Take a fresh look at your lifestyle.

ಕಟ್ಟಡ ಕಾರ್ಮಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾಗಿ ವಿರೂಪಾಕ್ಷಪ್ಪ ನೇಮಕ

ಸಂಘಟನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹರಡಿಸುವ ಪ್ರಯತ್ನದಲ್ಲಿ ಒಕ್ಕೂಟ ಹೆಜ್ಜೆ ಹಾಕುತ್ತಿದೆ

0
post ad

ಬೆಂಗಳೂರು : ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಒಕ್ಕೂಟವು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದು, ಒಕ್ಕೂಟದ
ವತಿಯಿಂದ  ಕೊಪ್ಪಳ ಜಿಲ್ಲೆಯ ಸಂಘಟನೆಯ  ಜಿಲ್ಲಾಧ್ಯಕ್ಷರನ್ನಾಗಿ ವಿರೂಪಾಕ್ಷಪ್ಪ ಎಂ ಕಮ್ಮಾರ್ ರವರನ್ನು ನೇಮಕ ಮಾಡಲಾಗಿದೆ.
ಕಟ್ಟಡ ಮತ್ತು ಇತರೆ ಕಾರ್ಮಿಕರ ಸಾಧಕ-ಬಾಧಕಗಳು, ಅವರ ಕಷ್ಟ-ಕಾರ್ಪಣ್ಯಗಳ ಬಗೆಗೆ ಧ್ವನಿ ಎತ್ತುತ್ತಾ, ಕಟ್ಟಡ ಕಾರ್ಮಿಕರ ಹಕ್ಕು ಸಾಧನೆಗಾಗಿ ನಿರಂತರವಾಗಿ ಪ್ರಯತ್ನ ಪಡುತ್ತಿರುವ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಒಕ್ಕೂಟವು ಗ್ರಾಮೀಣ ಪ್ರದೇಶಗಳ ಕಟ್ಟಡ ಕಾರ್ಮಿಕರ ಕಡೆ ಗಮನ ನೀಡುತ್ತಿದೆ.
ಸಂಘಟನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹರಡಿಸುವ ಪ್ರಯತ್ನದಲ್ಲಿ  ಒಕ್ಕೂಟದ ಅಧ್ಯಕ್ಷ ಬಿ. ದೇವರಾಜ್ ಕಾರ್ಯೋನ್ಮುಖರಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಒಕ್ಕೂಟದ ಅಧ್ಯಕ್ಷರನ್ನಾಗಿ ವಿರೂಪಾಕ್ಷಪ್ಪ ಎಂ ಕಮ್ಮಾರ್ ರವರನ್ನು ಆಯ್ಕೆ ಮಾಡಿ ಒಕ್ಕೂಟದ ಅಧ್ಯಕ್ಷ ದೇವರಾಜ್ ರವರು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಕಾರ್ಮಿಕ ಇಲಾಖೆ ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿರುವುದರಿಂದ ಕಟ್ಟಡ ಕಾರ್ಮಿಕರಿಗೆ ಲಭಿಸಬೇಕಿದ್ದ ಮೂಲಭೂತ ಸವಲತ್ತುಗಳನ್ನು ತಲುಪಿಸುವುದು.  ಕಾರ್ಮಿಕರಲ್ಲಿ ಸವಲತ್ತುಗಳ ಬಗೆಗೆ ಅರಿವು ಮೂಡಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕ ಕಾರ್ಡ್ ನ ಸವಲತ್ತುಗಳ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲ್ಲುಕು ಮಟ್ಟದಲ್ಲಿ ಸಂಘಟನೆಯು ಅಗತ್ಯ ಎಂದು ಒಕ್ಕೂಟದ ಅಧ್ಯಕ್ಷ ಬಿ. ದೇವರಾಜ್ ‘ವಾಯ್ಸ್ ಆಫ್ ವರ್ಕರ್ಸ್’ ಜೊತೆ ಮಾತನಾಡುತ್ತ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಸಂಘಟನೆಗಳಿಗೆ ಒಕ್ಕೂಟವು ಹೆಚ್ಚು ಒತ್ತು ನೀಡುತ್ತದೆ ಎಂದರು.