Take a fresh look at your lifestyle.

ಟಿಕೆಎಂ ಹೋರಾಟಕ್ಕೆ ಚಲುವರಾಯ ಸ್ವಾಮಿ ಬೆಂಬಲ

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಚಲುವರಾಯ ಸ್ವಾಮಿ ಟಿಕೆಎಂ ಕಾರ್ಮಿಕರ ಹೋರಾಟದ ಸ್ಥಳಕ್ಕೆ ಬೇಟಿ ನೀಡಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು

0
post ad

ರಾಮನಗರ :  ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿಯ ಬಗೆಗೆ ಸರ್ಕಾರದ ಮೃದು ಧೋರಣೆಯ ನಡುವೆ ಕಾರ್ಮಿಕರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಕಾರ್ಮಿಕರು ಪಟ್ಟು ಬಿಡದೇ ಪ್ರತಿಭಟನೆಯನ್ನು 39 ದಿನಗಳಿಂದ ಮುಂದುವರೆಸಿಕೊಂಡು ಬರುತ್ತಿದ್ದರೆ, ಆಡಳಿತ ಮಂಡಳಿ, ಸರ್ಕಾರ ಬಿಕ್ಕಟ್ಟು ಶಮನಕ್ಕೆ ಮುಂದಾಗದಿರುವುದು ಖಂಡನೀಯ.
ತಕ್ಷಣವೇ ಸರ್ಕಾರ ಸಂಸ್ಥೆಯ ಕಾರ್ಯಾಚರಣೆಯ ವಸ್ತುಸ್ಥಿತಿಯನ್ನು ಅರಿತು ಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳದಲ್ಲೇ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಬೇಕಾಗಿದೆ.
ಈ ನಡುವೆ  ಮಾಜಿ ಸಚಿವ ಚಲುವರಾಯ ಸ್ವಾಮಿ ಟಿಕೆಎಂ ಕಾರ್ಮಿಕರ ಹೋರಾಟದ ಸ್ಥಳಕ್ಕೆ ಬೇಟಿ ನೀಡಿದ್ದರು.


ಈ ವೇಳೆ ಟಿಕೆಎಂ ನೌಕರರಿಗೆ ಧೈರ್ಯ ತುಂಬಿದ ಮಾಜಿ ಸಚಿವರು ಟೊಯೊಟಾ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಕಾರ್ಮಿಕರು ಧರಣಿ ಪ್ರಾರಂಭಿಸಿ ಸುಮಾರು ನಲವತ್ತು ದಿನ ಕಳೆಯುತ್ತಿದ್ದರೂ ಕಾರ್ಮಿಕರ ನೆರವಿಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಹತ್ತಿಕ್ಕಲು ಸಂಸ್ಥೆ ನಾನಾ ಮಾರ್ಗಗಳನ್ನು ಅನುಸರಿಸುತ್ತಿರುವುದರಿಂದ  ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಾಂಧವ್ಯ ಮತ್ತಷ್ಟು ಕುಸಿದಿದೆ.

ಇನ್ನು, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದಲೇ ನಾಳೆ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.