Take a fresh look at your lifestyle.

ಟೊಯೋಟಾ ಕಾರ್ಮಿಕರಿಂದ ರಕ್ತದಾನ ‘ಚಳವಳಿ’

ವಿಧಾನಸೌಧ ಚಲೋ, ರಾಜಭವನ ಚಲೋ, ಛತ್ರಿ ಚಳವಳಿ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ, ಬೃಹತ್ ಮಾನವ ಸರಪಳಿ ಸೇರಿದಂತೆ ವಿಭಿನ್ನ ಹೋರಾಟಗಳ ಮೂಲಕ ಟಿಕೆಎಂ ಕಾರ್ಮಿಕರು ರಾಷ್ಟ್ರದ ಗಮನ ಸೆಳೆಯುತ್ತಿದ್ದಾರೆ...

0
post ad

ರಾಮನಗರ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ಒತ್ತಡ ಹಾಗೂ ಅಮಾನವೀಯ ನಡೆಯ ವಿರುದ್ಧ ಟಿಕೆಎಂ  ಕಾರ್ಮಿಕರು ಇಂದು ರಕ್ತದಾನ ಚಳವಳಿಯನ್ನು  ರಕ್ತದಾನ ಶಿಬಿರದ ಮೂಲಕ ಹಮ್ಮಿಕೊಂಡಿದ್ದಾರೆ.
ವಿಭಿನ್ನ ರೀತಿಗಳಲ್ಲಿ ಪ್ರತಿಭಟನೆಯನ್ನು ಯೋಜಿಸಿ ಹೋರಾಟವನ್ನು ತೀವ್ರಗೊಳಿಸಿದ್ದ ಟಿಕೆಎಂ ಕಾರ್ಮಿಕರ ಸ್ವಾಭಿಮಾನಿ ಹೋರಾಟ ಇಂದು 50ನೇ ದಿನಕ್ಕೆ ಕಾಲಿರಿಸಿದೆ.

ವಿಧಾನಸೌಧ ಚಲೋ, ರಾಜಭವನ ಚಲೋ, ಛತ್ರಿ ಚಳವಳಿ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ, ಹಾಗೂ ಬೆಂಗಳೂರು – ಮೈಸೂರು ರಸ್ತೆಯಲ್ಲಿ ಬೃಹತ್ ಮಾನವ ಸರಪಳಿ ಸೇರಿದಂತೆ ಹಲವಾರು ರೀತಿಯ ವಿಭಿನ್ನ ಹೋರಾಟಗಳ ಮೂಲಕ ಹೋರಾಟ ರಾಷ್ಟ್ರದ ಗಮನ ಸೆಳೆದಿದ್ದ ಟಿಕೆಎಂ ಕಾರ್ಮಿಕರ ಸಂಘ ಇಂದು ರಕ್ತ ದಾನ ಚಳವಳಿಯನ್ನು ಆಯೋಜಿಸಿದೆ.
2016 ರಲ್ಲಿ ಜನವರಿ 9 ರಂದು ನಡೆದ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ತಮ್ಮ 7 ಜನ ಸಹೋದ್ಯೋಗಿಗಳ ನೆನಪಿನಾರ್ಥವಾಗಿ, ಪ್ರತಿವರ್ಷದಂತೆ ಈ ವರ್ಷವು ರಕ್ತದಾನ ಶಿಬಿರವನ್ನು ರಕ್ತದಾನ ಚಳವಳಿಯಾಗಿ ಮಾರ್ಪಡಿಸಿಕೊಂಡಿದೆ. ಅಂದರೆ ಸ್ವಾಭಿಮಾನಿ ಹೋರಾಟದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಟೊಯೋಟಾ ಕಂಪನಿಯಲ್ಲಿ ಸುಮಾರು 3500 ಕಾರ್ಮಿಕರಿದ್ದು, ಇದರಲ್ಲಿ 2000 ಮಂದಿ ರಕ್ತದಾನ ಮಾಡಲಿದ್ದು, ಈ ಶಿಬಿರವನ್ನು 3 ದಿನಗಳ ಕಾಲ ನಡೆಸಲಾಗುವುದು. ನಮ್ಮ ರಕ್ತ ನಿಧಿ ಕೇಂದ್ರದಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು ಇಂದು 65 ಕಾರ್ಮಿಕರ ಅಮಾನತ್ತು, 50 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಟಿಕೆಎಂಇಯು ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.
ಇನ್ನು, ವಿರೋಧ ಪಕ್ಷಗಳ ನಾಯಕರು ಬೆಂಬಲದ ನಡುವೆಯೂ ಸರ್ಕಾರದ ಆಡಳಿತ ಮಂಡಳಿಯ ಪರ ಏಕಪಕ್ಷೀಯ ನಡೆಯು ಕಾರ್ಮಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ.