Take a fresh look at your lifestyle.

ಮಾಡೆಲ್ ಸ್ಟ್ಯಾಂಡಿಂಗ್ ಆರ್ಡರ್ ಗಳನ್ನು ಹೊರಡಿಸಿದ ಸರ್ಕಾರ

ಉತ್ಪಾದನೆ, ಗಣಿಗಾರಿಕೆ ಮತ್ತು ಸೇವಾ ಕ್ಷೇತ್ರಕ್ಕಾಗಿ ಕರಡು ಮಾದರಿಯ ಸ್ಥಾಯೀ ಆದೇಶಗಳಿಗೆ ಸರ್ಕಾರ ಅಧಿಸೂಚನೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪಾಲುದಾರರಿಂದ ಮೂವತ್ತು ದಿನಗಳೊಳಗೆ ಸಲಹೆಗಳು/ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

0
post ad

ನವ ದೆಹಲಿ: ಕೈಗಾರಿಕಾ ಸಂಬಂಧಗಳ ಸಂಹಿತೆ 2020ರ ಸೆಕ್ಷನ್ 29ರ ಅಡಿಯಲ್ಲಿ ಉತ್ಪಾದನಾ ವಲಯ, ಗಣಿ ಕ್ಷೇತ್ರ ಮತ್ತು ಸೇವಾ ವಲಯಗಳಿಗೆ ಸಂಬಂಧಿಸಿದಂತೆ ಕರಡು ಮಾದರಿ ಸ್ಥಾಯೀ ಆದೇಶಗಳನ್ನು ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಿದೆ. ಮೂವತ್ತು ದಿನಗಳ ಅವಧಿಯೊಳಗೆ ಪಾಲುದಾರರಿಂದ ಸಲಹೆ/ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಸೇವಾ ವಲಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ವಲಯಕ್ಕೆ ವಿಶೇಷ ಮಾದರಿಯ ಸ್ಟಾಂಡಿಂಗ್ ಆರ್ಡರ್ ಗಳನ್ನು ಮೊದಲು ಬಾರಿಗೆ ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.
ಈ ಕರಡು ಅಥವಾ ಸ್ಥಾಯೀ ಆದೇಶಗಳ ಮುಖ್ಯ ಲಕ್ಷಣಗಳು ಈ ಕೆಳಗಿನಂತಿವೆ: –
i. ಕೈಗಾರಿಕಾ ಸ್ಥಾಪನೆ ಅಥವಾ ಅದರ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾದರಿ ಸ್ಥಾಯೀ ಆದೇಶಗಳನ್ನು ಉದ್ಯೋಗದಾತನು ಪಾಲಿಸಿದಲ್ಲಿ, ಅಂತಹ ಮಾದರಿಯನ್ನೇ ಆ ಸಂಸ್ಥೆಯ ಸ್ಥಾಯೀ ಆದೇಶಗಳೆಂದೇ ಭಾವಿಸಲಾಗುತ್ತದೆ.
ii. ಕೈಗಾರಿಕಾ ಸ್ಥಾಪನೆಯಲ್ಲಿ ಅನುಸರಿಸಿದ ಮಾದರಿ ಸ್ಥಾಯೀ ಆದೇಶಗಳು ಇತರ ಎಲ್ಲಾ ಘಟಕಗಳಿಗೆ ಸಂಬಂಧಿಸಿದಂತೆ ಅನ್ವಯಿಸತಕ್ಕದ್ದು.
iii. ನಿರ್ದಿಷ್ಟ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ಆಯಾ ವಲಯಕ್ಕೆ ಸ್ವಲ್ಪ ಅನುಕೂಲವನ್ನು ನೀಡಲಾಗಿ, ಮೂರು ಮಾದರಿ ಸ್ಥಾಯಿ ಆದೇಶಗಳ ಏಕರೂಪತೆಯನ್ನು ಕಾಯ್ದುಕೊಳ್ಳಲಾಗಿದೆ.
iv. ಮೂರು ಮಾದರಿ ಸ್ಟ್ಯಾಂಡಿಂಗ್ ಆರ್ಡರ್ ಗಳು ನೌಕರರಿಗೆ ಎಲೆಕ್ಟ್ರಾನಿಕ್ ಮೋಡ್ ಮೂಲಕ ಮಾಹಿತಿಯನ್ನು ನೀಡುವ ಮಾಹಿತಿ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಮಾಲೀಕನಿಗೆ ಪ್ರೋತ್ಸಾಹವನ್ನು ನೀಡುತ್ತದೆ.
