Take a fresh look at your lifestyle.

ವಲಸೆ, ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ದತ್ತಾಂಶ ಸಂಗ್ರಹಣೆಗೆ ಸರ್ಕಾರ ಚಿಂತನೆ

ಎನ್ ಡಿ ಯು ಡಬ್ಲು ಅನ್ನು ರೂಪಿಸುವುದರಿಂದ ವಲಸೆ ಕಾರ್ಮಿಕರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರ ಮಾಹಿತಿಗಳನ್ನು ಅದರಲ್ಲಿ ದಾಖಲಿಸಬಹುದು

0
post ad

ನವದೆಹಲಿ : ವಲಸೆ ಕಾಮಿರ್ಕರಿಗೆ ಉತ್ತಮ ವೇದಿಕೆ ಒದಗಿಸಲು ಇದೀಗ ಹಣಕಾಸು ಸಚಿವಾಲಯ ಮುಂದಾಗಿದ್ದು, ವಲಸೆ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಮೊದಲ ರಾಷ್ಟ್ರೀಯ ದತ್ತಾಂಶ ಸಂಗ್ರಹಣೆ (ಡಾಟಾಬೇಸ್) ಮಾಡಲು, ಅವರಿಗಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ರಚಿಸಲಾದ ಮೊದಲ ರಾಷ್ಟ್ರೀಯ ಡೇಟಾಬೇಸ್ ಇದಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು
ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಈ ಡೇಟಾಬೇಸ್ ಅನ್ನು ಅಭಿವೃದ್ಧಿಪಡಿಸಲಿದೆ.
ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಆರ್ಥಿಕ ಜೀವನವನ್ನು ಸರಿಯಾದ ಹಾದಿಯಲ್ಲಿ ನಿರ್ವಹಿಸಲು ಈ ಡೇಟಾಬೇಸ್ ಯೋಜನೆಗಳು ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
ಅಸಂಘಟಿತ ವಲಯದವರಿಗೆ ವಿವಿಧ ಯೋಜನೆಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಅನುಕೂಲಕರ ಮತ್ತು ಸುಲಭವಾದ ರೀತಿಯಲ್ಲಿ ವಲಸಿಗರಿಗೆ ಸೂಕ್ತ ವೇದಿಕೆ ಯನ್ನು ಒದಗಿಸುವ ಗುರಿಯೊಂದಿಗೆ ಇದನ್ನು ರೂಪಿಸಲಾಗುತ್ತಿದೆ.
ಇದು ತಮ್ಮ ತಮ್ಮ ಸಾಮರ್ಥ್ಯವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಸಹಾಯಕವಾಗಿದೆ. ಇದರಿಂದ ಉದ್ಯೋಗ ನೀಡುವವರು ಸೂಕ್ತ ವ್ಯಕ್ತಿಯನ್ನು ಹುಡುಕಲು ಸುಲಭವಾಗುತ್ತದೆ.

ಕಾರ್ಮಿಕರ ಕುರಿತು ಯಾವುದೇ ಡೇಟಾಬೇಸ್ ಇಲ್ಲದಿರುವುದರಿಂದ ಕೋವಿಡ್ ಸಮಯದಲ್ಲಿ ದೊಡ್ಡ ಸಮಸ್ಯೆಯುಂಟಾಗಿತ್ತು. ದಾಖಲೆಗಳಿಲ್ಲದ ಕಾರ್ಮಿಕರು ಕೊರೊನಾ ವೇಳೆ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಡಾಟಾಬೇಸ್ ರಚನೆಯಿಂದ ಹೆಚ್ಚು ಉಪಯೋಗ ಆಗುವುದರಲ್ಲಿ ಬೇರೆ ಮಾತಿಲ್ಲ. ಈ ಯೋಜನೆ ಬಹು ಮುಖ್ಯವಾಗಿ ಕಾರ್ಮಿಕರು ಆರೋಗ್ಯ, ಸುರಕ್ಷತೆ ಹಾಗೂ ಸರ್ಕಾರಿ ಸಂಬಂಧಿತ ಯೋಜನೆಗಳನ್ನು ಪಡೆಯಲು ಸೂಕ್ತವಾಗಿದೆ.

ಉದ್ಯೋಗದಾತರಿಂದ ಕಾರ್ಮಿಕರು ವರ್ಷಕ್ಕೊಮ್ಮೆ ಪ್ರಯಾಣ ಭತ್ಯೆ  ಪಡೆಯಲು ಇದಕ್ಕೆ ಸಂಬಂಧಿತ ಕೋಡ್ ಗಳು ಖಾತ್ರಿಪಡಿಸುತ್ತದೆ. ವಲಸೆ ಕಾರ್ಮಿಕರು ಕೆಲಸದ ಹುಡುಕಾಟದಲ್ಲಿ ಉತ್ತಮ ಸಂಬಳ ಅರಸಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಇಚ್ಚೆಯ ಮಾಹಿತಿಗಳನ್ನು ಹಂಚಿಕೊಳ್ಳಲು ಒಂದೊಳ್ಳೆ ಪ್ಲಾರ್ಟ್ ಫಾರ್ಮ್​ ಇದಾಗಿದೆ.
ಅಲ್ಲದೆ, ಈ ಡೇಟಾಬೇಸ್ ನಲ್ಲಿ, ಉದ್ಯೋಗ ಅವಕಾಶಗಳನ್ನು ಪಡೆಯಲು ಕಾರ್ಮಿಕರು ತಮ್ಮ ಕೌಶಲ್ಯದ ಪರಿಚಯಗಳನ್ನು ಸಹ ಇಲ್ಲಿ ವಿವರಿಸಬಹುದಾಗಿದೆ.

ಈ ಡೇಟಾಬೇಸ್ ಅನ್ನು ರೂಪಿಸಲು ಕೇಂದ್ರ ಸರ್ಕಾರ ಒಟ್ಟು 650 ಕೋಟಿ ವೆಚ್ಚ ಮಾಡಲಾಗುತ್ತಿದೆ.