Take a fresh look at your lifestyle.

ಆಶಾದೀಪ ಯೋಜನೆ

0
post ad

ರಾಜ್ಯ ಸರ್ಕಾರವು ಖಾಸಗಿ ವಲಯದ ಕೈಗಾರಿಕೆಗಳು/ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಉದ್ಯೋಗವನ್ನು ಒದಗಿಸುವಂತೆ ಉದ್ಯೋಗದಾತರನ್ನು ಉತ್ತೇಜಿಸುವ ಸಲುವಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ “ಆಶಾದೀಪ ಯೋಜನೆ”ಯನ್ನು ಘೋಷಿಸಲಾಗಿತ್ತು.

ಈ ಯೋಜನೆಯಡಿ ಪ್ರಪ್ರಥಮವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರನ್ನು ಖಾಯಂ ಕೆಲಸಗಾರರಾಗಿ ನೇಮಿಸಿಕೊಳ್ಳುವ ಮಾಲೀಕರ ಪಾಲಿನ ಭವಿಷ್ಯ ನಿಧಿ ವಂತಿಕೆ ಹಾಗೂ ಕಾರ್ಮಿಕರ ರಾಜ್ಯ ವಿಮಾ (ಇ.ಎಸ್.ಐ) ವಂತಿಕೆಯನ್ನು ನೇಮಕ ಮಾಡಿದ ಮೊದಲ 2 (ಎರಡು) ವರ್ಷಗಳವರೆಗೆ ಹಾಗೂ ಗುತ್ತಿಗೆ ಕಾರ್ಮಿಕರಾಗಿ ನೇಮಿಸಿಕೊಂಡಲ್ಲಿ, 1 (ಒಂದು) ವರ್ಷದವರೆಗೆ ಮರು ಪಾವತಿಸುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
2018-19ನೇ ಸಾಲಿನಲ್ಲಿ ರೂ.3.24 ಕೋಟಿ ಮೊತ್ತ ಯೋಜನೆ ಅನುಷ್ಠಾನಕ್ಕಾಗಿ ಬಿಡುಗಡೆಯಾಗಿರುತ್ತದೆ. 2019-20ನೇ ಸಾಲಿನಲ್ಲಿ ರೂ.4.33 ಕೋಟಿ ಹಂಚಿಕೆಯಾಗಿದೆ.
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 1960 ರ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆಯಡಿ “ಕರ್ನಾಟಕ ಸ್ಟೇಟ್ ವರ್ಕರ್ಸ್ ವೆಲ್‍ಫೇರ್ ಅಂಡ್ ಸೋಷಿಯಲ್ ಸೆಕ್ಯೂರಿಟಿ (ಆಶಾದೀಪ ಯೋಜನೆ) ಸೊಸೈಟಿ”ಯನ್ನು ನೊಂದಾಯಿಸಲಾಗಿರುತ್ತದೆ.

ಪರಿಷ್ಕೃತ ಪ್ರಸ್ತಾವನೆಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್‍ಗಳಾಗಿ ನೇಮಕಗೊಂಡ ಟ್ರೈನೀಗಳಿಗೆ ನೀಡುವ ಪ್ರೋತ್ಸಾಹಧನವನ್ನು ನಿಗಧಿತ ಕಾಲಾವಧಿಗೆ ಉದ್ಯೋಗದಾತರಿಗೆ ಮರುಪಾವತಿಸುವುದು: ಈ ಯೋಜನೆಯಡಿ ಅಲ್ಪಾವಧಿ ಹಾಗೂ ಪೂರ್ಣಾವಧಿಗೆ (Short Term and Full Term Apprentice Trainees) ನಿಯೋಜಿಸಲಾಗುವ ಅಪ್ರೆಂಟಿಸ್ ಟ್ರೈನಿಗಳಿಗೆ ನೀಡುವ ಭತ್ಯೆಯ ಭಾಗಶಃ ಮೊತ್ತವನ್ನು ಉದ್ಯೋಗದಾತರಿಗೆ ಮರು ಪಾವತಿಸಲಾಗುತ್ತದೆ.
ಅಪ್ರೆಂಟಿಸ್ ಟ್ರೈನಿಂಗ್ ಮುಗಿದ ನಂತರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಖಾಯಂ ನೇಮಕಾತಿ ಮಾಡಿಕೊಂಡಲ್ಲಿ ಮಾಲಿಕರು ಅವರಿಗೆ ಪಾವತಿಸುವ ಭಾಗಶಃ ಮಾಸಿಕ ವೇತನವನ್ನು ಮರುಪಾವತಿಸುವುದು. ಪರಿಶಿಷ್ಟರಿಗೆ ಉದ್ಯೋಗ ಒದಗಿಸಲು ಖಾಸಗಿ ವಲಯದ ಮಾಲೀಕರಿಗೆ ಉತ್ತೇಜನ ನೀಡುವುದು.
ಯೋಜನೆಯ ಅನುಷ್ಠಾನದ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದ್ದು, ಎನ್‍ಐಸಿ ಸಹಕಾರದೊಂದಿಗೆ ಪ್ರತ್ಯೇಕ ಪೊರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆ ಶೀಘ್ರದಲ್ಲಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.