Take a fresh look at your lifestyle.

ಕಲ್ಲಿದ್ದಲು ಗಣಿಯಲ್ಲಿ 18 ಕಾರ್ಮಿಕರ ಸಾವು

ಚೀನಾದ ಕಲ್ಲಿದ್ದಲು ಗಣಿ ಉದ್ಯಮವು ಜಗತ್ತಿನ ಅತ್ಯಂತ ಮಾರಣಾಂತಿಕ ಅಪಾಯವಾಗಿ ಮಾರ್ಪಟ್ಟಿದೆ. ಇಲ್ಲಿ ವಾರ್ಷಿಕ 5,000ಕ್ಕೂ ಹೆಚ್ಚು ಸಾವುನೋವುಗಳು ಗಣಿ ದುರಂತಗಳಿಂದಲೇ ಸಂಭವಿಸುತ್ತವೆ

0
post ad

ಬೀಜಿಂಗ್‌: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ 23 ಕಾರ್ಮಿಕರ ಪೈಕಿ 18 ಜನ ಪ್ರಾಣ ಕಳೆದುಕೊಂಡಿದ್ದಾರೆ.
ದೇಶದ ನೈಋತ್ಯ ಭಾಗ ಗಣಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಅಧಿಕವಾಗಿದ್ದೇ ಗಣಿಕಾರ್ಮಿಕರು ಮೃತಪಡಲು ಕಾರಣವಾಗಿದೆ.
ಕಾರ್ಬನ್‌ ಮೊನೋಕ್ಸೈಡ್‌ ಪ್ರಮಾಣ ಹೆಚ್ಚಾಗಿದ್ದೇ ಇದಕ್ಕೆ ಕಾರಣ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಚಾಂಗ್‌ಖಿಂಗ್‌ ನ ಯಾಂಗ್‌ಚುವಾನ್‌ ಜಿಲ್ಲೆಯಲ್ಲಿರುವ ಡಿಯಾಶಿಡಾಂಗ್ ಗಣಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಡಿಯಾಶಿಡಾಂಗ್ ಗಣಿಯಲ್ಲಿ ಶುಕ್ರವಾರ ಸಂಭವಿಸಿದ ದುರಂತದ ನಂತರ ಒಬ್ಬ ಗಣಿ ಕಾರ್ಮಿಕ ಮಾತ್ರ ಜೀವಂತವಾಗಿ ಪತ್ತೆಯಾಗಿದ್ದ. ರಕ್ಷಣಾ ಸಿಬ್ಬಂದಿ ಇತರ ಐವರನ್ನು ಹುಡುಕುತ್ತಿದ್ದಾರೆ.
ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕ ರಕ್ಷಣೆಗೆ ಅಗ್ನಿಶಾಮಕ ಸೇವೆ ಮತ್ತು ಪೊಲೀಸರು ಅವಿರತ ಶ್ರಮವಹಿಸಿ ಪರಿಹಾರ ಕಾರ್ಯಾಚರಣೆ ನಡೆಸಿದ್ದರು. ಆದರೂ, 18 ಜನರ ಪ್ರಾಣ ರಕ್ಷಿಸುವುದು ಸಾಧ್ಯವಾಗಿಲ್ಲ.
ಚೀನಾದ ಕಲ್ಲಿದ್ದಲು ಗಣಿ ಉದ್ಯಮವು ಜಗತ್ತಿನ ಅತ್ಯಂತ ಮಾರಣಾಂತಿಕ ಅಪಾಯವಾಗಿ ಮಾರ್ಪಟ್ಟಿದೆ. ಇಲ್ಲಿ ವಾರ್ಷಿಕ 5,000ಕ್ಕೂ ಹೆಚ್ಚು ಸಾವುನೋವುಗಳು ಗಣಿ ದುರಂತಗಳಿಂದಲೇ ಸಂಭವಿಸುತ್ತವೆ.