iv. ಐಟಿ ಉದ್ಯಮಕ್ಕೆ ರಕ್ಷಣೆಯನ್ನು ನೀಡಲು, ಯಾವುದೇ ಐಟಿ ವ್ಯವಸ್ಥೆಯ ಅನಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಉದ್ಯೋಗದಾತ/ಬಳಕೆದಾರ/ಕ್ಲೈಂಟ್ ನ ಕಂಪ್ಯೂಟರ್ ನೆಟ್ ವರ್ಕ್ ಬಳಕೆಯನ್ನು ದುರ್ನಡತೆ ಎಂದು ಸೂಚಿಸಲ್ಪಡುತ್ತದೆ.
v. ಮನೆಯಿಂದಲೇ ಕೆಲಸ ಮಾಡುವ ( ವರ್ಕ್ ಫರ್ಮ್ ಹೋಮ್) ಪರಿಕಲ್ಪನೆಯನ್ನು ಸೇವಾ ಕ್ಷೇತ್ರದ ಮಾದರಿ ಸ್ಟಾಂಡಿಂಗ್ ಆರ್ಡರ್ ಗಳಲ್ಲಿ ಅಧಿಕೃತವಾಗಿ ಸೇರಿಸಲಾಗಿದೆ.
vi. ಸೇವಾ ವಲಯದ ಮಾದರಿ ಸ್ಟಾಂಡಿಂಗ್ ಆರ್ಡರ್ ಗಳು
ಐಟಿ ವಲಯದ ವಿಚಾರದಲ್ಲಿ ಕೆಲಸದ ಅವಧಿ ಒಪ್ಪಂದ ಅಥವಾ ಉದ್ಯೋಗದಾತರು ಮತ್ತು ಕಾರ್ಮಿಕರ ನಡುವಿನ ನೇಮಕಾತಿಯ ನಿಯಮಗಳ ಪ್ರಕಾರ ಇರಬೇಕು.
vii. ಹನ್ನೆರಡು ತಿಂಗಳ ಹಿಂದೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಯಾವುದೇ ದುರ್ನಡತೆಯ ಆಧಾರದಲ್ಲಿ ಕಾರ್ಮಿಕನು ತಪ್ಪಿತಸ್ಥನೆಂದು ಸಾಬೀತಾದರೆ, ಅವನಿಗೆ ಶಿಸ್ತಿನ ಕ್ರಮವನ್ನು ವ್ಯಾಖ್ಯಾನಿಸಲಾಗಿದೆ.
viii. ಗಣಿಗಾರಿಕೆ ಕ್ಷೇತ್ರದ ಕಾರ್ಮಿಕರಿಗೆ ರೈಲು ಪ್ರಯಾಣ ಸೌಲಭ್ಯವನ್ನು ವಿಸ್ತರಿಸಿದೆ. ಪ್ರಸ್ತುತ, ಇದನ್ನು ಕಲ್ಲಿದ್ದಲು ಗಣಿಗಳಲ್ಲಿನ ಕಾರ್ಮಿಕರು ಮಾತ್ರ ಬಳಸುತ್ತಿದ್ದಾರೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಈ ಬಗೆಗೆ ಮಾತನಾಡುತ್ತಾ, “ಈ ಮಾದರಿ ಸ್ಥಾಯೀ ಆದೇಶಗಳು ದೇಶದಲ್ಲಿನ ಕೈಗಾರಿಕೆಗಳ ಸಾಮರಸ್ಯದ ಹಾದಿಗೆ ಸುಗಮ ಮಾಡಿಕೊಡುತ್ತದೆ. ಏಕೆಂದರೆ,ಇದು ಸೇವೆಗೆ ಸಂಬಂಧಿಸಿದ ವಿಚಾರಗಳನ್ನು ಸ್ನೇಹಪೂರ್ವಕ ವಿಧಾನಕ್ಕೆ ಬದಲಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ಈ ಹಿಂದಿನ 29 ಕಾರ್ಮಿಕ ಕಾನೂನುಗಳನ್ನು ಒಳಗೊಂಡ ನಾಲ್ಕು ಕಾರ್ಮಿಕ ಸಂಹಿತೆಗಳನ್ನು 2021ರ ಏಪ್ರಿಲ್ 1ರಿಂದ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ.
ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆಯ ಸಂಹಿತೆ, ವೇತನ ಸಂಹಿತೆ ಹಾಗೂ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮೇಲಿನ ಸಂಹಿತೆಗಳು ಜಾರಿಗೆ ಬರಲಿವೆ.