Take a fresh look at your lifestyle.

ಲೋಕ ರಕ್ಷಕ್ ಸಂಘಟನೆಯಿಂದ ರಕ್ತದಾನ ಶಿಬಿರ

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ರಕ್ತವನ್ನು ಬಳಸುವ ಉದ್ದೇಶದಿಂದ ಸಂಗ್ರಹ ಮಾಡುತ್ತಿರುವ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು

0
post ad

ಬೆಂಗಳೂರು : ಭ್ರಷ್ಟಾಚಾರ ವಿರೋಧಿ ಮತ್ತು ಮಾನವ ಹಕ್ಕುಗಳ ಸಂರಂಕ್ಷಣೆಗಾಗಿ ಸ್ಥಾಪನೆಗೊಂಡಿರುವ ಲೋಕ ರಕ್ಷಕ್ ಸಂಘಟನೆಯು ನಗರದಲ್ಲಿ ರಕ್ತ ತಪಾಸಣಾ ಮತ್ತು ರಕ್ತದಾನ ಶಿಬಿರ ವನ್ನು ಆಯೋಜಿಸಿತ್ತು.


ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ರಕ್ತವನ್ನು ಬಳಸುವ ಉದ್ದೇಶದಿಂದ ಸಂಗ್ರಹ ಮಾಡುತ್ತಿರುವ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಹಂಪಿನಗರದ ಲಯನ್ಸ್ ರಕ್ತ ನಿಧಿಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ನಾಗರಿಕರು ಸ್ವಯ ಪ್ರೇರಿತರಾಗಿ ರಕ್ತವನ್ನು ನೀಡಿದರು.
ಈ ವೇಳೆ ಶಿಬಿರದಲ್ಲಿ ಪಾಲ್ಗೊಂಡಿದ್ದ ದಾನಿಗಳಿಗೆ ಪ್ರಶಂಸಾಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ಅಡಿ ಬರುವ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಎಲೈಟ್ ಸಹಯೋಗದೊಂದಿಗೆ ಲೋಕ ರಕ್ಷಕ್ ಸಂಘಟನೆ ಈ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು.

ಭಾನುವಾರ ಬೆಳಗ್ಗೆ ಒಂಬತ್ತರಿಂದ ಮೂರು ಗಂಟೆಯ ವರೆಗೂ ನಡೆದ ಶಿಬಿರದಲ್ಲಿ ಸ್ಥಳೀಯರು ಸೇರಿದಂತೆ ನೂರಾರು ಜನರು ರಕ್ತವನ್ನು ನೀಡಿದರು.
ಕಾರ್ಯಕ್ರಮಕ್ಕೆ ಸಮಾಜ ಸೇವಕರು ಮತ್ತು ಮಾರುತಿ ಮೆಡಿಕಲ್ಸ್ ನ ಮಾಲೀಕರಾದ ಮಹೇಂದ್ರ ಮನೋತ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲೋಕ ಸೇವಕ್ ನ ಅಧ್ಯಕ್ಷರಾದ ಸತೀಶ್ ಚಂದ್ರ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ರಕ್ತವನ್ನು ದಾನ ಮಾಡಿದರು.