Take a fresh look at your lifestyle.

ಟಿಕೆಎಂಇಯು ಹೋರಾಟಕ್ಕೆ ಬೆಂಗಳೂರು ವಕೀಲ ಸಂಘದ ಬೆಂಬಲ

ಮಾನವ ಸಂಪನ್ಮೂಲದ ಸಮಸ್ಯೆಯನ್ನೇ ಪರಿಷ್ಕರಿಸಲು ವಿಫಲವಾಗಿ ಎಬಿಸಿ' ಯಂತಹ ನೂರು ಯೋಜನೆಗಳನ್ನು ಜಾರಿಗೆ ತಂದರೂ ಬಂಡವಾಳಗಾರರಿಗೆ ಸರ್ಕಾರದ ಮೇಲೆ ನಂಬಿಕೆ ಹೇಗೆ ಮೂಡುತ್ತದೆ ಎಂಬ ಮಾತುಗಳು ಹೊರಬೀಳುತ್ತಿವೆ.. ಟೊಯೋಟ ಆಡಳಿತ ವರ್ಗದ ವಿರುದ್ಧ ಕಾರ್ಮಿಕರು ಹೋರಾಟದ ಭಾಗವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ...

0
post ad

ರಾಮನಗರ:  ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರ  ಹೋರಾಟಕ್ಕೆ  ಬೆಂಗಳೂರು ವಕೀಲ ಸಂಘ ಬೆಂಬಲ ಸೂಚಿಸಿದೆ.
ಟಿಕೆಎಂಇಯು ಸಂಘದ ಸ್ವಾಭಿಮಾನಿ ಹೋರಾಟ 46ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ವಕೀಲ ಸಂಘದ ಅಧ್ಯಕ್ಷರಾದ ಪಿ ರಂಗನಾಥ್ ಅವರು ಆಗಮಿಸಿ ವಕೀಲ ಸಂಘದ ಸಂಪೂರ್ಣ ಬೆಂಬಲವನ್ನು ಸೂಚಿಸಿದರು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ನ ಕಾರ್ಮಿಕ ಸಂಘದ ಪದಾಧಿಕಾರಿಗಳು ತಮ್ಮ ಹೋರಾಟದ ಭಾಗವಾಗಿ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.


ಸರ್ಕಾರ ಬಂಡವಾಳಗಾರರನ್ನು ರಾಜ್ಯಕ್ಕೆ ಆಹ್ವಾನಿಸಲು ಎಬಿಸಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ,  ಮಾನವ ಸಂಪನ್ಮೂಲದ ಸಮಸ್ಯೆಯನ್ನೇ ಪರಿಷ್ಕರಿಸಲು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಫಲವಾದರೆ, ಹೊಸ ಬಂಡವಾಳಗಾರರಿಗೆ ಸರ್ಕಾರದ ಮೇಲೆ ನಂಬಿಕೆ ಹೇಗೆ ಮೂಡುತ್ತದೆ ಎಂದು ಕಾರ್ಮಿಕ ವರ್ಗದಿಂದ ಮಾತುಗಳು ಕೇಳಿಬರುತ್ತಿವೆ.
ಟೊಯೋಟಾ ಸಂಸ್ಥೆ ಅಮಾನತು ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು, ನ್ಯಾಯಯುತವಾಗಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಬಿಗಿಪಟ್ಟು ಹಿಡಿದಿರುವ ಕಾರ್ಮಿಕರು ಸರ್ಕಾರ, ಕಾರ್ಮಿಕ ಇಲಾಖೆ ಏಕಪಕ್ಷೀಯ ನಡೆಯ ನಡುವೆಯೂ ತಮ್ಮ ಸ್ವಾಭಿಮಾನಿ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು ಇಂದು 65 ಕಾರ್ಮಿಕರ ಅಮಾನತ್ತು, 46 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.

ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ. ಈ ನಡುವೆ ಎಐಸಿಸಿಟಿಯು ಕಾರ್ಮಿಕ ಸಂಘಟನೆ ಇಂದು  ಕಾರ್ಮಿಕ ಭವನದ ಎದರು ಟೊಯೋಟಾ ಕಾರ್ಮಿಕರ ಪರ ಪ್ರತಿಭಟನೆಯನ್ನು ನಡೆಸಿತು.