Take a fresh look at your lifestyle.

ಟೊಯೋಟಾ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಸಂಘಟನೆಗಳ ಸಾಥ್

ಟಿಕೆಎಂ ಆಡಳಿತ ಮಂಡಳಿಯ ನಿಲುವಿಗೆ ಸರ್ಕಾರ ಏಕಪಕ್ಷೀಯವಾಗಿ ಬೆಂಬಲ ನೀಡುತ್ತಿರುವುದನ್ನು ಟಿಕೆಎಂ ನೌಕರರು ಖಂಡಿಸಿದರು, ಹಲವು ಸಂಘಟನೆಗಳು ಇವರ ನೆರವಿಗೆ ದಾವಿಸಿದ್ದಾರೆ...

0
post ad

ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಶೀಘ್ರವಾಗಿ ಬಗೆಹರಿಸಲು ಒತ್ತಾಯಿಸಿ, ಸರ್ಕಾರ ಏಕಪಕ್ಷೀಯ ವಾಗಿ ಆಡಳಿತ ಮಂಡಳಿಯ ಪರ ಮೃದು ಧೋರಣೆಯನ್ನು ಹೊಂದಿರುವುದನ್ನು ವಿರೋಧಿಸುತ್ತಾ ಟಿಕೆಎಂ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದರು.

https://youtu.be/GQk-v_Q6bVA
ಟಿಕೆಎಂ ನೌಕರರ ಸ್ವಾಭಿಮಾನಿ ಹೋರಾಟವು 40 ನೇ ದಿನಕ್ಕೆ ಕಾಲಿಟ್ಟಿದ್ದು, ಡಿಸಿ ಕಚೇರಿಯ ಮುಂದೆಯೇ ಪ್ರತಿಭಟನೆಯನ್ನು ನಡೆಸಿದರು. ಟಿಕೆಎಂಇಯು ಹೋರಾಟಕ್ಕೆ ರೈತ, ಕಾರ್ಮಿಕ ಸಂಘಟನೆಗಳು ಸೇರಿದಂತೆ ಬಹುಜನ ಪಕ್ಷವು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಕಾರ್ಮಿಕರ ಪ್ರತಿಭಟನೆಗೆ ಜಾಗವನ್ನು ಇಲ್ಲದಂತೆ ಮಾಡಿದ್ದ ಆಡಳಿತ ಮಂಡಳಿಯ ಪಿತೂರಿಗೆ ದಿಟ್ಟತನದಿಂದ ಕಾರ್ಮಿಕರು ರಸ್ತೆಯಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದರು.
ಆಡಳಿತ ಮಂಡಳಿ ಶಿಸ್ತು ಪಾಲನೆಯ ಕಾರಣ ನೀಡಿ ಒಬ್ಬ ನೌಕರನನ್ನು ಅಮಾನತು ಮಾಡಿತ್ತು ನಂತರ 39 ಕಾರ್ಮಿಕರನ್ನು,  ಮುಂದಿನ ದಿನಗಳಲ್ಲಿ 60 ನೌಕರರನ್ನು ಅಮಾನತು ಮಾಡಿತ್ತು.
ಈ ನಡುವೆ ಸಂಸ್ಥೆ ಲಾಕ್ ಔಟ್ ತೆರವುಗೊಳಿಸಿದ ನಂತರದ ಕಾರ್ಖಾನೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಕೆಲ ನೌಕರರು ಕಿರುಕುಳ, ದಬ್ಬಾಳಿಕೆ ಸಹಿಸಲಾಗದೆ ಪುನಃ ಕಾರ್ಮಿಕ ಸಂಘದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಸರ್ಕಾರ, ಜಿಲ್ಲಾಡಳಿತ ಟಿಕೆಎಂ ಕಂಪನಿಯ ಬಿಕ್ಕಟ್ಟನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟಿಲ್ಲವೆಂದು ಆರೋಪಿಸಿದ ನೌಕರರು ನ್ಯಾಯ ದೊರೆಯುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಎಚ್ಚರಿಸಿದರು.
ಟಿಕೆಎಂಇಯುಗೆ ರಾಜ್ಯದ ಹಲವು      ಸಂಘಟನೆಗಳು ಸಾಥ್
ರಾಜ್ಯದ ಹಲವಾರು ಸಂಘಟನೆಗಳು ಹಾಗೂ ಟೊಯೋಟಾ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕ ಸಂಘದ 3000ಕ್ಕೂ ಹೆಚ್ಚು ಕಾರ್ಮಿಕರು ಡಿಸಿ ಕಚೇರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೈರೇಗೌಡರು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯ, ಜಿಲ್ಲಾಧ್ಯಕ್ಷರಾದ ಬೈರೇಗೌಡ, ಬಿಎಸ್ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ, ಬಿಎಸ್ಪಿ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಅನ್ನದಾತ ರಕ್ಷಣಾ ವೇದಿಕೆ ಮುತ್ತುರಾಜ್, ದೆನ್ಸೋ ಕಿರ್ಲೋಸ್ಕರ್ federal-mogul, ಎಐಸಿಸಿಟಿಯು ರಾಜ್ಯಾಧ್ಯಕ್ಷ ಅಪ್ಪಣ್ಣ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಉಮೇಶ್ ಹಾಗೂ ಹಾಗೂ ಇನ್ನೂ ಅನೇಕ ಸಂಘಟನೆಗಳು ಭಾಗವಹಿಸಿದ್ದರು.

