Take a fresh look at your lifestyle.

ಸಾರಿಗೆ ನೌಕರರ ಮುಂದುವರೆದ ಮುಷ್ಕರ, ಸಿಐಟಿಯು ಬೆಂಬಲ

ಕಾಲಬದ್ಧವಾಗಿ ಆಗಬೇಕಾದ ವೇತನ ಪರಿಷ್ಕರಣೆಯನ್ನು ಮಾಡದೆ ವಿಳಂಬ ಮಾಡಿದ್ದು ನೌಕರರ ಅತೃಪ್ತಿಯನ್ನು ತೀವ್ರಗೊಳಿಸಿದೆ

0
post ad

ಬೆಂಗಳೂರು : ಸರ್ಕಾರದ ಬೇಜವಾಬ್ದಾರಿ ನಡೆಗಳಿಂದ ಬೇಸತ್ತು ಮುಷ್ಕರದಲ್ಲಿರುವ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಇಂದು ಸಹ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಬೇಸತ್ತು ಮೂರನೆ ದಿನದ ಮುಷ್ಕರದಲ್ಲಿ ತೊಡಗಿದ್ದಾರೆ.
ಸಾರಿಗೆ ನಿಗಮಗಳ ಆಡಳಿತ ವರ್ಗವು ನಿರಂತರವಾಗಿ ನೀಡುತ್ತಿದ್ದ ಕಿರುಕುಳಗಳಿಂದ ನೌಕರರು ತೀವ್ರ ಸಂಕಷ್ಟದಲ್ಲಿದ್ದು ಅವರಿಗೆ ಸಿಐಟಿಯು ರಾಜ್ಯ ಘಟಕ ಬೆಂಬಲ ಸೂಚಿಸಿದೆ.
ಕೋವಿಡ್‌ ಸೋಂಕಿಗೆ ತುತ್ತಾಗಿ ಸಾವನ್ನು ಅಪ್ಪಿದ ನೌಕರರಿಗೆ ಇಲ್ಲಿಯವರೆಗೆ ಪರಿಹಾರ ನೀಡಲಿಲ್ಲ. ಇದೇ ಸಂದರ್ಭದಲ್ಲಿ ಕಾರ್ಮಿಕರ ರಜೆಗಳನ್ನು ವಜಾ ಮಾಡಿಕೊಂಡು ಸಂಬಳ ಪಾವತಿ ಮಾಡಿದ್ದು, ಕಿರುಕುಳಗಳನ್ನು ಹೆಚ್ಚು ಮಾಡಿದ್ದು ಕಾರ್ಮಿಕರ ಆಕ್ರೋಶವನ್ನು ಹೆಚ್ಚು ಮಾಡಿತು. ಈ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಾ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಬೆಂಬಲ ಘೋಷಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಬಹಳ ಮುಖ್ಯವಾಗಿ ಸರ್ಕಾರಿ ನೌಕರರು ಹಾಗು ಸಾರಿಗೆ ನೌಕರರ ವೇತನದಲ್ಲಿನ ತಾರತಮ್ಯದಿಂದಾಗಿ ಸಾರಿಗೆ ನೌಕರರಲ್ಲಿ ಅತೃಪ್ತಿ ಮಡುಗಟ್ಟಿತ್ತು. ಸಾರಿಗೆ ಕಾರ್ಮಿಕರಿಗೆ ತಮ್ಮ ಬೇಡಿಕೆಗಳನ್ನು ಆಡಳಿತ ವರ್ಗದ ಮುಂದೆ ಕಾನೂನು ಬದ್ಧವಾಗಿ ಮಂಡಿಸಬಹುದಾದ ಕಾರ್ಮಿಕ ಸಂಘಗಳ ಚುನಾವಣೆಯನ್ನು ನಡೆಸಲಿಲ್ಲ. ಎಲ್ಲಾ ಕಾರ್ಮಿಕ ಸಂಘಟನೆಗಳು ಜೇಡಿಕೆ ಪಟ್ಟ ಸಲ್ಲಿಸಿ ವರ್ಷ ಕಳೆದರೂ ಅವರ ಬೇಡಿಕೆಗಳ ಕುರಿತು ಸರ್ಕಾರಯಾವುದೇ ಮಾತುಕತೆ ನಡೆಸಲಿಲ್ಲ.

