Take a fresh look at your lifestyle.

ಅಂಗನವಾಡಿ ನೌಕರರಿಂದ ಬಿಬಿಎಂಪಿ ಚಲೋ

ಬೆಂಗಳೂರು ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು, ICDS ಮಾರ್ಗದರ್ಶಿ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರವಿರಬೇಕು, ಆದರೆ ಬೆಂಗಳೂರು ನಗರ ದಲ್ಲಿರುವುದು 1851 ಅಂಗನವಾಡಿ ಕೇಂದ್ರಗಳು ಮಾತ್ರ

0
post ad

ಬೆಂಗಳೂರು : ನಗರದಲ್ಲಿರುವ ಅಂಗನವಾಡಿಗಳ ಬಲವರ್ಧನೆಗಾಗಿ ಒತ್ತಾಯಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ನೌಕರರು ಬಿಬಿಎಂಪಿ ಚಲೋ ಹಮ್ಮಿಕೊಂಡಿದ್ದರು.
ಬೆಂಗಳೂರು ಮಹಾನಗರದಲ್ಲಿ ಮಕ್ಕಳ ಹಾಗೂ ಮಹಿಳೆಯರ ಅನಿಮಿಯಾ ಮತ್ತು ಅಪೌಷ್ಠಿಕತೆ, ಲಿಂಗ ತಾರತಮ್ಯದಂತಹ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಈ ಸಮಸ್ಯೆಗಳನ್ನು ತಡಗಟ್ಟಬೇಕಾದರೆ ICDS ಯಂತಹ ಪರಿಣಾಮಕಾರಿ ಯೋಜನೆಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ವರಲಕ್ಷ್ಮೀ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ‘ಬಿಬಿಎಂಪಿ ಚಲೋ’ ಕೈಗೊಂಡಿತ್ತು.

ಬೃಹತ್  ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಒತ್ತಾಯಿಸಿದರು.

ಬೆಂಗಳೂರು ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ICDS ಮಾರ್ಗದರ್ಶಿ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರವಿರಬೇಕು, ಆದರೆ ಬೆಂಗಳೂರು ನಗರ ದಲ್ಲಿರುವುದು 1851 ಅಂಗನವಾಡಿ ಕೇಂದ್ರಗಳು ಮಾತ್ರ, ಆದರೆ 6 ವರ್ಷ ದೊಳಗಿನ ಮಕ್ಕಳ ಸಂಖ್ಯೆ 4.16 ಲಕ್ಷ ಇದೆ. ICDS ಯೋಜನೆಗೆ ದಾಖಾಲಾಗಿರುವುದು 2.30 ಲಕ್ಷ ಮಕ್ಕಳು ಮಾತ್ರ ಅಂದರೆ 182 ಲಕ್ಷ (46%) ಮಕ್ಕಳು ದಾಖಲಾಗಿಲ್ಲ. ಆದ್ದರಿಂದ ರಾಜಧಾನಿ ಒಂದರಲ್ಲೇ 20 ಸಾವಿರ ಹೆಚ್ಚುವರಿ ಅಂಗನವಾಡಿ ಕೇಂದ್ರಗಳಿರಬೇಕು. ಇರುವ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯೂ ಚಿಂತಾಜನಕವಾಗಿದೆ.
ಬೆಂಗಳೂರು ನಗರದಲ್ಲಿ 2420 ಅಂಗನವಾಡಿ ಕೇಂದಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 1420 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ, 630 ಕೇಂದ್ರಕ್ಕೆ ಅಡುಗೆ ಮನೆ ಇಲ್ಲ , 2171 ಕೇಂದ್ರಕ್ಕೆ ಕೈತೋಟ ಇಲ್ಲ. 394 ಕೇಂದ್ರಕ್ಕೆ ಶೌಚಾಲಯ ವಿಲ್ಲ, 692 ಕಡೆ ನೀರಿನ ವ್ಯವಸ್ಥೆ ಇಲ್ಲ. 657 ಕಡೆ ವಿದ್ಯುತ್‌ ಸೌಲಭ್ಯ ಇಲ್ಲ, 1501 ಕೇಂದ್ರಕ್ಕೆ ಕಾಂಪೌಡ್‌ ಇಲ್ಲ. 1966 ಆಟದ ಮೈದಾನವಿಲ್ಲ. 964 ಕಡೆ ಫ್ಯಾನ್‌ ಇಲ್ಲ, ಏನು ಇಲ್ಲದೆ ಮಕ್ಕಳನ್ನು ಹೇಗೆ ಆಕರ್ಷಿಸಬೇಕು. ಮಕ್ಕಳನ್ನು ಹೇಗೆ ಸುಧಾರಿಸಬೇಕು? ಆದ್ದರಿಂದ 1005 ಯೋಜನೆಯನ್ನು ವಿಸ್ತರಿಸಬೇಕು. ಮತ್ತು ಇರುವ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಬೇಕು.
ಬೆಂಗಳೂರು ನಗರದ ಅಂಗನವಾಡಿ ಕೇಂದ್ರಗಳಲ್ಲಿರುವ ಕಾರ್ಯಕರ್ತೆಯರು ಅತೀವ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಿದೆ. ಹಲವಾರು ಕಡೆ ಸ್ಥಳದ ಕೊರತೆಯಿಂದ ಒಂದೇ ಕಡೆ 2 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಾತ್ರವಲ್ಲ ಇನ್ನು ಕೆಲವೆಡೆ ಒಂದೇ ಕೇಂದ್ರಕ್ಕೆ ನೂರಾರು ಮಕ್ಕಳು ಮತ್ತು ಫಲಾನುಭವಿಗಳು
ಬರುತ್ತಾರೆ. ಇನ್ನೂ ಕೆಲವಡೆ ಒಂದು ಕಿ.ಮೀಟರ್‌ಗೆ ಒಂದು ಅಂಗನವಾಡಿ ಕೇಂದ್ರವಿರುವುದು ಇದೆ. ಮಾತ್ರವಲ್ಲ ಒಂದೇ ಸ್ಥಳದಲ್ಲಿ ಪ್ರಾಜೆಕ್ಟ್‌ ಗಳಿಗೆ ಸೇರಿದ ಅಂಗನವಾಡಿ ಕೇಂದ್ರಗಳಿವೆ.
ಇದರಿಂದ ಅಂಗನವಾಡಿ ಕಾರ್ಯಕರ್ತೆಯರು , ಸಹಾಯಕಿಯರು ಮತ್ತು ಫಲಾನುಭವಿಗಳೂ ಕೂಡಾ ಕಛೇರಿಗೆ ಮತ್ತು ಸರ್ಕಲ್‌ ಸಭೆಗಳಿಗೆ ಹೋಗಿ ಬರುವುದೇ ಒಂದು ದುಸ್ಸಾಹಸವಾಗಿದೆ. ಆದ್ದರಿಂದ ಅಂಗನವಾಡಿ ಪ್ರಾಜೆಕ್ಟ್‌ ಗಳನ್ನು ಭೌಗೋಳಿಕ ಆಧಾರದಲ್ಲಿ ಮರುವಿಂಗಡನೆ ಮಾಡಬೇಕು. ಇಷ್ಟೆಲ್ಲಾ ಒತ್ತಡದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ.
ಸ್ವಂತ ಕಟ್ಟಡಗಳಲ್ಲದೆ ಬಾಡಿಗೆಯಲ್ಲಿ ಕೇಂದ್ರ ನಡೆಸಬೇಕಿದೆ. ಆರೇಳು ತಿಂಗಳಾದರೂ ಬಾಡಿಗೆ ಹಣ ಬಿಡುಗಡೆಯಾಗುವುದಿಲ್ಲ. ಬಾಡಿಗೆ ಹಣ ಬಿಡುಗಡೆಗೆ ಮಾನದಂಡಗಳನ್ನು ಹೇರಲಾಗುತ್ತಿದೆ. ತಿಂಗಳಿಗೆ ಸರಿಯಾಗಿ ಗೌರವಧನವು ಬಿಡುಗಡೆ ಆಗುವುದಿಲ್ಲ. ಇಂತಹ ಸಮಯದಲ್ಲಿ ಬಾಡಿಗೆ ಆಯಾಯ ತಿಂಗಳು ಬರಿಸುವುದು ಕಷ್ಟವಾಗಿದೆ. ಈ ವಿಚಾರವಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ನೀಡಿ ಗಮನಕ್ಕೆ ತರಲಾಗಿದೆ. ಆದರೂ ಸುಧಾರಣೆ ಕಂಡು ಬಂದಿರುವುದಿಲ್ಲ ಎಂಬ ಅಂಶಗಳನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಬಿಬಿಎಂಪಿ ಆಯುಕ್ತರಿಗೆ ವಿವರವಾದ ಪತ್ರವನ್ನು ಬರೆದಿದೆ.

