Take a fresh look at your lifestyle.

ದಿನಕ್ಕೆ 12 ಗಂಟೆಯಂತೆ ವಾರಕ್ಕೆ ನಾಲ್ಕು ದಿನ ಕೆಲಸಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯ ಅಸ್ತು

ಐಟಿ ಮತ್ತು ಉತ್ಪಾದಕ ಕಂಪನಿಗಳಲ್ಲೂ ಉದ್ಯೋಗಿಗಳ ಕೆಲಸದ ವೇಳೆ ಹಾಗೂ ದಿನಗಳಲ್ಲಿ ಅಗತ್ಯಾನುಸಾರ ಬದಲಾವಣೆ ಮಾಡಿಕೊಳ್ಳಬಹುದು. ವಾರಕ್ಕೆ 4 ದಿನ ಕೆಲಸ ಮಾಡಿದರೂ 3 ದಿನ ವೇತನ ಸಹಿತ ರಜೆ ದೊರೆಯಲಿದೆ

0
post ad

ನವದೆಹಲಿ: ವಾರಕ್ಕೆ ಗರಿಷ್ಠ 48 ಗಂಟೆಗಳ ಮಿತಿಯಲ್ಲಿ 4 ದಿನಗಳ ಕೆಲಸದ ಪದ್ಧತಿಯನ್ನು ಅಳವಡಿಸಲೂ ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದಿಸಿದೆ. ಅಗತ್ಯ ಬಿದ್ದರೆ ಮಾತ್ರ ಇದನ್ನು ಅಳವಡಿಸಿಕೊಳ್ಳಬಹುದಾಗಿದ್ದು, ಇದಕ್ಕೆ ಕಾರ್ಮಿಕನ ಅನುಮತಿ ಕಡ್ಡಾಯವಾಗಿದೆ.
ಇದರಿಂದ ಭವಿಷ್ಯದಲ್ಲಿ ಐಟಿಯೇತರ ಸಂಸ್ಥೆಗಳಲ್ಲೂ  ಉದ್ಯೋಗಿಗಳ ಕೆಲಸದ ವೇಳೆ ಹಾಗೂ ದಿನಗಳಲ್ಲಿ ಅಗತ್ಯಾನುಸಾರ ಬದಲಾವಣೆಯಾಗಲಿದೆ.
ಈ ಬಗ್ಗೆ ಅಂತಿಮ ಅಧಿಸೂಚನೆ ಶೀಘ್ರ ಪ್ರಕಟವಾಗಲಿದೆ. ಹೀಗಿದ್ದರೂ ಉಳಿದ ಮೂರು ದಿನಗಳ ರಜೆಗಳು ವೇತನ ಸಹಿತವಾಗಿರಬೇಕು ಎಂದು ಸೂಚಿಸಿರುವ ಕೇಂದ್ರ ಕಾರ್ಮಿಕ ಸಚಿವಾಲಯ ಈ ಪದ್ಧತಿಯಲ್ಲಿ ವಾರಕ್ಕೆ 48 ಗಂಟೆಗಳ ಗರಿಷ್ಠ ಮಿತಿ ಎಂದರೆ, ದಿನಕ್ಕೆ 12 ಗಂಟೆಗಳ ಕೆಲಸವಾಗಿರಬೇಕೆಂದು, ಇದನ್ನು ಉದ್ಯೋಗಿಯ ಒಪ್ಪಿಗೆ ಪಡೆದು ಜಾರಿಗೊಳಿಸಬೇಕಾಗುತ್ತದೆ ಎಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

ಪ್ರಸ್ತುತ ಕಂಪನಿಗಳು ವಾರಕ್ಕೆ ಗರಿಷ್ಠ 48 ಗಂಟೆಗಳ ಮಿತಿಯಲ್ಲಿ, ವಾರಕ್ಕೆ 6 ದಿನಗಳ ಕೆಲಸ ಹಾಗೂ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ಹೊಂದಿರಬೇಕಾಗುತ್ತದೆ. ಇದುವರೆಗೆ ಐಟಿ ಕಂಪನಿಗಳಲ್ಲಿ ಮಾತ್ರ ದುಡಿಮೆಯ ಅವಧಿಗಳಲ್ಲಿ ಸಡಿಲ ನೀತಿ ಜಾರಿಯಲ್ಲಿತ್ತು.
ಇನ್ನು, 12 ಗಂಟೆ ಶಿಪ್ಟ್ ನಲ್ಲಿ‌ ಊಟ ಮತ್ತು ವಿಶ್ರಾಂತಿಗೆ ಸಮಯ ನಿಗದಿ ಮಾಡಲಾಗಿದೆ.
ಚೀನಾದ ಕಾರ್ಖಾನೆಗಳಲ್ಲೂ ಈ ರೀತಿಯ ಪದ್ಧತಿ ಜಾರಿಯಲ್ಲಿದೆ. ಅಲ್ಲಿ ಕಾನೂನಿಗಿಂತಲೂ ಕಠಿಣ ಪರಿಸ್ಥಿತಿಯನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ ಎನ್ನಲಾಗಿದೆ.