ಸರ್ಕಾರ ಹಾಗು ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ನೌಕರರ ಅತೃಪ್ತಿ ಮತ್ತು ಬೇಸರಕ್ಕೆ ಕಾರಣವಾಗಿರುವ ಧೋರಣೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ಪ್ರಜೆಗಳಿಗೆ ಸುರಕ್ಷಿತ ಹಾಗು ಸಮಂಜಸವಾದ ದರದಲ್ಲಿ ಸಾರಿಗೆ ಸೇವೆಯನ್ನು ಒದಗಿಸುವ ಕರ್ತವ್ಯವನ್ನು ನಿಗಮಗಳು ಹೊಂದಿದೆ. ಈ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸರ್ಕಾರದ ಸಾರ್ವಭೌಮ ಕರ್ತವ್ಯವನ್ನು ಜಾರಿ ಮಾಡುವವರಾಗಿದ್ದಾರೆ. ಈ ನೌಕರರ ಭಾವನೆಗಳಿಗೆ ಸೂಕ್ತ ಮಾನ್ಯತೆಯನ್ನು ಸರ್ಕಾರ ಹಾಗು ಆಡಳಿತ ಮಂಡಳಿ ನೀಡಲೇಬೇಕು. ಸೇವಾ ತೆರಿಗೆ ಹೆಚ್ಚಳ, ಟೋಲ್‌ ಶುಲ್ಕ ಹೆಚ್ಚಳ ಹಾಗು ದಿನನಿತ್ಯ ಬದಲಾಗುವ ಇಂಧನ ಜೆಲೆ ಹೆಚ್ಚಳದ ಹೊರೆಯನ್ನು ಸಾಮಾನ್ಯ ಜನರ ಮೇಲೆ ಹೊರಿಸುವುದಲ್ಲದೆ, ಇದೇಕಾರಣಗಳನ್ನು ಹೇಳಿ ನೌಕರರ ವೇತನವನ್ನು ಕಡಿತಗೊಳಿಸುವ ಪ್ರಯತ್ನಗಳು ಸರ್ಕಾರ ಹಾಗು ನಿಗಮಗಳ. ಆಡಳಿತದಿಂದ ನಡೆಯುತ್ತಿದೆ.
ಇವುಗಳಲ್ಲದೆ ದಿನನಿತ್ಯದ ಪ್ರಾಯೋಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಬದಲು ನೌಕರರನ್ನೇ ಎಲ್ಲಾ ವಷರಗಳ ಹೊಣೆ ಮಾಡುವ ಪ್ರವೃತಿಗಳು ಈ
ಮುಷ್ಕರ ಪ್ರಬಲವಾಗಿ ನಡೆಯಲು ಕಾರಣವಾಗಿದೆ. ಆದ್ದರಿ೦ದ ಮುಷ್ಕರ ನಿರತ ನೌಕರರ ಪ್ರತಿನಿಧಿಗಳೊಂದಿಗೆ ಕೂಡಲೇ ಮಾತುಕತೆ ನಡೆಸಿ ಅವರ ನ್ಯಾಯಯುತ ಜೇಡಿಕೆಗಳನ್ನು
ಬಗೆಹರಿಸಲು ಸರ್ಕಾರ ಮುಂದಾಗಬೇಕೆಂದು ಸಿಐಟಿಯು ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದು ಸುಂದರಂ ಅವರು ತಿಳಿಸಿದ್ದಾರೆ.
ಮುಷ್ಕರವನ್ನು ದಮನಕಾರಿ ನೀತಿಗಳ ಮೂಲಕ ಹತ್ತಿಕ್ಕುವ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಸಿಐಟಿಯು ರಾಜ್ಯ ಸಮಿತಿಯು ತೀವವಾಗಿ ಖಂಡಿಸುತ್ತದೆ.

ಸೌಹಾರ್ಧಯುತ ಮಾತುಕತೆಗಳ ಮೂಲಕ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸಿಐಟಿಯು ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದು ಸಿಐಟಿಯು ತಿಳಿಸಿದೆ.