Take a fresh look at your lifestyle.

ಬಿಇಎಂಎಲ್ ಬಗೆಗೆ ನಿಮಗೆಷ್ಟು ಗೊತ್ತು ?

ಖಾಸಗೀಕರಣಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರಿಂದ ಆಕ್ರೋಶ ಹೊರ ಬೀಳುತ್ತಿರುವ ಸಂದರ್ಭದಲ್ಲಿ ಬೆಮೆಲ್ ಸಂಸ್ಥೆಯ ಇತಿಹಾಸ, ಇತ್ತೀಚಿನ ವರ್ಷಗಳಲ್ಲಿ ವಹಿವಾಟು, ಪ್ರಶಸ್ತಿಗಳು ಸೇರಿದಂತೆ ಒಂದಷ್ಟು ಮಾಹಿತಿ ನಿಮಗಾಗಿ...

0
post ad

ಬೆಂಗಳೂರು : ಸಾರ್ವಜನಿಕ ಲಾಭದಾಯಕ ಉದ್ಯಮಗಳಲ್ಲೊಂದಾದ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಸಂಸ್ಥೆಗೆ ಸಂಬಂಧಿಸಿದಂತೆ, ತನ್ನ ಪಾಲಿನ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ.
ಸರ್ಕಾರ ಖಾಸಗಿಯವರಿಂದ ಶೇರ್ ಗಳಿಗೆ ಬಿಡ್ ಗಳನ್ನು ಆಹ್ವಾನಿಸುತ್ತಿದ್ದಂತೆ ಬೆಂಗಳೂರಿನ ತಿಪ್ಪಸಂದ್ರದಲ್ಲಿರುವ ಬೆಮೆಲ್ ಕಾಂಪ್ಲೆಕ್ಸ್ ನಲ್ಲಿ ನೌಕರರ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆಯ ಕಿಚ್ಚು ಹೊರಬಿದ್ದಿದ್ದು, ತಕ್ಷಣಕ್ಕೆ ಆವರಣದಲ್ಲಿಯೇ ನೌಕರರು ಪ್ರತಿಭಟಿಸಿದ್ದರು.
ಬಿ.ಇ.ಎಂ.ಎಲ್‌ ಕಾರ್ಮಿಕ ಸಂಘ, ಜಂಟಿ ಕ್ರಿಯಾ ರಂಗ, ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಸೇರಿದಂತೆ ಎಲ್ಲಾ ಬಿಇಎಂಎಲ್ ಕಾರ್ಮಿಕ ಸಂಘಟನೆಗಳು ಖಾಸಗೀಕರಣವನ್ನು ವಿರೋಧಿಸಿ ಪ್ರತಿಭಟನೆಯನ್ನು ಹಲವು ವರ್ಷಗಳಿಂದಲೂ ನಡೆಸುತ್ತಾ ಬಂದಿವೆ.
ಲಾಭದಾಯಕ ಸಾರ್ವಜನಿಕ ಸಂಸ್ಥೆಯನ್ನು ಖಾಸಗೀಕರಣ ಮಾಡಿರುವುದರಿಂದ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರುವ ಭಯ ಎದುರಾಗಿದೆ. ಸಂಸ್ಥೆ ಲಾಭದಾಯಕನಾ ಅಥವಾ ನಷ್ಟದಲ್ಲಿದೆಯಾ ಎಂಬುದನ್ನು ತಿಳಿಯಬೇಕಾದರೆ ಬೆಮೆಲ್ ಸಂಸ್ಥೆ ಬಗೆಗೆ ಸಮಗ್ರ ಮಾಹಿತಿಯನ್ನು ಅಭ್ಯಸಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿಯವರನ್ನು ‘ವಾಯ್ಸ್ ಆಫ್ ವರ್ಕರ್ಸ್’ ಸಂಪರ್ಕಿಸಿದಾಗ, ಅವರು ನೀಡಿದ ಮಾಹಿತಿ, ಸಂಸ್ಥೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ.

ಬಿ.ಇ.ಎಂ.ಎಲ್‌ ಬಗೆಗೆ ಸಂಕ್ಷಿಪ್ತ ವಿವರಣೆ :

* ಬಿ.ಇ.ಎಂ.ಎಲ್‌ ಸಂಸ್ಥೆಯು ಭಾರತ ಸರ್ಕಾರದ ರಕ್ಷಣಾವಲಯದ “ಮಿನಿರತ್ನ” ಸಾರ್ವಜನಿಕ ಉದ್ಯಮವಾಗಿದೆ (PSU).
