Take a fresh look at your lifestyle.

ಜಿಂದಾಲ್ ಕಾರ್ಮಿಕರಿಂದ ಬಿಕ್ಷಾಟನಾ ಪ್ರತಿಭಟನೆ

ನಷ್ಟದ ನೆಪವೊಡ್ಡಿ ಕಾರ್ಮಿಕರನ್ನ ತೆಗೆದು ಹಾಕಿದ ಜಿಂದಾಲ್ ಆಡಳಿತ ಮಂಡಳಿ ವಿರುದ್ಧ ವಿನೂತನ ಪ್ರತಿಭಟನೆಗಿಳಿದ ಕಾರ್ಮಿಕರು

0
post ad

ಬಳ್ಳಾರಿ : ಜಿಂದಾಲ್ ಕಂಪನಿಯು ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡುತ್ತಿರುವ ಕ್ರಮದ ವಿರುದ್ಧ ಸಿಡಿದೆದ್ದ ನೌಕರರು ಬೀದಿಗಿಳಿದು ವಿನೂತನ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಪ್ರತಿಷ್ಟಿತ ಉಕ್ಕು ಕಾರ್ಖಾನೆ ಜಿಂದಾಲ್ ಕಂಪನಿಯು ಸಾವಿರಾರು ಮಂದಿ ಸ್ಥಳೀಯ ಮತ್ತು ಹೊರ ರಾಜ್ಯದವರಿಗೆ ಉದ್ಯೋಗವನ್ನು ನೀಡಿತ್ತು. ಅದರೆ ಕರೋನಾ ಮಹಾಮ್ಮಾರಿಯ ಪರಿಣಾಮ ಶೇ.25ರಷ್ಟು ಮಾತ್ರ ಕಾರ್ಮಿಕರನ್ನ ಬಳಸಿಕೊಂಡು ಕೆಲಸ ಆರಂಭಿಸಬೇಕು ಎಂಬ ರಾಜ್ಯ ಸರ್ಕಾರದ ಹಾಗೂ ಜಿಲ್ಲಾಡಳಿತದ ಒತ್ತಡಕ್ಕೆ ಮಣಿದ ಕಾರ್ಖಾನೆ ಆಡಳಿತ ಮಂಡಳಿ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈ ಕ್ರಮದಿಂದ ಕಾರ್ಖಾನೆಗೆ ಸುಮಾರು 600 ಕೋಟಿ ರೂ. ಗಳಷ್ಟು ನಷ್ಟ ಸಂಭವಿಸಿದೆ ಎಂಬ ನೆಪ ಇಟ್ಟುಕೊಂಡು ಸುಮಾರು 470 ಖಾಯಂ ನೌಕರರನ್ನ ಕೆಲಸದಿಂದ ತೆಗೆದುಹಾಕಿದೆ. ಅಲ್ಲದೆ ಆಡಳಿತ ಮಂಡಳಿಯು ಕಾರ್ಮಿಕರ ಕಾರ್ಯದಕ್ಷತೆ , ಹಾಜರಾತಿ, ಆರೋಗ್ಯ ಸಮಸ್ಯೆ , ವಯಸ್ಸಿನ ಕಾರಣನಂತಹ ಕುಂಟು ನೆಪ ಕೊಟ್ಟು ಹಂತ ಹಂತವಾಗಿ ಕಾರ್ಮಿಕರನ್ನ ಕೆಲಸದಿಂದ ಬಿಡುಗಡೆಗೊಳಿಸಲು ತಯಾರಿಯಲ್ಲಿದೆ. ಕಾರ್ಮಿಕರನ್ನ ಕೆಲಸದಿಂದ ತೆಗದು ಹಾಕಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನೌಕರರು ಬೀದಿಗೆ ಇಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಬಳ್ಳಾರಿ ನಗರದ ಮೋತಿ ಸರ್ಕಲ್ ಬಳಿ ಜಿಂದಾಲ್ ಉದ್ಯಮಿಗಳ ಮುಖವಾಡ ಧರಿಸಿದ್ದ ಕಾರ್ಮಿಕರು, ಜಿಂದಾಲ್ ಕಂಪನಿ ನಷ್ಟದಲ್ಲಿದೆ ನಷ್ಟ ಭರಿಸಲು ಬಿಕ್ಷೆ ಬೇಡಿ ನಷ್ಟ ಸರಿ ತೂಗಿಸುತ್ತಿದ್ದೇವೆ ಎಂದು ಅಣುಕು ಬಿಕ್ಷಾಟನೆ‌ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.ಕಾ

  ಕಾರ್ಮಿಕರ ಬಗೆಗೆ ತಾತ್ಸಾರ ಭಾವನೆಯಿಂದಲೇ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದ್ದು ಬೀದಿಗೆ ಬಿದ್ದಿದ್ದಾರೆ. ಈ ಬಗೆಗೆ ಕಾರ್ಮಿಕ ಇಲಾಖೆಯ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಜರೂರಾಗಿ ತೆಗೆದುಕೊಳ್ಳಬೇಕಿದೆ.

ವರದಿ,
ಮಂಜುನಾಥ ಹಿರೇಮಠ್,
ವಾಯ್ಸ್ ಆಫ್ ವರ್ಕರ್ಸ್
ಬಳ್ಳಾರಿ ಪ್ರತಿನಿಧಿ