Take a fresh look at your lifestyle.

ತಿದ್ದುಪಡಿ ಮಸೂದೆಗಳ ವಿರುದ್ಧ ಶಾಸಕರ ಕಚೇರಿ ಮುಂದೆ ಸಿಪಿಐ ಪ್ರತಿಭಟನೆ

ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿರುವ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ, ಎಪಿ ಎಂ ಸಿ ಕಾಯ್ದೆ , ತಿದ್ದುಪಡಿ ಕಾಯ್ದೆ, ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿಗಳನ್ನು ರದ್ದುಗೊಳಿಸಲು ಒತ್ತಾಯ

0
post ad

ತುಮಕೂರು : ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಹೊರಡಿಸಿರುವ ವಿವಿಧ ಕಾನೂನು ತಿದ್ದುಪಡಿಯನ್ನು ವಿರೋಧಿಸಿ. ಶಾಸಕ ಜ್ಯೋತಿಗಣೇಶ್ ಕಚೇರಿ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು.
ಕೋವಿಡ್ 19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ, ಎಪಿ ಎಂ ಸಿ ಕಾಯ್ದೆ , ತಿದ್ದುಪಡಿ ಕಾಯ್ದೆ, ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿಗಳ ಮೂಲಕ ರಾಜ್ಯದ ರೈತಾಪಿ ಹಾಗೂ ಕಾರ್ಮಿಕರ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಲಿದ್ದು. ಇದರಿಂದ ಸಾಮಾನ್ಯ ವರ್ಗದವರಿಗೆ ತೊಂದರೆ ಆಗಲಿದೆ. ಅಷ್ಟೆ ಅಲ್ಲದೆ ದಲಿತ, ಅಲ್ಪ ಸಂಖ್ಯಾತ, ಜನ ಸಮೂಹಗಳ ಮೇಲೆ ಹೆಚ್ಚಿನ ಮಟ್ಟದಲ್ಲಿ ಅಸಮಾನತೆಯು ಉಂಟಾಗಲಿದೆ.

ಸಾರ್ವಭೌಮತ್ವ, ಸ್ವತಂತ್ರ ಸಮಾನತೆ, ಸಾಮಾಜಿಕ ನ್ಯಾಯ, ಒಕ್ಕೂಟ ತತ್ವ, ಪ್ರಜಾ ಪ್ರಭುತ್ವ ಮುಂತಾದ ನಮ್ಮ ಸಂವಿಧಾನದ ಮೂಲಭೂತ ಆಶಯ ಹಾಗೂ ತತ್ವಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳ ಸುಪರ್ಧಿಗೆ ವಹಿಸುವ ಉದ್ದೇಶದಿಂದ ರೈತ ವಿರೋಧಿ ಕಾರ್ಪೊರೇಟ್ ಗಳ ಪರ ಸುಗ್ರೀವಾಜ್ಞೆ ಗಳಾದ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ಸುಗ್ರೀವಾಜ್ಞೆ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ವಿಧಾನ ಸಭೆಯ ಅಂಗೀಕಾರಕ್ಕೆ ಚರ್ಚೆಗೆ ಬರುತ್ತಿರುವ ಈ ಮೇಲಿನ ಕಾಯ್ದೆಗಳನ್ನು ಸಂಪೂರ್ಣವಾಗಿ ವಿರೋದಿಸುವಂತೆ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇದೇವೇಳೆ ಪಕ್ಷದ ಮುಖಂಡರಾದ ಗೀರಿಶ್, ಶಶಿಕಾಂತ್, ಜಾಫರ್ ಷರೀಫ್, ಪಂಚಾಕ್ಷರಿ, ದೇವಿಕಾ, ಧನುಜ, ಆನಂದ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ :
ರವಿ ಚಿಂಪುಗಾನಹಳ್ಳಿ,
ತುಮಕೂರು ವರದಿಗಾರ