* ರಕ್ಷಣಾವಲಯದ 9 ಸಂಸ್ಥೆಗಳಲ್ಲಿ  ಹೆಚ್‌.ಎ.ಎಲ್‌, ಬಿ.ಇ.ಎಲ್‌, ಬಿ.ಡಿ.ಎಲ್‌, ಮಿದಾನಿ, ಗೋವಾ ಶಿಪ್‌ಯಾರ್ಡ್, ಹಿಂದೂಸ್ತಾನ್ ಶಿಪ್‌ಯಾರ್ಡ್, ಜಿ.ಆರ್‌.ಎಸ್‌.ಇ ಜೊತೆಗೆ ಬಿ.ಇ.ಎಂ.ಎಲ್‌ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ.
* 1965ರಲ್ಲಿ ಬಿ.ಇ.ಎಂ.ಎಲ್‌ ಸಂಸ್ಥೆಯು 6 ಕೋಟಿ ಬಂಡವಾಳದೊಂದಿಗೆ ಪ್ರಾರಂಭವಾಗಿ, 5 ಕೋಟಿ ವಹಿವಾಟನ್ನು ಹೊಂದಿದ್ದು, ಈ ಸಂಸ್ಥೆ 2019-20 ಹಣಕಾಸು ವರ್ಷದಲ್ಲಿ 3,026 ಕೋಟ ರೂಪಾಯಿಗಳ ವಹಿವಾಟನ ಹಂತಕ್ಕೆ ತಲುಪಿದೆ.
* ಆರ್ಡರ್‌ 2019-20 ಹಣಕಾಸು ವರ್ಷದಲ್ಲಿ ರೂ. 9,795 ಕೋಟಿಯಷ್ಟು ಇತ್ತು.
* 2015-16 ಹಣಕಾಸು ವರ್ಷದಲ್ಲಿ 3,278 ಕೋಟಿ ರೂಪಾಯಿಗಳು ವಹಿವಾಟು ಮತ್ತು ನಿವ್ವಳ ಲಾಭ 64 ಕೋಟಿ
* 2016-17 ಹಣಕಾಸು ವರ್ಷದಲ್ಲಿ 2,829 ಕೋಟಿ ರೂಪಾಯಿಗಳ ವಹಿವಾಟು ಮತ್ತು ನಿವ್ಹಳ ಲಾಭ 85 ಕೋಟಿ
* 2017-18 ಹಣಕಾಸು ವರ್ಷದಲ್ಲಿ 3.299 ಕೋಟಿ ರೂಪಾಯಿಗಳ ವಹಿವಾಟು ಮತ್ತು ನಿವ್ವಳ ಲಾಭ 129 ಕೋಟ
* 2018-19 ಹಣಕಾಸು ವರ್ಷದಲ್ಲಿ 3,474 ಕೋಟಿ ರೂಪಾಯಿಗಳ ವಹಿವಾಟು ಮತ್ತು ನಿವ್ವಳ ಲಾಭ 63 ಕೋಟಿ
* 2019-20 ಹಣಕಾಸು ವರ್ಷದಲ್ಲಿ 3.026 ಕೋಟಿ ರೂಪಾಯಿಗಳ ವಹಿವಾಟು ಮತ್ತು ನಿವ್ಹಳ ಲಾಭ 64 ಕೋಟಿ
* 2016 ರಲ್ಲಿ ಷೇರು ಮೇಲಿನ ಡಿವಿಡೆಂಟ್‌ 15 ಕೋಟಿಯಿಂದ ಮುಂದುವರೆದು 2019-20ರ ಸಾಲಿನಲ್ಲಿ 40 ಕೋಟಿಗೆ ಏರಿಕೆಯಾಗಿದೆ. ಈವರೆಗೂ 930. ಕೋಟಿ ಮೊತ್ತದ ಡಿವಿಡೆಂಟನ್ನು ಭಾರತ ಸರ್ಕಾರಕ್ಕೆ ಸಂದಾಯಿಸಿದೆ.
* 1995-96ರ ಸಾಲಿನಲ್ಲಿ ಒಬ್ಬ ಕಾರ್ಮಿಕನ ಆದಾಯ ಉತ್ಪನ್ನ 6 ಲಕ್ಷರದ್ದು. ಈಗ 2019-20 ರ ಸಾಲಿನಲ್ಲಿ 50 ಲಕ್ಷಕ್ಕೆ ಆದಾಯ ಉತ್ಪನ್ನ ಏರಿಕೆಯಾಗಿದೆ.
