Take a fresh look at your lifestyle.

ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಿಗೆ ಬೆಮೆಲ್ ಕಾರ್ಮಿಕರಿಂದ ಪ್ರತಿಭಟನೆಯ ಬಿಸಿ

ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಉದ್ದಟತನ ಮತ್ತು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಧೋರಣೆಗಳನ್ನು ಖಂಡಿಸಿ ಬಿಇಎಂಎಲ್ ನೌಕರರು ಪ್ರತಿಭಟನೆಗೆ ನಡೆಸಿದರು

0
post ad

ಬೆಂಗಳೂರು : ಬಿಇಎಂಎಲ್ ಕಾರ್ಖಾನೆಗೆ ಇಂದು ಬೇಟಿ ನೀಡಿದ್ದ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆರವರಿಗೆ ಬೆಮೆಲ್ ಕಾರ್ಮಿಕ ಸಂಘ & ಕನ್ನಡ ಸಂಘಗಳು ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಲು ಮುಂದಾಗಿದ್ದವು.
ಬಿಇಎಂಎಲ್ ಕಾರ್ಮಿಕ ಸಂಘ ಹಾಗೂ ಕನ್ನಡ ಸಂಘ ಬೆಳಗಾವಿ ಗಡಿವಿವಾದ ವಿಚಾರವಾಗಿ ಪ್ರತಿಭಟನೆಯನ್ನು ಮಾಡಲಾಯಿತು.
ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಉದ್ದಟತನ ಮತ್ತು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಧೋರಣೆಗಳನ್ನು ಖಂಡಿಸಿ ಬಿಇಎಂಎಲ್ ನೌಕರರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಬೆಮೆಲ್ ಕಾಂಪ್ಲೆಕ್ಸ್ ನ ಆವರಣದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಮಿಕರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ದಿಕ್ಕಾರ ಹಾಕಿದರು.
ಕರ್ನಾಟಕ ಆಕ್ರಮಿಕ ಪ್ರದೇಶಗಳನ್ನು ಮರು ಮಹಾರಾಷ್ಟ್ರಕ್ಕೆ ವಶಪಡಿಸಿಕೊಳ್ಳುವ ಮಾತುಗಳನ್ನಾಡಿದ್ದ ಮಹಾರಾಷ್ಟ್ರ ಸಿಎಂ, ಕರ್ನಾಟಕವನ್ನು ಎರಡು ಭಾಗಗಳಾಗಿ ವಿಂಗಡಿಸಬೇಕು ಎಂದಿದ್ದ ನಗರಾಭಿವೃದ್ಧಿ ಸಚಿವರು ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದರು. ಇದರಿಂದ ಕರ್ನಾಟಕದಲ್ಲಿ ಭಾಷಾ ಸ್ವಾಭಿಮಾನದ ಕಿಚ್ಚು ಹೊತ್ತಿಕೊಂಡಿತ್ತು.
ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ದರ್ಪದ ಧೋರಣೆಗಳು ರಾಜ್ಯಗಳ ನಡುವೆ, ನಾಗರೀಕರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ. ಇವು ದೇಶದ ಏಕತೆಗೆ ದಕ್ಕೆ ತರುತ್ತವೆ ಎಂದು ಬೆಮೆಲ್ ಕಾರ್ಮಿಕ ಮುಖಂಡರಾದ ದೊಮ್ಮಲೂರು ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಲೋಕೇಶ್ ರೆಡ್ಡಿ, ಕಾರ್ಮಿಕ ಸಂಘದ ಕಾರ್ಯದರ್ಶಿಗಳಾದ ಮಹೇಶ್ ರವರು ಮಹಾರಾಷ್ಟ್ರದ ನಿಲುವನ್ನು ಖಂಡಿಸಿದರು.

ಬಿಇಎಂಎಲ್ ಕಾರ್ಖಾನೆಯ ಬೇಟಿಗೆ ಸಚಿವರು ಬೆಂಗಳೂರು ಸಂಕೀರ್ಣಕ್ಕೆ ಆಗಮಿಸಿದ್ದರು. ಈ ವೇಳೆ ಸಚಿವರಿಗೆ ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಲು ಕಾರ್ಮಿಕ ಸಂಘ ಮುಂದಾದಾಗ ಪೊಲೀಸರ ಮಧ್ಯ ಪ್ರವೇಶದಿಂದ, ಸಚಿವರ ವಿರುದ್ಧ ದಿಕ್ಕಾರದ ಕೂಗುಗಳನ್ನು ಕೂಗಿ, ಆಕ್ರೋಶ ಹೊರಹಾಕಿದರು.