Take a fresh look at your lifestyle.

ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-1, ಬೆಂಗಳೂರು ಕಾರ್ಯವ್ಯಾಪ್ತಿ ಎಷ್ಟು ಗೊತ್ತೆ ?

ಈ ವಿಭಾಗಕ್ಕೆ ಬೆಂಗಳೂರಿನ ಯಾವ ಪ್ರದೇಶಗಳು ಸೇರ್ಪಡೆಯಾಗುತ್ತವೆ ಎಂಬುದನ್ನು ನೋಡುವುದಾದರೆ..

0
post ad

ಬೆಂಗಳೂರು : ಉಪ ಕಾರ್ಮಿಕ ಆಯುಕ್ತರ ಕಛೇರಿ, ಪ್ರಾದೇಶಿಕ-1, ಬೆಂಗಳೂರು ಹಾಗೂ ಅವರ ಕಾರ್ಯ ವ್ಯಾಪ್ತಿಯಲ್ಲಿನ ಅಧೀನ ಕಛೇರಿಗಳನ್ನು ಬನ್ನೇರುಘಟ್ಟ ರಸ್ತೆ ಕಾರ್ಮಿಕ ಭವನ ಕಟ್ಟಡದಿಂದ ಬಾಗಲಗುಂಟೆಯಲ್ಲಿನ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಈ ವಿಭಾಗಕ್ಕೆ ಯಾವ ರಾಜ್ಯದ ಯಾವ ಪ್ರದೇಶಗಳು ಸೇರ್ಪಡೆಯಾಗುತ್ತವೆ ಎಂಬುದು ನಾಗರೀಕರಲ್ಲಿ ಗೊಂದಲ ಮೂಡಿತ್ತು. ಈ ಗೊಂದಲ ನಿವಾರಣೆಯ ಸಲುವಾಗಿ ಈ ವಿಭಾಗದ ಅಡಿ ಎಷ್ಟು ಪ್ರದೇಶ ಸೇರ್ಪಡೆಯಾಗುತ್ತದೆ ಎಂಬುದನ್ನು ನೋಡುವುದಾದರೆ…ಅದು,
ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-1, ಬೆಂಗಳೂರು ಈ ಕಚೇರಿಯ ಅಡಿ ಬೆಂಗಳೂರು ಕಾರ್ಮಿಕ ಅಧಿಕಾರಿ 1, 2 ಮತ್ತು 5 ನೇ ಉಪ ವಿಭಾಗಕ್ಕೆ ನಿಗದಿಪಡಿಸಿದ ಕಾರ್ಯವ್ಯಾಪ್ತಿ ಹಾಗೂ ತುಮಕೂರು ಜಿಲ್ಲೆ ಬರುತ್ತವೆ.
ಈ ಕಚೇರಿಯ ಅಧಿಕಾರದ ವ್ಯಾಪ್ತಿಯನ್ನು ವಿವರವಾಗಿ ನೋಡುವುದಾದರೆ ಸಹಾಯಕ ಕಾರ್ಮಿಕ ಆಯುಕ್ತರು, ವಿಬಾಗ-1, ಬೆಂಗಳೂರು. ಇವರ ಅಡಿಯಲ್ಲಿ ಬರುವ
ಕಾರ್ಮಿಕ ಅಧಿಕಾರಿ 1ನೇ ಉಪ ವಿಭಾಗಕ್ಕೆ ನಿಗದಿಪಡಿಸಿದ
ಕಾರ್ಯವ್ಯಾಪ್ತಿ ಹಾಗು ತುಮಕೂರು ಜಿಲ್ಲೆ.
ಸಹಾಯಕ ಕಾರ್ಮಿಕ ಆಯುಕ್ತರು, ವಿಬಾಗ-2, ಬೆಂಗಳೂರು ಇವರ ಅಡಿ ಬರುವ ಕಾರ್ಮಿಕ ಅಧಿಕಾರಿ 2 ಮತ್ತು 5ನೇ ಉಪ ವಿಭಾಗಕ್ಕೆ ನಿಗದಿಪಡಿಸಿದ ಕಾರ್ಯವ್ಯಾಪ್ತಿ.
ಇನ್ನು ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-1, ಬೆಂಗಳೂರು ಇವರ ಕಾರ್ಯವ್ಯಾಪ್ತಿಯನ್ನು ನೋಡುವುದಾದರೆ
ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆ: 14, 17,36, 37, 38, 40, 41, 43, 44, 66, 67, 68, 69, 70, 74, 75, 76, 99, 100, 101, 103, 104, 105, 106, 107, 108, 123, 124, 125, 126 ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು.
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪ ವಿಭಾಗ-2, ಬೆಂಗಳೂರು ಇವರ ಅಡಿ ಬರುವ ಪ್ರದೇಶಗಳು ಎಂದರೆ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆ: 71, 72, 73, 127 ರಿಂದ 142 ರವರೆಗೆ, 154 ರಿಂದ 169 ರವರೆಗೆ, 180 ರಿಂದ 185ವರೆಗೆ, 194, 196, 197, 198 ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ , ಕೆಂಗೇರಿ ಹೋಬಳಿಗಳು, ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಮತ್ತು ತಾವರೆಕೆರೆ ಹೋಬಳಿ.
ಕಾರ್ಮಿಕ ಅಧಿಕಾರಿ, ಉಪ ವಿಭಾಗ-5, ಬೆಂಗಳೂರು ಇವರ ಅಧಿಕಾರದ ವ್ಯಾಪ್ತಿಯನ್ನು ನೋಡುವುದಾದರೆ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ: 3, 4, 8,9,10, 11, 12, 13, 15, 16, 18, 19, 20, 34, 35, 39, 45, 61 62,63, 64, 65, 77, 93, 94, 95, 96, 97, 98, 109 ರಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರು 20ನೇ ವೃತ್ತಕ್ಕೆ ನಿಗದಿಪಡಿಸಿರುವ ಪ್ರದೇಶಗಳು, 120, 121, 122, ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಮರ ತಾಲ್ಲೂಕು
ಇದರ ಜೊತೆಗೆ ಕಾರ್ಮಿಕ ಅಧಿಕಾರಿ, ತುಮಕೂರು ಉಪವಿಭಾಗ, ತುಮಕೂರು ಮತ್ತು ತುಮಕೂರು ಜಿಲ್ಲೆ
ಮೇಲೆ ಸೂಚಿಸಿದ ವಲಯದಲ್ಲಿರುವ ಕಾರ್ಮಿಕರು, ಕೈಗಾರಿಕೆಗಳು, ಕಾರ್ಮಿಕ ಸಂಬಂಧಿ ವ್ಯವಹಾರಗಳು ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-1, ಬೆಂಗಳೂರು ವ್ಯಾಪ್ತಿಗೆ ಒಳಪಡುತ್ತವೆ. ಕಾರ್ಮಿಕ ಭವನದಿಂದ ಸ್ಥಳಾಂತರಗೊಂಡಿರುವ ಬಾಗಲುಗುಂಟೆಯಲ್ಲಿರುವ ಕಚೇರಿಯಲ್ಲೇ ಇನ್ಮುಂದೆ ಎಲ್ಲಾ ಆಡಳಿತ ನಡೆಯುತ್ತದೆ.