Take a fresh look at your lifestyle.

ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-2, ಬೆಂಗಳೂರು ಆಡಳಿತ ವ್ಯಾಪ್ತಿ ಎಷ್ಟು

ಕಾರ್ಮಿಕ ಭವನದಲ್ಲೇ ಉಳಿದುಕೊಂಡಿರುವ ವಿಭಾಗಕ್ಕೆ ಯಾವ ರಾಜ್ಯದ ಯಾವ ಪ್ರದೇಶಗಳು ಸೇರ್ಪಡೆಯಾಗುತ್ತವೆ ಎಂಬುದು ನಾಗರೀಕರಲ್ಲಿ ಗೊಂದಲ ಮೂಡಿತ್ತು. ಈ ಗೊಂದಲ ನಿವಾರಣೆಯ ಸಲುವಾಗಿ ಈ ವಿಭಾಗದ ಅಡಿ ಎಷ್ಟು ಪ್ರದೇಶ ಸೇರ್ಪಡೆಯಾಗುತ್ತದೆ ಎಂಬುದನ್ನು ನೋಡುವುದಾದರೆ...

0
post ad

ಬೆಂಗಳೂರು : ಉಪ ಕಾರ್ಮಿಕ ಆಯುಕ್ತರ ಕಛೇರಿ, ಪ್ರಾದೇಶಿಕ-1, ಬೆಂಗಳೂರು ಹಾಗೂ ಅವರ ಕಾರ್ಯ ವ್ಯಾಪ್ತಿಯಲ್ಲಿನ ಅಧೀನ ಕಛೇರಿಗಳನ್ನು ಬನ್ನೇರುಘಟ್ಟ ರಸ್ತೆ ಕಾರ್ಮಿಕ ಭವನ ಕಟ್ಟಡದಿಂದ ಬಾಗಲಗುಂಟೆಯಲ್ಲಿನ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಇನ್ನು, ಕಾರ್ಮಿಕ ಭವನದಲ್ಲೇ ಉಳಿದುಕೊಂಡಿರುವ ವಿಭಾಗಕ್ಕೆ ಯಾವ ರಾಜ್ಯದ ಯಾವ ಪ್ರದೇಶಗಳು ಸೇರ್ಪಡೆಯಾಗುತ್ತವೆ ಎಂಬುದು ನಾಗರೀಕರಲ್ಲಿ ಗೊಂದಲ ಮೂಡಿತ್ತು. ಈ ಗೊಂದಲ ನಿವಾರಣೆಯ ಸಲುವಾಗಿ ಈ ವಿಭಾಗದ ಅಡಿ ಎಷ್ಟು ಪ್ರದೇಶ ಸೇರ್ಪಡೆಯಾಗುತ್ತದೆ ಎಂಬುದನ್ನು ನೋಡುವುದಾದರೆ…
ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-2, ಬೆಂಗಳೂರು ಕಚೇರಿಯ ಅಧಿಕಾರದ ವ್ಯಾಪ್ತಿಯೆಂದರೆ ಅದು,
ಬೆಂಗಳೂರು ಕಾರ್ಮಿಕ ಅಧಿಕಾರಿ 3, 4 ಮತ್ತು 6 ನೇ ಉಪವಿಭಾಗಕ್ಕೆ ನಿಗದಿಪಡಿಸಿದ ಕಾರ್ಯವ್ಯಾಪ್ತಿ ಹಾಗೂ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು. ಅಂದರೆ ವಿವರವಾಗಿ ನೋಡುವುದಾದರೆ ಸಹಾಯಕ ಕಾರ್ಮಿಕ ಆಯುಕ್ತರು, ವಿಬಾಗ-3, ಬೆಂಗಳೂರು ಮತ್ತು ಇವರ ವಿಭಾಗಕ್ಕೆ ನಿಗದಿಪಡಿಸಿದ ಕಾರ್ಯವ್ಯಾಪ್ತಿ ಹಾಗು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ.
ಸಹಾಯಕ ಕಾರ್ಮಿಕ ಆಯುಕ್ತರು, ವಿಬಾಗ-4, ಬೆಂಗಳೂರು ಇವರ ಅಡಿ ಕಾರ್ಮಿಕ ಅಧಿಕಾರಿ 4 ಮತ್ತು 6 ನೇ ಉಪ ವಿಭಾಗಕ್ಕೆ ನಿಗದಿಪಡಿಸಿದ ಕಾರ್ಯವ್ಯಾಪ್ತಿ ಹಾಗೂ ರಾಮನಗರ ಜಿಲ್ಲೆ ಸೇರುತ್ತವೆ.
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪವಿಭಾಗ-3, ಬೆಂಗಳೂರು ಇವರ ಆಡಳಿತ ವ್ಯಾಪ್ತಿ ಎಂದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ: 1,2, 5, 6, 7. 21, 23, ರಿಂದ 33 ವರೆಗೆ, 47, 48, 50, 52, 53, 54, 57, 58, 59, 60, 78, 79, 83, 90, 91, 92, ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು.