ಬಿಎಸ್ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.  ಕಾರ್ಮಿಕರು ರಕ್ತ ಚಳುವಳಿ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಎಚ್ಚರಿಸಿದರು ರಾಜ್ಯ ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕ ಸಂಘವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದರು.
ಮಾರಸಂದ್ರ ಮುನಿಯಪ್ಪ ಮಾತನಾಡಿ 80 ಪರ್ಸೆಂಟ್ ರಾಜಕಾರಣಿಗಳು ಮತಪಡೆದು ಈಗ ನಿದ್ರಿಸುತ್ತಿದ್ದಾರೆ ಎಚ್ಚೆತ್ತು ರೈತರ ದಲಿತರ ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು, ಕೇಂದ್ರ ಸರ್ಕಾರದ ಖಾಸಗೀಕರಣವೇ ಇದಕ್ಕೆ ಕಾರಣ ಸರ್ಕಾರ ಖಾಸಗೀಕರಣವನ್ನು ಕೈಬಿಟ್ಟು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು ಎಂದರು.
ಎಐಟಿಯುಸಿ ರಾಜ್ಯಾಧ್ಯಕ್ಷ ಅಪ್ಪಣ್ಣ ಮಾತನಾಡಿ 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ 4 ಸಂಹಿತೆ ಗಳಾಗಿ ಮಾಡಿರುವುದು ದುರಾದೃಷ್ಟ. ಈ ಕಾಯ್ದೆ ವಾಪಸ್ ಆಗಲೇಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು ವಿದೇಶಿ ಕಂಪನಿಗಳು ಭಾರತದ ಕಾನೂನುಗಳಿಗೆ ಬೆಲೆಕೊಟ್ಟು ಗೌರವಿಸಬೇಕು ಇಲ್ಲವಾದರೆ ನಮ್ಮ ನೆಲ ಜಲ ವಿದ್ಯುತ್ ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಮನಗರ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬೈರೇಗೌಡರು ಮನೀಡಿತು.ತ್ತಾ ದುಡಿಯುವ ಕೈಗಳು ದೇಶಕ್ಕೆ ಆಧಾರ ರೈತರ ಕಾರ್ಮಿಕರ ಸಮದಿಂದ ದೇಶ ನಡೆಯುತ್ತಿದೆ ಅವರಿಗೆ ಅನ್ಯಾಯವಾದರೆ ರೈತ ಸಂಘ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತದೆ ಶೀಘ್ರವಾಗಿ ಸಮಸ್ಯೆ ಬಗೆಹರಿಯದಿದ್ದರೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಉಮೇಶ್ ಮಾತನಾಡಿ ಜಿಲ್ಲಾಧಿಕಾರಿಗಳು ನಿದ್ದೆಯಿಂದ ಎದ್ದು ತಮ್ಮ ಕಾರ್ಯದಲ್ಲಿ ತೊಡಗಬೇಕು ಕಂಪನಿಯ ಆಡಳಿತ ವರ್ಗಕ್ಕೆ ಬುದ್ಧಿ ಹೇಳಬೇಕು ಎಂದು ಎಚ್ಚರಿಸಿದರು.
ರಾಜ್ಯದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಕಾರ್ಮಿಕರ ಸಮಸ್ಯೆ ಬಗೆಹರಿಯದಿದ್ದರೆ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜಿಗಣಿ ಕಾರ್ಮಿಕ ಸಂಘದ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿತು. ಜೊತೆಗೆ federal-mogul ಕಾರ್ಮಿಕ ಸಂಘಟನೆ ತನ್ನ ಸಂಪೂರ್ಣ ಬೆಂಬಲ ನೀಡಿತು.
ಟೊಯೋಟೊ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಚಕ್ಕೆರೆ ಮಾತನಾಡಿ ಶೀಘ್ರವಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಇದು ಕೇವಲ ನಮ್ಮ ಸಮಸ್ಯೆ ಮಾತ್ರ ಅಲ್ಲ ದೇಶದ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳ ಸಮಸ್ಯೆಯಾಗಿದೆ. ಕಾರ್ಮಿಕರನ್ನು ಯಂತ್ರದಂತೆ ದುಡಿಸಿ ಐದತ್ತು ವರ್ಷಗಳಲ್ಲಿ ಮನೆಗೆ ಕಳುಹಿಸುತ್ತಿದ್ದಾರೆ. ಈ ಶೋಷಣೆ ನಿಲ್ಲಬೇಕಿದೆ ದೇಶದ ಕಾನೂನುಗಳು ಬಲಿಷ್ಠವಾಗಿದ್ದರೆ ನಮ್ಮ ಕಂಪನಿಯ ಆಡಳಿತ ವರ್ಗ ಯಾವುದೇ ಕಾನೂನುಗಳಿಗೆ ಬೆಲೆ ಕೊಡದೆ ಸರ್ಕಾರದ ಮಾತಿಗೂ ಬೆಲೆ ಕೊಡದೆ ಕಾರ್ಮಿಕರನ್ನು ಬೀದಿಗೆ ತಳ್ಳಿವೆ ಎಂದರು.
ಅಪರ ಜಿಲ್ಲಾಧಿಕಾರಿಗಳಿಗೆ ಮನವಿ..
ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಜವರೇಗೌಡರು ಶೀಘ್ರದಲ್ಲೇ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.