Take a fresh look at your lifestyle.

ಕಾರ್ಮಿಕರ ಮರುನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ

ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಜಿಲ್ಲಾಡಳಿತವನ್ನು ಕಾರ್ಮಿಕರು ಒತ್ತಾಯಿಸಿದರು

0
post ad

ಮೈಸೂರು: ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರ ಮರುನೇಮಕಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು AT&S ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಕಾರ್ಮಿಕರು ಧರಣಿ ನಡೆಸಿದರು. ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ AT&S ಕಾರ್ಖಾನೆಯ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾರ್ಮಿಕರು ಧರಣಿಗೆ ಮುಂದಾಗಲು ಕಾರಣವೇನು?
ಕೊರೊನಾ ಸಂದರ್ಭದಲ್ಲಿ ರಜೆ ಕೇಳಿದ್ದಕ್ಕೆ AT&S ಕಾರ್ಖಾನೆ 71ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿತ್ತು ಎಂದು ನೌಕರರು ಆರೋಪಿಸಿದ್ದಾರೆ. ಸುಮಾರು 12 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕಂಪನಿ ಉದ್ಯೋಗದಿಂದ ಏಕಾಏಕಿ ವಜಾಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಇದೀಗ, ಕೆಲಸದಿಂದ ವಜಾಗೊಂಡ 71 ಕಾರ್ಮಿಕರ ಜೀವನ ದುಸ್ತರವಾಗಿದೆ. ಹಾಗಾಗಿ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ತಮ್ಮನ್ನು ಕಂಪನಿ ಮರುನೇಮಕಾತಿ ಮಾಡಿಕೊಳ್ಳೂವಂತೆ ಮಾಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಜೊತೆಗೆ,
ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು
ಜಿಲ್ಲಾಡಳಿತವನ್ನು ಕಾರ್ಮಿಕರು ಒತ್ತಾಯಿಸಿದರು.