ಅಂಗನವಾಡಿ ನೌಕರರ ಬೇಡಿಕೆಗಳು :

1. ನಗರದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
2. ಈಗಿರುವ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಹಣ ಕನಿಷ್ಠ 6 ಸಾವಿರ ದಿಂದ 15 ಸಾವಿರಕ್ಕೆ ಹೆಚ್ಚಿಸಬೇಕು. ಬಾಡಿಗೆ ಹಣ ನೀಡಲು ಇರುವ ಮಾನದಂಡಗಳನ್ನು ಸಡಿಲಗೊಳಿಸಬೇಕು.
3. ಬೆಂಗಳೂರು ಮಹಾನಗರ ಆಗಿರುವುದರಿಂದ ಜೀವನ ವೆಚ್ಚ ಹೆಚ್ಚಿರುವುದರಿಂದ NRHM ನೌಕರರಿಗೆ ಹೆಚ್ಚುವರಿ ಭತ್ಯೆಯನ್ನು ಕೊಡುವ ಹಾಗೆ ಅಂಗನವಾಡಿ ನೌಕರರಿಗೂ ಹೆಚ್ಚುವರಿ ಭತ್ಯೆಯನ್ನು ನೀಡಬೇಕು.
4. ಬೆಂಗಳೂರು ಅಕರ್ಷಿತ ಕೇಂದ್ರವಾಗಬೇಕಾದರೆ ಸ್ಲಂಗಳಿಂದ ಕೂಡಿರುವ ನಗರದಲ್ಲಿ ಅಪೌಷ್ಠಿಕತೆ ಮತ್ತು ಅನಿಮಿಯಾ ಕಡಿಮೆ ಮಾಡಲು ಹಾಗೂ ICDS ನ್ನು ಬಲಗೊಳಿಸಲು ಮಹಾನಗರ ಪಾಲಿಕೆಯ ಸಭೆಯಲ್ಲಿ ಪಶ್ಯೇಕ ಅಜೆಂಡಾ ಇಟ್ಟು ಚರ್ಚಿಸಬೇಕು.
5. ಭೌಗೋಳಿಕ ಆಧಾರದಲ್ಲಿ ICDS ಪ್ರಾಜೆಕ್ಟ್‌ಗಳನ್ನು ಪುನರ್‌ ರೂಪಿಸಬೇಕು.
6, ಅಂಗನವಾಡಿ ನೌಕರರಿಗೆ ನಡೆಸುವ ಇಲಾಖಾ ಸಭೆಗಳಿಗೆ ಟಿಎ-ಡಿಎ ಹೆಚ್ಚಿಸಬೇಕು.