆಯರ ನೋವಿಗೆ ಬೆಲೆ ಇಲ್ಲ..? ಸೆ.21, 22 ಸೇವೆ ಇಲ್ಲ, 23ರಂದು ಹೋರಾಟಕ್ಕೆ ಸಜ್ಜು

0
post ad

ಬೆಂಗಳೂರು: ಕರೋನಾ ಕಾರಣದಿಂದ ಊರೂರು ಅಲೆಯುತ್ತ, ಜೀವ, ಜೀವನದ ಹಂಗು ತೊರೆದು ಕೆಲಸ ಮಾಡಿದ ಸಾವಿರಾರು ಮಂದಿ ಕರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಇನ್ನೂ ಈಡೇರಿಲ್ಲ. ಸರ್ಕಾರ ಮೂಗಿಗೆ ತುಪ್ಪ ಒರಿಸಿ ಇದೀಗ ಮಾತಿಗೆ ತಪ್ಪಿದೆ. ತಮ್ಮ ವಿವಿಧ ಬೇಡಿಕೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ತೋರಿರುವ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಸೆ.23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಬೃಹತ್‌ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈಗಾಗಲೇ 2 ಬಾರಿ ಪ್ರತಿಭಟನೆ ಮಾಡಿದರೂ ಸರ್ಕಾರ ಬಡ ಕಾರ್ಮಿಕರ ಕಡೆ ನೋಡಿಲ್ಲ. ತಮ್ಮ ರಾಜಕೀಯ ಆಟದಲ್ಲೇ ಎಲ್ಲರೂ ಮುಳುಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿಭಟನೆ ಹಿಂಪಡೆದು ಒಂದೂವರೆ ತಿಂಗಳು ಕಳೆದರೂ ಸರ್ಕಾರದ ಕಡೆಯಿಂದ ಯಾವ ಅಧಿಕೃತ ಘೋಷಣೆಯೂ ಬಾರದ ಕಾರಣ ಪುನಃ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಸೆ.21, 22ರಂದು ಎರಡು ದಿನಗಳ ಕಾಲ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ಸೆ.23ರಂದು ಬೃಹತ್‌ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ. ಈಗಾಗಲೇ ಎಲ್ಲಾ ಕಡೆ ಹೋರಾಟ ಶುರುವಾಗಿದೆ.
ಏನಿದು ಬೇಡಿಕೆ..? : ಜುಲೈನಲ್ಲಿ ಮಾಸಿಕ 12 ಸಾವಿರ ಗೌರವ ಧನ, ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣಾ ಪರಿಕರಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 20 ದಿನಗಳ ಮುಷ್ಕರ ನಡೆಸಿದ್ದರು. ಹಳ್ಳಿ ಹಳ್ಳಿಗಳಲ್ಲಿ ಬಿಡಿ ಗಾಸಿಗೆ ಕರೋನಾ ಸೋಂಕಿತರ ಪತ್ತೆ ಮಾಡಿ ಎಸಿ ಚೇಂಬರ್ ಅಲ್ಲಿ ಕುಳಿತ ದೊಡ್ಡ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದವರಿಗೆ ನ್ಯಾಯ ಸಿಗುವುದೇ ಕಾದು ನೋಡಬೇಕಿದೆ.