Take a fresh look at your lifestyle.

ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ

ಎಂಟನೇ ತರಗತಿಯ ಮೇಲ್ಪಟ್ಟ ವಿಧ್ಯಾರ್ಥಿಗಳಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತದೆ, ವಿಧ್ಯಾರ್ಥಿಗಳು ಕನಿಷ್ಟ ಅಂಕ ಪಡೆದಿರಲೇಬೇಕು

0
post ad

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕ ಇಲಾಖೆಯ ಅಂಗ ಸಂಸ್ಥೆಯಾಗಿದೆ. ಇದರ ಸ್ಥಾಪನೆಯ ಉದ್ದೇಶ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಹಲವು ರೀತಿ ಕಲ್ಯಾಣ ಯೋಜನೆಗಳನ್ನು ರೂಪಿಸಿ, ಅವುಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹ ಧನವನ್ನು ನೀಡುವುದೇ ಆಗಿದೆ.
ಈ ಮೂಲಕ ಕಾರ್ಮಿಕ ಕುಟುಂಬದ ಸಮಗ್ರ ಹಿತವನ್ನು ಕಾಪಾಡುವುದೇ ಆಗಿದೆ.
ಈ ಮಂಡಳಿಯು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಅದರಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಯೋಜನೆ ಕಾರ್ಮಿಕರ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಅಂದಹಾಗೇ, ಈ ಕಲ್ಯಾಣ ಯೋಜನೆಗೆ ಮಾಸಿಕ ಸಂಬಳ ರೂ.15,000/- ಗಳಿಗೆ ಮೀರಿರಬಾರದು. ಕಾರ್ಮಿಕರನ ವಯೋಮಿತಿ 18-60 ರ ನಡುವೆ ಇರಬೇಕು.

8 ರಿಂದ 10ನೇ ತರಗತಿವರೆಗಿನ ಪ್ರೌಡ ಶಾಲಾ ವಿಧ್ಯಾರ್ಥಿಗಳಿಗೆ ರೂ.3000 , ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಹೆಚ್ ಇತ್ಯಾದಿ ಕೋರ್ಸ್ ವಿಧ್ಯಾರ್ಥಿಗಳಿಗೆ ರೂ. 4000 , ಪದವಿ ತರಗತಿಗೆ ರೂ 5000, ಸ್ನಾತಕೋತ್ತರ ಪದವಿ ತರಗತಿಗಳಿಗೆ ರೂ.5000, ಇಂಜಿನೀಯರಿಂಗ್/ವೈದ್ಯಕೀಯ ವಿಧ್ಯಾರ್ಥಿಗಳಿಗೆ ರೂ.10,000ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ ಶೇ.50 ಪ.ಜಾ / ಪ.ಪಂ ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು ಎಂಬ ನಿಯಮವಿದೆ. ಈ ಯೋಜನೆ ಅನುಕೂಲವನ್ನು ಕಾರ್ಮಿಕ ಬಾಂಧವರು ಮತ್ತು ಅವರ ಕುಟುಂಬ ತಪ್ಪದೇ ಪಡೆದುಕೊಳ್ಳಬೇಕು. ಯೋಜನೆಗೆ ಸಂಬಂಧ ಪಟ್ಟ ಮಾಹಿತಿಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು. ಈ ಬಗೆಗೆ ಮತ್ತಷ್ಟು ಯೋಜನೆಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನ ನಿಮ್ಮ ‘ವಾಯ್ಸ್ ಆಫ್ ವರ್ಕರ್ಸ್’ ಮಾಡುತ್ತದೆ. ಅವುಗಳ ಮಾಹಿತಿಗಾಗಿ ನಿಮ್ಮ ‘ವಾಯ್ಸ್ ಆಫ್ ವರ್ಕರ್ಸ್’ ವೆಬ್ ಸೈಟ್ ಅನ್ನು ಫಾಲೋ ಮಾಡಿ.