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪವಿಭಾಗ-4 ಬೆಂಗಳೂರು ಈ ಕಚೇರಿ ವ್ಯಾಪ್ತಿಗೆ ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ ಸಂಖ್ಯೆ: 51, 55, 56, 80, 81, 82, 84 ರಿಂದ 89ವರೆಗೆ, 109 ರಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರು 9ನೇ ವೃತ್ತಕ್ಕೆ ನಿಗದಿಪಡಿಸಿದ ಪ್ರದೇಶಗಳು, 110 ರಿಂದ 117ವರೆಗೆ, 147 ರಿಂದ 11 ವರೆಗಿನ ವಾರ್ಡ್ ಗಳು, ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು
ಕಾರ್ಮಿಕ ಅಧಿಕಾರಿ, ಬೆಂಗಳೂರು ಉಪವಿಭಾಗ-6, ಬೆಂಗಳೂರು ಇವರ ಕೆಳಗೆ ಬೆಂಗಳೂರು ಮಹಾನಗರಪಾಲಿಕೆಯ ವಾರ್ಡ್‌ ಸಂಖ್ಯೆ: 22, 118, 119, 143 ರಿಂದ 146 ರವರೆಗೆ, 152, 153, 170 ರಿಂದ 179 ವರೆಗೆ, 186 ರಿಂದ 193 ರವೆರೆಗೆ, 195, ಹಾಗೂ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕು.
ಕಾರ್ಮಿಕ ಅಧಿಕಾರಿ, ಮೈಸೂರು ಉಪವಿಭಾಗ, ಮೈಸೂರು ಮತ್ತು ಮೈಸೂರು ಜಿಲ್ಲೆ.
ಕಾರ್ಮಿಕ ಅಧಿಕಾರಿ, ಮಂಡ್ಯ ಉಪವಿಭಾಗ-1, ಮಂಡ್ಯ ಇವರ ಅಡಿ ಮಂಡ್ಯ ನಗರಸಭೆ ವಾರ್ಡ್‌ ಸಂಖ್ಯೆ: 3 ರಿಂದ 18, 22, 23, 25, 26, 27, ಮತ್ತು ಬಸರಾಳು, ಕೆರಗೋಡು, ಕಸಬ ಹೋಬಳಿಗಳು ಹಾಗೂ ಮಳವಳ್ಳಿ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು.
ಕಾರ್ಮಿಕ ಅಧಿಕಾರಿ, ಮಂಡ್ಯ ಉಪವಿಭಾಗ-2, ಮಂಡ್ಯ ಇವರ ಅಧೀನದಲ್ಲಿ ಮಂಡ್ಯ ನಗರಸಭೆ ವಾರ್ಡ್‌ ಸಂಖ್ಯೆ: 1, 2, 19, 20, 21, 24, 28 ರಿಂದ 35 ಮತ್ತು ಕೊತ್ತತಿ ಮತ್ತು ದುದ್ದ ಹೋಬಳಿಗಳು ಹಾಗೂ ಮದ್ದೂರು, ಕೆ.ಆರ್‌. ಪೇಟೆ ಮತ್ತು ನಾಗಮಂಗಲ ತಾಲ್ಲೂಕುಗಳು.
ಕಾರ್ಮಿಕ ಅಧಿಕಾರಿ, ಕೋಲಾರ ಉಪವಿಭಾಗ ಕೋಲಾರ ಮತ್ತು ಕೋಲಾರ ಜಿಲ್ಲೆ.
ಕಾರ್ಮಿಕ ಅಧಿಕಾರಿ, ಚಾಮರಾಜನಗರ ಉಪ ವಿಭಾಗ, ಚಾಮರಾಜನಗರ ಮತ್ತು ಚಾಮರಾಜನಗರ ಜಿಲ್ಲೆ.
ಕಾರ್ಮಿಕ ಅಧಿಕಾರಿ, ಚಿಕ್ಕಬಳ್ಳಾಪುರ ಉಪ ವಿಭಾಗ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ.
ಕಾರ್ಮಿಕ ಅಧಿಕಾರಿ, ರಾಮನಗರ ಉಪ ವಿಭಾಗ, ರಾಮನಗರ ಮತ್ತು ರಾಮನಗರ ಜಿಲ್ಲೆ.
ಮೇಲೆ ಸೂಚಿಸಿದ ವಲಯದಲ್ಲಿರುವ ಕಾರ್ಮಿಕರು, ಕೈಗಾರಿಕೆಗಳು, ಕಾರ್ಮಿಕ ಸಂಬಂಧಿ ವ್ಯವಹಾರಗಳು ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-2, ಬೆಂಗಳೂರು ಇವರ ವ್ಯಾಪ್ತಿಗೆ ಒಳಪಡುತ್ತವೆ. ಕಾರ್ಮಿಕ ಭವನದಿಂದ ಸ್ಥಳಾಂತರಗೊಂಡ ಬಾಗಲುಗುಂಟೆಯಲ್ಲಿರುವ ಕಚೇರಿಯಲ್ಲೇ ಇನ್ಮುಂದೆ ಎಲ್ಲಾ ಆಡಳಿತ ನಡೆಯುತ್ತದೆ.