Take a fresh look at your lifestyle.

ಪರಾಕ್ರಮ್ ದಿವಸ್ ಬದಲಿಗೆ ದೇಶ ಪ್ರೇಮ ದಿವಸ ಆಚರಿಸಲು ಒತ್ತಾಯ

ಈ ಬಗೆಗೆ ಪ್ರತಿಕಾಗೋಷ್ಠಿ ನಡೆಸಿದ ಟ್ರಸ್ಟ್ ನ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ನೀಡುವುದಾಗಿ ತಿಳಿಸಿದರು

0
post ad

ಬೆಂಗಳೂರು : ‘ಪರಾಕ್ರಮ್ ದಿವಸ್’ ಬದಲಿಗೆ  ‘ದೇಶ ಪ್ರೇಮ ದಿವಸ’ ಅನ್ನಾಗಿ ಘೋಷಿಸಲು ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಬಹು ಅಭಿವೃದ್ಧಿ ಟ್ರಸ್ಟ್ ಒತ್ತಾಯಿಸಿತು.
ಈ ಬಗೆಗೆ ಪ್ರತಿಕಾಗೋಷ್ಠಿ ನಡೆಸಿದ ಟ್ರಸ್ಟ್ ನ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ನೀಡುವುದಾಗಿ ತಿಳಿಸಿದರು.
ನೇತಾಜಿ-ಆ ಹೆಸರೇ ಮಹಾನುಭಾವವನ್ನು ಸೂಚಿಸುತ್ತದೆ, ಆತನೊಬ್ಬ ಅಪೂರ್ವ ದೇಶ ಭಕ್ತ, ಆತನ ಕ್ರಿಯೆಗಳಲ್ಲಿ ಕೆಚ್ಚೆದೆಯ ಶಕ್ತಿ ಹೊಳೆಯುತ್ತದೆ” ಎಂದು ಗಾಂಧೀಜಿಯವರು ನೇತಾಜಿಯವರ ದೇಶಾಭಿಮಾನದ ಬಗ್ಗೆ ಕೊಂಡಾಡಿದ್ದಾರೆ. ಅದೇ ರೀತಿ ರವೀಂದ್ರ ನಾಥ ಠಾಕೂರ್‌ ಸಹ ಅಪ್ರತಿಮ ದೇಶಾಭಿಮಾನಿ ಎಂದು ನೇತಾಜಿಯವರನ್ನು ಕೊಂಡಾಡಿದ್ದಾರೆ ಆದ್ದರಿಂದ ಅವರ ಜಯಂತಿಯನ್ನು ದೇಶ ಪ್ರೇಮ ದಿವಸ ಎಂದು ಕರೆಯುವುದು ಸೂಕ್ತ ಎಂದು ಟ್ರಸ್ಟ್ ಅಧ್ಯಕ್ಷ ಜಿ ಆರ್ ಶಿವಶಂಕರ್ ಒತ್ತಾಯಿಸಿದರು.
ಹೊರ ದೇಶಗಳಲ್ಲಿ ಇದ್ದುಕೊಂಡೇ ರೇಡಿಯೋ ಮೂಲಕ ಭಾರತೀಯರನ್ನು ಉದ್ದೇಶಿಸಿ ನೇತಾಜಿ ಮಾತನಾಡಿದ್ದ ಒಂದೊಂದು ವಿಷಯಗಳು ರೋಮಾಂಜಚನಕಾರಿ ಯಾಗಿರುತ್ತದೆ. ಇವರ ಅಪ್ರತಿಮ ದೇಶಾಭಿಮಾನ ಅವರ ನುಡಿಗಳಲ್ಲಿ ವ್ಯಕ್ತವಾಗಿರುತ್ತದೆ. ನೇತಾಜಿ ಭಾರತ ದೇಶದ ಅಪ್ರತಿಮ ದೇಶಾಭಿಮಾನಿ ಎಂದು ಭಾರತೀಯರು ಪರಿಗಣಿಸಿದ್ದಾರೆಯೇ ವಿನಃ ಬೇರೊಂದು ಹೆಸರಿನಿಂದಲ್ಲ. ಭಾರತ ಸರ್ಕಾರ ಇದರ ಬಗ್ಗೆ ಮರು ಪರಿಶೀಲನೆ ಮಾಡಿ ನೇತಾಜಿಯವರ ಹುಟ್ಟಿದ ದಿನವನ್ನು “ಪರಾಕ್ರಮ ದಿವಸ್‌” ಎ೦ಬುದನ್ನು ಬದಲಿಸಿ “ದೇಶ್‌ಪ್ರೇಮ್‌ ದಿವಸ್‌” ಎಂದು ಘೋಷಿಸಲು ಸನ್ಮಾನ್ಯ ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದು ಟ್ರಸ್ಟ್ ನ ಉಪಾಧ್ಯಕ್ಷರಾದ ಎಂ ರಾಜಕುಮಾರ ತಿಳಿಸಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಶೋಧನೆ ಮತ್ತು ಬಹು ಅಭಿವೃದ್ಧಿ ಟ್ರಸ್ಟ್ (ರಿ) ಟ್ರಸ್ಟ್‌ ನ‌ ಅಧ್ಯಕ್ಷರಾದ ಜಿ ಆರ್ ಶಿವಶಂಕರ್ , ಉಪಾಧ್ಯಕ್ಷರಾದ ಎಂ ರಾಜಕುಮಾರ, ಟ್ರಸ್ಟಿಗಳಾದ ಉಮಾ ಶೇಷಗಿರಿ, ರಾಜ ಯೋಗೀಂದ್ರ ವೀರಯ್ಯ, ಶಾಸ್ತ್ರೀ ಮಠ್ ಗುರೂಜಿ, ಗುರು ಶಾಸ್ತ್ರೀ ಮಠ್ ರವರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.