* ಬಿ.ಇ.ಎಂ.ಎಲ್‌ ಸಂಸ್ಥೆಯ ಉತ್ಪಾದನೆಗಳು ಈ ರೀತಿ ಇವೆ.
1. ರಕ್ಷಣಾವಲಯ 2. ಗಣಿಗಾರಿಕೆ. 3. ರೈಲ್ವೆ ಮತ್ತು ಮೆಟ್ರೋ
* ಬಿ.ಇ.ಎಂ.ಎಲ್‌ನ ಉತ್ಪಾದನ ಘಟಕಗಳು ಬೆಂಗಳೂರು, ಕೋಲಾರ, ಮೈಸೂರು, ಪಾಲಕ್ಕಾಡ್ (ಕೇರಳ) ಹಾಗೂ ವಿಜ್ಞಾನ್‌ ಇಂಡಸ್ಟ್ರೀಸ್‌ (ತರೀಕೆರೆ).
* ಬಿ.ಇ.ಎಂ.ಎಲ್‌ ಸಂಸ್ಥೆಯು ತನ್ನ ಮಾರುಕಟ್ಟೆ ಮತ್ತು ಸೇವಾ ಸೌಲಭ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.
* ಬಿ.ಇ.ಎಂ.ಎಲ್‌ ಸಂಸ್ಥೆಯು 4206 ಕಾರ್ಮಿಕರು, 2061 ಅಧಿಕಾರಿಗಳು, 4,602 ಗುತ್ತಿಗೆ ಕಾರ್ಮಿಕರು ಹೂಂದಿದ್ದು ಒಟ್ಟಾರೆ 10,879 ಕಾರ್ಮಿಕರು ಮತ್ತು “ಅವಲಂಬಿತ ಕಾರ್ಮಿಕ ಕುಟುಂಬಗಳಿಗೆ ಹಾಗೂ 1200 ಸಣ್ಣ ಕೈಗಾರಿಕಾ ಘಟಕಗಳ ಪೊರೈಕೆದಾರರಿಗೆ ಸಂಸ್ಥೆ ಆಶ್ರಯವಾಗಿದೆ.
*  ರಕ್ಷಣಾ ಸಾರ್ವಜನಿಕ ಉದ್ಯಮ ಬಿ.ಇ.ಎಂ.ಎಲ್‌ ಯಾವಾಗಲೂ ದೇಶದ. ರಕ್ಷಣಾತ್ಮಕ ಭದ್ರತೆಯ ಅವಶ್ಯಕತೆಗಳಿಗೆ ಮುಂಚೂಣೆಯಲ್ಲಿ ಸ್ಪಂದಿಸುತ್ತಾ ರಕ್ಷಣಾ ಸಾಮಾಗ್ರಿಗಳಾದ ಟಾಟ್ರ ಟ್ರಕ್‌ಗಳನ್ನು ಮತ್ತು ವಿಮಾನಕ್ಕೆ ಯುದ್ಧ ಸಾಮಗ್ರಿಯನ್ನು ಅಳವಡಿಸುವ ವಾಹನ, ದುರಸ್ಥಿ ನಿರ್ವಹಣಾ ವಾಹನ. ಮಿಲ್ಲ್‌ ರೈಲ್‌ ವ್ಯಾಗನ್‌ಗಳು ಹಾಗೂ ಟ್ರೈಲರ್‌ಗಳನ್ನು ಉತ್ಪಾದಿಸಿ ಸರಬರಾಜು ಮಾಡುತ್ತಾ ಬಂದಿದೆ.
* ಪಿ.ಎಂ.ಎಸ್‌ ಬ್ರಿಡ್ಜ್‌, ಎಜೆಕ್ಟರ್‌ ಮತ್ತು ಏರ್‌ ಕ್ಷೀನರ್‌, ಎಂ.ಬಿ.ಟಿ ಟ್ಯಾಂಕಗಳಿಗೆ ಹಾಗೂ ಬಿ.ಎಂ.ಪಿ ಟ್ರಾನ್ಸ್‌ಮಿಷಿನ್‌ಗಳಿಗೆ ಬಿಡಿಬಾಗಗಳನ್ನು ಉತ್ಪಾದನೆ ಮಾಡಿ ಪೂರೈಸುತ್ತಿದೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಆಮದು ಮಾಡಿಕೊಳ್ಳತಿದ್ದ 100 ಬ್ಯಾರೆಲ್‌ಗಳನ್ನು ದೇಶಿಯವಾಗಿ ಅಭಿವೃದ್ಧಿಪಡಿಸಿ ಸರಬರಾಜು ಮಾಡುತ್ತಿದೆ.
