ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಸಾಮೂಹಿಕ ಪ್ರತಿಭಟನೆಗೆ ಸಿಐಟಿಯು ಕರೆ
ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಜನವರಿ 08 ರಂದು ಪ್ರತಭಟಿಸಲು ಸಿಐಟಿಯು ಸಿದ್ಧತೆಗಳನ್ನು ಮಾಡಿಕೊಂಡಿದೆ


ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಶುಕ್ರವಾರ ಸಿಐಟಿಯು ಪ್ರತಿಭಟನೆಗೆ ಕರೆ ನೀಡಿದೆ.
ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಜನವರಿ 08 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಲು ಸಿಐಟಿಯು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಸಾಮೂಹಿಕ ಪ್ರತಿಭಟನೆ ಬಗೆಗೆ ಸಿಐಟಿಯು ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದು, ಸಮ್ಮಿಳಿತ ಸಂಘಟನೆಗಳು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಸಿಐಟಿಯು ಬೇಡಿಕೆಗಳು :
*ಕೃಷಿ ಮಸೋದೆಗಳನ್ನು ರದ್ದುಗೊಳಿಸುವುದು
*ಕಾರ್ಮಿಕ ಸಂಹಿತೆಗಳು ರದ್ದುಗೊಳಿಸುವುದು
*ವಿದ್ಯತ್ ಬಿಲ್ ರದ್ದುಗೊಳಿಸುವುದು
*ಸಾರ್ವಜನಿಕ ಉದ್ದಿಮೆ ಹಾಗೂ ಸೇವಗಳ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ವಿರೋಧಿಸಿ
*ಆದಾಯ ತೆರಿಗೆಯ ಮಿತಿಗೆ ಕೆಳಗಿನ ಆದಾಯವಿರುವ ಕುಟುಂಬಗಳಿಗೆ ₹7,500/- ಸಹಾಯಧನ ನೀಡ ಬೇಕು
* ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ಎಲ್ಲರಿಗೂ ವಾರ್ಷಿಕ 200 ದಿನಗಳ ಕೆಲಸ, ದಿನಕ್ಕೆ ರೂ. 700/- ಕೂಲಿ ಹಾಗೂ ನಗರ ಪ್ರದೇಶಕ್ಕೆ ಯೋಜನೆಯನ್ನು ವಿಸ್ತರಿಸುವುದು.
* ಸಾರ್ವತ್ರಿಕ ಉಚಿತ ಆರೋಗ್ಯ ರಕ್ಷಣೆ ನೀಡುವುದು.
* ಎಲ್ಲಾ ಕಾರ್ಮಿಕರಿಗು ಸಾಮಾಜಿಕ ಸುರಕ್ಷತೆಯ ಯೋಜನೆಗಳನ್ನು ಜಾರಿಗೊಳಿಸುವುದು.
* ಅಗತ್ಯವಿರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಪೂರೈಕೆ ಮಾಡುವುದು.
* ಹೊಸ ಶಿಕ್ಷಣ ನೀತಿಯಲ್ಲಿ ಜನಪರ ಬದಲಾವಣೆಗಳನ್ನು ತರವುದು.
* ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದು. ನಿಗದಿತ ಪಿಂಚಣಿಯನ್ನು ಖಾತರಿಗೊಳಿಸುವ ಹಳೇ ಪಿಂಚಣಿಯೋಜನೆ ಜಾರಿಗೆ ತರುವುದು