Take a fresh look at your lifestyle.

ಕಾರ್ವಿುಕರ ಸಂಹಿತೆಗಳಿಗೆ ಕೇಂದ್ರ ಸಂಪುಟ ಅಸ್ತು

ಕಾರ್ವಿುಕರಿಗೆ ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಹಾಗೂ ಕೈಗಾರಿಕಾ ಸಂಬಂಧ ಕುರಿತ ಹೊಸ ಸಂಹಿತೆಗಳು ಇವಾಗಿವೆ.

0
post ad

ನವದೆಹಲಿ: ಬಹು ನಿರೀಕ್ಷಿತ ಮೂರು ಕಾರ್ವಿುಕರ ಸಂಹಿತೆಗಳಿಗೆ ಕಾನೂನುಗಳನ್ನು ಮತ್ತು ತಿದ್ದುಪಡಿಗಳನ್ನು ಸೇರಿಸುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹಸಿರು ನಿಶಾನೆ ನೀಡಿದೆ. ಇದು ಮುಂದಿನ ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಈ ಮೂರು ಕಾರ್ಮಿಕ ಸಂಹಿತೆಗಳು ಮಂಡನೆಯಾಗಲಿವೆ.

ಕಾರ್ವಿುಕರಿಗೆ ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಹಾಗೂ ಕೈಗಾರಿಕಾ ಸಂಬಂಧ ಕುರಿತ ಹೊಸ ಸಂಹಿತೆಗಳು ಇವಾಗಿವೆ. ಕಾರ್ವಿುಕರಿಗೆ ಸಂಬಂಧಿಸಿದ 44 ಕಾನೂನುಗಳನ್ನು ನಾಲ್ಕು ಸಂಹಿತೆ (ಕೋಡ್)ಗಳಲ್ಲಿ ಕ್ರೋಡೀಕರಿಸಿದ ಮಸೂದೆಯನ್ನು ಕಳೆದ ವರ್ಷ ಜೂನ್​ನಲ್ಲಿ ಸರ್ಕಾರ ಮಂಡಿಸಿತ್ತು. ಈಗ ಪರಿಷ್ಕರಿಸಲಾದ ಈ ಮೂರು ಸಂಹಿತೆಗಳನ್ನು ಸಂಪುಟ ಅನುಮೋದಿಸಿದೆ. ಈ ಮೂರು ಅಂಶಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು.

ಸಾಮಾಜಿಕ ಭದ್ರತೆ ಸಂಹಿತೆಯು ಭವಿಷ್ಯ ನಿಧಿ, ವಿಮೆ, ಮಹಿಳಾ ಉದ್ಯೋಗಿಗಳಿಗೆ ಮಾತೃತ್ವ ಸಮಯದ ಸೌಕರ್ಯಗಳನ್ನು ಒಳಗೊಂಡಿದೆ. ಔದ್ಯೋಗಿಕ ಸುರಕ್ಷತೆಯಲ್ಲಿ ಕಾರ್ಖಾನೆಯಲ್ಲಿ ಅಳವಡಿಸಬೇಕಾದ ಸುರಕ್ಷತೆ, ಕಾರ್ವಿುಕ ಕಲ್ಯಾಣ ಕಾನೂನುಗಳನ್ನು ವಿವರಿಸಲಾಗಿದೆ. ಕೈಗಾರಿಕಾ ಸಂಬಂಧದ ಸಂಹಿತೆಯಲ್ಲಿ ಕೈಗಾರಿಕಾ ವಿವಾದ, ಕಾರ್ವಿುಕ ಒಕ್ಕೂಟಕ್ಕೆ ಸಂಬಂಧಿಸಿ ಅಂಶಗಳು ಇವೆ.