* ಟಿ-72 ಯುದ್ಧ ಟ್ಯಾಂಕಿಗೆ ಸಂಭಂಧಪಟ್ಟಂತೆ ಬಿಡಿಬಾಗಗಳು ಹಾಗೂ ಹೊಸ ತಂತ್ರಜ್ಞಾನದೊಂದಿಗೆ 60 ಟನ್‌ಗಳಷ್ಟೂ ಸಾಮರ್ಥವುಳ್ಳ ದುರಸ್ಥಿವಾಹನಗಳಿಗೆ ಡಿಆರ್‌ಡಿಓ ಸಹಯೋಗದೊಂದಿಗೆ. ಆಕಾಶ್‌, ಪೃಥ್ವಿ, ತ್ರಿಶುಲ್‌, ಅಗ್ನಿ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಉಡಾವಣಾ ವಾಹನಗಳನ್ನು ತಯಾರಿಸಿ ರಕ್ಷಣಾ ಇಲಾಖೆಯ ಬೇಡಿಕೆ ಪೂರೈಸಿದೆ.
* ಈ ಹಿಂದೆ ದೇಶ ಎದುರಿಸಿದ 3 ಯುದ್ಧಗಳಲ್ಲಿ ಬಿ.ಇ.ಎಂ.ಎಲ್‌ ಕಾರ್ಖಾನೆಯು ರಕ್ಷಣಾ ಕ್ಷೇತ್ರದ ಬೇಡಿಕೆ ಮೇರೆಗೆ ವಿವಿದ ಯುದ್ಧ
ಸಾಮಾಗ್ರಿಗಳನ್ನ ಉತ್ಪಾದಿಸಿ ಸರಬರಾಜು ಮಾಡಿ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತದೆ.
* ಬಿ.ಇ.ಎಂ.ಎಲ್‌ ಕಾರ್ಖಾನೆಯು ಅತ್ಯಾಧುನಿಕ ಸುಸಜ್ಜಿತವಾದ ಸಂಶೋದನೆ ಮತ್ತು ಅಭಿವೃದ್ಧಿ ನಿಗಮವನ್ನು ಹೊಂದಿದ್ದು ರಕ್ಷಣೆ, ಗಣಿಗಾರಿಕೆ, ರೈಲ್ವೆ ಮತ್ತು ಮೆಟ್ರೋ ಉತ್ಪಾದನೆಗೆ ಸಂಬಂಧ ಪಟ್ಟಂತೆ ಹೊಸ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುತ್ತದೆ.
* ಸಂಸ್ಥೆಯ ಅಂತರರಾಷ್ಟ್ರೀಯ ಗುಟಮಟ್ಟದ ಐ.ಎಸ್‌.ಓ(150) ಪ್ರಮಾಣ ಪತ್ರವನ್ನು ಹೊಂದಿರುತ್ತದೆ.
* ಸಾರ್ವಜನಿಕ ರೈಲ್ವೆ ಸಾರಿಗೆಯ ವಿವಿದ ವಿನ್ಯಾಸದ ಉತ್ಪಾದನೆಗಳಾದ ರೈಲ್‌ ಕೋಚ್‌, ರೈಲ್‌ ಬಸ್, ಇ.ಎಂ.ಯು.ಎಸ್‌. ಡೆಮೋ, ಮೆಮೋ, ಎ.ಸಿ.ಎಂ.ಯುಗಳನ್ನು ಉತ್ಪಾದಿಸಿ ಭಾರತೀಯ ರೈಲ್ವೆಗೆ ಬೇಡಿಕೆಗನುಗುಣವಾಗಿ ಪೂರೈಸಿದೆ.
* ಅಲ್ಲದೆ ದೆಹಲಿ, ಬೆಂಗಳೂರು, ಜೈಪುರ, ಕೊಲ್ಕತ್ತ ಮೆಟ್ರೋ ರೈಲುಗಳನ್ನು ಸರಬರಾಜು ಮಾಡುತ್ತಿರುವ ಏಕಮಾತ್ರ ಸಂಸ್ಥೆ ಬೆಮೆಲ್‌ ಹಾಗೂ ರೂ. 15 ಕೋಟಿಗೆ ಹೊರ ದೇಶದಿಂದ ಆಮದು ಮಾಡುತ್ತಿದ್ದ ಕೇಂದ್ರ ಸರ್ಕಾರಕ್ಕೆ ಬಿಇಎಂಎಲ್‌ ರೂ 8 ಕೋಟಿಗೆ ಪೂರೈಕೆ ಮಾಡಿ ಸುಮಾರು ರೂ. 7 ಕೋಟಿ ವಿದೇಶಿ ಹಣವನ್ನು ಉಳಿಸಿದೆ.
