Take a fresh look at your lifestyle.

ಕಣ್ವ ಪ್ಯಾಷನ್ ಗೆ ಬೀಗ ಬೀದಿಗೆ ಬಿದ್ದ ಕಾರ್ಮಿಕರು

ಪ್ರತಿಭಟನೆ ನಡೆಸಿದ ಕಾರ್ಮಿಕರು ಪಿ.ಎಫ್‌ ಸೇರಿದಂತೆ ಕಾನೂನು ಬದ್ಧ ಬಾಕಿಗಳನ್ನು ಕಂಪೆನಿ ಪಾವತಿಸಲು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು

0
post ad

ತುಮಕೂರು : ಕಣ್ವ ಪ್ಯಾಷನ್ ಲಿಮಿಟೆಡ್ ಸಂಸ್ಥೆ ಬಾಗಿಲು ಮುಚ್ಚಿದ್ದರಿಂದ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿದ್ದ ಸಂಬಳ ಮತ್ತು ಶಾಸನಾತ್ಮಕ ಸವಲತ್ತು ಬಾಕಿಗಳನ್ನು ತಕ್ಷಣವೇ ಪಾವತಿಸುವಂತೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕಾರ್ಖಾನೆಯನ್ನು ಏಕಾಏಕಿ ಮುಚ್ಚಿದ್ಧರಿಂದ ಬೀದಿಗೆ ಬಿದ್ದಿರುವ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ನಂತರ ಸುಮಾರು 300 ಕಾರ್ಮಿಕರಿಗೆ ನೀಡಬೇಕಿದ್ದ ಪಿ.ಎಫ್‌ ಮತ್ತಿತರೆ ಕಾನೂನು ಬದ್ದ ಬಾಕಿಗಳನ್ನು ಕಂಪೆನಿ ಪಾವತಿಸಲು ವಿಫಲವಾಗಿರುವುದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕೋಂಗೇನ ಹಳ್ಳಿಯ (ಬಜ್ಜನ ಹಳ್ಳಿ ) ಅಂಚೆ ಹಳ್ಳ ಪೋಸ್ಟ್‌ ಇಲ್ಲಿರುವ ಕಣ್ಣ ಪ್ಯಾಷನ್ ಸಂಸ್ಥೆ ಯಲ್ಲಿ ಕಳೆದ 7-8 ವರ್ಷಗಳಿಂದ ಸುಮಾರು 300 ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯು ದಿನಾಂಕ 18-09-2019 ರಂದು ಘಟಕವನ್ನು ಮುಚ್ಚಿದ್ದು, ಕಾನೂನುಬಾಹಿರವಾಗಿ
ಕೆಲಸದಿಂದ ಹೊರ ಹಾಕಿದ್ದಾರೆ. ಆದರೆ ಕಾರ್ಖಾನೆಯು ತನ್ನ ನೌಕರರಿಗೆ ಬಾಕಿ ಉಳಿಸಿಕೊಂಡಿದ್ದ ಒಂದು ಕೋಟಿ ನಲವತ್ತಾರು ಲಕ್ಷದ ತೊಂಬತ್ತೆಂಟು ಸಾವಿರದ ಏಳುನೂರ ಐವತ್ತು ರೂಪಾಯಿಗಳನ್ನು ಪಾವತಿಸಬೇಕಾಗಿದೆ.
ಈ ಬಗ್ಗೆ ಎಸಿ ಅಜಯ್ ರವರಿಗೆ ಮನವಿ ಪತ್ರ ಸಲ್ಲಿಸಿದ ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ತಮ್ಮ ದಂಡಾಧಿಕಾರವನ್ನು ಬಳಸಿ ನ್ಯಾಯ ಒದಗಿಸಕೊಡಬೇಕೆಂದು ಒತ್ತಾಯಿಸಿತು.
ಲಾಕ್ ಡೌನ್ ನಿಂದ ನಮ್ಮ ಬದುಕು ತೀರ ಸಂಕಟಕ್ಕೆ ಸಿಲುಕಿದೆ, ಭವಿಷ್ಯ ನಿಧಿ ಉಳಿತಾಯವು ಸಿಗದೆ, ಬಡ ಹೆಣ್ಣು ಮಕ್ಕಳು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಿದೆ.

ವರದಿ :
ರವಿ ಚಿಂಪುಗಾನಹಳ್ಳಿ,
ತುಮಕೂರು ವರದಿಗಾರ