Take a fresh look at your lifestyle.

ಬಿಇಎಂಎಲ್ ಅನ್ನು ಖಾಸಗೀಕರಣ ಮಾಡದಂತೆ ರಕ್ಷಣಾ ಸಚಿವರಿಗೆ ಮನವಿ

ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಸಮನ್ವಯ ಸಮಿತಿಯ ಪದಾಧಿಕಾರಿಗಳು ರಕ್ಷಣಾ ಸಚಿವರಿಗೆ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ಮಾಡದಂತೆ ಮನವಿ ಪತ್ರವನ್ನು ನೀಡಿ, ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಖಾಸಗೀಕರಣದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು

0
post ad

ಬೆಂಗಳೂರು : ಲಾಭದಾಯಕ ಪಥದಲ್ಲಿ ಸಾಗುತ್ತಾ, ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಬಿಇಎಂಎಲ್ ಕಂಪನಿಯನ್ನು ಖಾಸಗೀಕರಣ ಮಾಡದಂತೆ ಕಾರ್ಮಿಕ ಸಂಘವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರಿಗೆ ಮನವಿ ಪತ್ರವನ್ನು ನೀಡಿತು.
ಚಾಲಕರಹಿತ ಮೆಟ್ರೋ ಕಾರ್‌ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಬೆಂಗಳೂರಿನ ಬಿಇಎಂಎಲ್‌ ಕಾರ್ಖಾನೆಗೆ ಭೇಟಿ ನೀಡಿದ್ದರು.

ಭಾರತದಲ್ಲಿ ಇದೇ ಮೊದಲ ಬಾರಿಗೆ ಚಾಲಕರಹಿತ ಮೆಟ್ರೋ ಕಾರನ್ನು ಬಿಇಎಂಎಲ್ ಸಂಸ್ಥೆ ತಯಾರಿಸಿದೆ. ಹೀಗೆ ದೇಶೀಯ ತಂತ್ರಜ್ಞಾನದಲ್ಲಿ ತಯಾರಾದ ಚಾಲಕರಹಿತ ಮೆಟ್ರೋ ಕಾರನ್ನು ರಕ್ಷಣಾ ಸಚಿವರು ಲೋಕಾರ್ಪಣೆ ಮಾಡಿದರು. ಈ ವೇಳೆ, ಸಂಸ್ಥೆಯ ಎಂಜಿನಿಯರ್‌ ಮತ್ತು ತಂತ್ರಜ್ಞರ ಕಾರ್ಯವನ್ನು ನೋಡಿ ನನಗೆ ಹೆಮ್ಮೆ ಎನಿಸಿತು. ಭಾರತವನ್ನು ಅತ್ಯಾಧುನಿಕತೆಯತ್ತ ಕೊಂಡೊಯ್ಯುತ್ತಿರುವ ಇಂಜಿನಿಯರ್ ಗಳೇ ಆತ್ಮನಿರ್ಭರ್‌ ಭಾರತದ ನಿಜವಾದ ಯೋಧರು ಎಂದು ಶ್ಲಾಘಿಸಿದರು.
ನಂತರ ರಕ್ಷಣಾ ಸಚಿವರಿಗೆ ಬಿಇಎಂಎಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಗೌರವ ಸೂಚಿಸಿದರು.

ಈ ವೇಳೆ ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಸಮನ್ವಯ ಸಮಿತಿಯ ಪದಾಧಿಕಾರಿಗಳು ರಕ್ಷಣಾ ಸಚಿವರಿಗೆ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ಮಾಡದಂತೆ ಮನವಿ ಪತ್ರವನ್ನು ನೀಡಿ, ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಖಾಸಗೀಕರಣದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಕರ್ನಾಟಕದಲ್ಲಿರುವ ಪ್ರಮುಖ ಸಾರ್ವಜನಿಕ ಉದ್ಯಮ ಬಿಇಎಂಎಲ್ ಆಗಿದ್ದು ಲಾಭದಾಯಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು, ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿದೆ. ಆದ್ದರಿಂದ ಸಚಿವರಿಗೆ ಈ ಬಗೆಗೆ ಕಾರ್ಮಿಕ ಸಂಘ ಮನವಿಯನ್ನು ಮಾಡಿಕೊಂಡಿತು.
ಕೇಂದ್ರ ಸರ್ಕಾರವು ಬೃಹತ್ ರಕ್ಷಣಾ ವಲಯದ ಉದ್ಯಮವಾದ ಬೆಮೆಲ್ ನ ತನ್ನ ಶೇಕಡ 54.03 ಷೇರಿನಲ್ಲಿ ಶೇಕಡ 26 ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಬಿಡ್ ಅನ್ನು ಕರೆದಿದ್ದು ಈಗಾಗಲೇ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವುದರಿಂದ ಹಾಗೂ ಈ ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹೋರಾಟದ ಹಾದಿ ತುಳಿದಿದ್ದಾರೆ.