Take a fresh look at your lifestyle.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯಿಂದ ಚಿತ್ರಾದೇವಿ ಅಮಾನತು

ಸಂಘದಲ್ಲಿ ಗುರುತಿಸಿಕೊಂಡಿದ್ದರಿಂದ ಈಗಲೂ ಸಂಘದ ಹೆಸರು ಬಳಸಿಕೊಳ್ಳುತ್ತಿರುವುದ ಬಗೆಗೆ ಸ್ಥಳೀಯ ಪದಾಧಿಕಾರಿಗಳ ಮತ್ತು ಅಧ್ಯಕ್ಷರ ಗಮನಕ್ಕೆ ಬಂದಿರುತ್ತದೆ

0
post ad

ಬೆಂಗಳೂರು/ಬಂಗಾರಪೇಟೆ : ಕರ್ನಾಟಕ ರಾಜ್ಯ ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ ಮಹಾಮಂಡಳಿ ಎಂದು ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಂಡು ಪ್ರತ್ಯೇಕವಾಗಿ ಕೆಲಸ ನಿರ್ವಹಿಸುತ್ತಾ, ಸಂಘದ ಶಿಸ್ತು, ನಿಯಮಗಳನ್ನು ಗಾಳಿಗೆ ತೂರಿ ಅತಿಶಯೋಕ್ತಿಯಾಗಿ ವರ್ತಿಸುತ್ತಿದ್ದ ಚಿತ್ರಾದೇವಿಯನ್ನು ಮಹಾಮಂಡಳಿಯ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತು ಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷರಾದ ಜಿ ಆರ್ ಶಿವಶಂಕರ್ ರವರು ಈ ಆದೇಶ ಹೊರಡಿಸಿದ್ದು, ಸ್ಥಳೀಯ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಪತ್ರವನ್ನು ಬರೆದು ಸಂಘದ ಪರವಾಗಿ ವ್ಯವಹಾರಿಸಲು ಬಂದಾಗ ಪರಿಗಣನೆಗೆ ತೆಗೆದುಕೊಳ್ಳದಿರಲು ಸೂಚಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಸಂಘದ ಸಕ್ರಿಯ ಪದಾಧಿಕಾರಿಯಾಗಿದ್ದ ಶ್ರೀಮತಿ ಜಿ.ಚಿತ್ರಾದೇವಿಯವರು ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಂಡು ತಮ್ಮದೇ ಆದ ಕಾರ್ಯಕಲಾಪಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ. ಈ ಹಿಂದೆ ನಮ್ಮ ಸಂಘದಲ್ಲಿ ಗುರುತಿಸಿಕೊಂಡಿದ್ದರಿಂದ ಈಗಲೂ ಸಂಘದ ಹೆಸರು ಬಳಸಿಕೊಳ್ಳುತ್ತಿರುವುದ ಬಗೆಗೆ ಸ್ಥಳೀಯ ಪದಾಧಿಕಾರಿಗಳ ಮತ್ತು ಅಧ್ಯಕ್ಷರ ಗಮನಕ್ಕೆ ಬಂದಿರುತ್ತದೆ. ಈ ಬಗೆಗೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಸಭೆ ಸೇರಿ ಅಮಾನತು ನಿರ್ಣಯ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಶ್ರೀಮತಿ ಜಿ.ಚಿತ್ರಾದೇವಿ ಇನ್ನೂ ಮುಂದೆ ನಮ್ಮ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಪರವಾಗಿ ಹಾಗೂ ತಾಲ್ಲೂಕು/ಜಿಲ್ಲೆಯಿಂದ ನಮ್ಮ ಮಹಾಮಂಡಳಿ ಪರವಾಗಿ ವ್ಯವಹರಿಸಲು ಅವಕಾಶ ನೀಡಿಲ್ಲ. ಆದ್ದರಿಂದ ಇವರಿಗೆ ಯಾವುದೇ ಮಾನ್ಯತೆ ನೀಡಬಾರದೆಂದು ಮಹಾಮಂಡಳಿಯು ಸಾರ್ವಜನಿಕರು ಮತ್ತು ಅಧಿಕಾರಿಗಳಲ್ಲಿ ಮನವಿಯನ್ನು ಮಾಡಿದೆ.