* ಸಂಸ್ಥೆಯು ಅತ್ಯಂತ ನುರಿತ ಕಾರ್ಮಿಕರು ಹಾಗೂ ಅಧಿಕಾರಿಗಳನ್ನೊಳಗೊಂಡಿದ್ದು ದಕ್ಷಿಣ ಕೊರಿಯಾದ ಹುಂಡಯ್ಯ ರೊಟೆಮ್‌ ಕಂಪನಿಯಿಂದ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ಪಡೆದಿರುತ್ತಾರೆ.
*  ಬೆಮೆಲ್ ಕಂಪನಿಯು ಗಣಿಗಾರಿಕೆ ಸಂಬಂಧಪಟ್ಟಂತೆ ದೈತ್ಯಯಂತ್ರಗಳಾದ ವೀಲ್‌ ಲೋಡರ್ಸ್‌. ಎಕ್ಸ್‌ವೇಟರ್ಸ್‌, ಡ೦ಪರ್ಸ್‌ ಮತ್ತು ಡೋಜರ್ಸ್‌ ಪಸೆವೆಲ್ಸ್‌, ವಾಕಿಂಗ್‌, ಡ್ರಾಗ್‌ ಲೈನ್‌, ಇವುಗಳನ್ನು ಉತ್ಪಾದಿಸಿ, ಇದಕ್ಕಾಗಿ ಗುಣಮಟ್ಟದ ಅತ್ಯುತಮ ಪ್ರ ಪ್ರಶಸ್ತಿಯನ್ನು ಪಡೆದಿರುತ್ತದೆ.
* ಬೆಮೆಲ್‌ ಸಂಸ್ಥೆಯು 2016-17ರಲ್ಲಿ 15 ಕೋಟಿಗಳ ರೂಪಾಯಿಗಳ ರಪ್ತು ವೈಹಿವಾಟು ನಡೆಸಿದ್ದು, ಈಗಿನ ವಾರ್ಷಿಕ 350 ಕೋಟಿ ರೂಪಾಯಿಗಳ ರಪ್ತು ವಹಿವಾಟನ್ನು ಮುಂದುವರಿಸುತ್ತಿದೆ.
* 2001 ರಕ್ಷಣಾಮಂತ್ರಿ ಪ್ರಶಸ್ತಿ, 2012-13ರಲ್ಲಿ ಅತ್ಯುತಮ ರಪ್ತು ವಹಿವಾಟು ಪ್ರಶಸ್ತಿ, 2013-14ರಲ್ಲಿ ರಾಷ್ಟ್ರಪತಿಗಳಿಂದ ಅತ್ಯುತ್ತಮ ಸ್ಕೂಪ್‌ ಅವರ್ಡ್‌, ಮತ್ತು 2016ರ ರಲ್ಲಿ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ, ಟಾಪ್‌ ಚಾಲೆಂಜರ್‌ ಅವರ್ಡ್‌, ಉತ್ತಮ ಗುಣಮಟ್ಟದ ಮೆಟ್ರೋ ಕಾರ್‌ ಉತ್ಪಾದನಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಸಂಸ್ಥೆ ಪಡೆದಿರುತ್ತದೆ.

  ದೇಶದ ಭದ್ರತೆಗೆ ಸಂಬಂದ ಪಟ್ಟಂತೆ ತಾಯಿ ನಾಡಿನ ರಕ್ಷಣೆಯಲ್ಲಿ ಯಾವುದೇ ಸಮಯದಲ್ಲಿ ದೇಶದ ಭದ್ರತೆ, ಸಮಗ್ರತೆ, ಪ್ರಗತಿಗೆ ದಕ್ಕೆಬಾರದಂತೆ ಉತ್ತಮ ಉತ್ಪಾದನೆ ನೀಡುವುದರ ಮುಖಾಂತರ ಕಂಕಣಬದ್ದರಾಗಿ ಕಾರ್ಮಿಕರು ದುಡಿಯುತ್ತಿದ್ದಾರೆ.  ಸರ್ಕಾರ ಖಾಸಗೀಕರಣದ ಆದೇಶವನ್ನು   ಹಿಂದಕ್ಕೆ ಪಡೆಯುವಂತೆ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.