Take a fresh look at your lifestyle.

ಟೊಯೋಟಾ ಬಿಕ್ಕಟ್ಟು ಲೇಬರ್ ಕೋರ್ಟ್ ನಲ್ಲಿ ಬಗೆಹರಿಯಲಿ: ಡಿಸಿಎಂ

ಸರ್ಕಾರದ ಆದೇಶಗಳು ಕಡತಗಳಿಗೆ, ಕಚೇರಿಗಳಿಗೆ ಸೀಮಿತಗೊಂಡಿದ್ದರೆ, ಶಾಸಕಾಂಗ ಕಾರ್ಯಾಂಗದ ಮೇಲೆ ಹಿಡಿತ ಕಳೆದುಕೊಂಡಿದ್ದರೆ ಅದು ನ್ಯಾಯಾಂಗ ಕಡೆ ಬೆರಳು ತೋರಿಸುವುದು ಸಹಜ ಎನ್ನುತ್ತಿದ್ದಾರೆ ಕಾರ್ಮಿಕ ಸಂಘಟನೆಗಳ ನಾಯಕರು

0
post ad

ರಾಮನಗರ: ಟೊಯೊಟಾ ಕಿರ್ಲೋಸ್ಕರ್‌ ಕಂಪನಿಯಲ್ಲಿ ತಲೆದೋರಿರುವ ಸಮಸ್ಯೆಯನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಡಿಸಿಎಂ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಂಘಗಳು ತಮ್ಮಮ್ಮ ವಾದಗಳನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದು ಒಳಿತು ಎಂದು ಉಪಮುಖ್ಯಮಂತ್ರಿ ಹೇಳಿದರು.
ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ಮಾತನಾಡಿದೆ. ಆದರೆ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಒಕ್ಕೂಟದವರು ಇಬ್ಬರೂ ಸ್ಪಂದಿಸಿಲ್ಲ.
ಇಬ್ಬರು ತಮ್ಮ ಉಗ್ರ ನಿಲುವಿನಿಂದ ಹೊರ ಬಂದು ನ್ಯಾಯಾಲಯ ಇಲ್ಲವೇ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಟೊಯೊಟಾ ಹಾಗೂ ಕೋಲಾರದ ವಿಸ್ಟ್ರಾನ್‌ ಕಂಪನಿಯಲ್ಲಿನ ಘಟನೆಗಳು ವಿಷಾದನೀಯ. ಇದರಿಂದ ರಾಜ್ಯದ ಬಗ್ಗೆ ಕೆಟ್ಟ ಸಂದೇಶ ಹೋಗುತ್ತಿದೆ. ಆದಷ್ಟೂ ಶೀಘ್ರ ಈ ಎಲ್ಲ ಸಮಸ್ಯೆಗಳು ಬಗೆಹರಿಯಬೇಕಿದೆ’ ಎಂದರು.
ಕಾರ್ಮಿಕ ಅಥವಾ ಸಂಬಂಧ ಪಟ್ಟ ಇಲಾಖೆಗಳು ವಸ್ತುಸ್ಥಿತಿ ಅಧ್ಯಯನಕ್ಕೆ ಕಾರ್ಖಾನೆಗೆ ಬೇಟಿ ನೀಡದಿರುವುದು, ಪರಿಶೀಲಿಸದಿರುವುದು, ನೈಜ ಕಾರಣಗಳನ್ನು ಪತ್ತೆ ಹಚ್ಚಲು ವಿಫಲವಾಗಿರುವುದು ಜಗಜ್ಜಾಹಿರ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಆಡಳಿತ ವರ್ಗ ಮತ್ತು ಕಾರ್ಮಿಕ ವರ್ಗಗಳು ಸ್ಪಂದಿಸುತ್ತಿಲ್ಲವೆಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿರುವುದು ವಿಪರ್ಯಾಸವೇ ಸರಿ.
ಕಾರ್ಯಾಂಗದ ಮೇಲೆ ಶಾಸಕಾಂಗವು ತನ್ನ ಹಿಡಿತವನ್ನು ಕಳೆದುಕೊಂಡಿದ್ದರೆ, ಅಥವಾ ಕಾರ್ಯಾಂಗದ ಮೇಲೆ ಶಾಸಕಾಂಗ ಅಧಿಕ ಒತ್ತಡಗಳು ಸೃಷ್ಟಿಸಿದಾಗ ಮಾತ್ರ ಇಂತಹ ಪರಿಸ್ಥಿತಿ ಉದ್ಭವವಾಗುತ್ತದೆ ಎಂದು ಕಾರ್ಮಿಕ ಸಂಘದ ಮುಖಂಡರೊಬ್ಬರು ಇದಕ್ಕೆ ಪ್ರತಿಕ್ರಿಯೆಸಿದ್ದಾರೆ. ಕಾರ್ಮಿಕರು ನಲವತ್ತು ದಿನಗಳಿಂದ ಬೀದಿಗೆ ಬಿದ್ದಿದ್ದರೂ ಇಲ್ಲಿಯವರೆಗೂ ಕಾರ್ಮಿಕ ಇಲಾಖೆ ಆಗಲೀ ಅಥವಾ ಇನ್ಸ್ ಪೆಕ್ಟರ್ ಆಫ್ ಪ್ಯಾಕ್ಟರೀಸ್ ಆಗಲೀ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡದಿರುವುದು ಸರ್ಕಾರದ ವೈಪಲ್ಯತೆಯನ್ನು ಎತ್ತಿತೋರಿಸುತ್ತದೆ ಎಂದು ಹೇಳಿದರು.