Take a fresh look at your lifestyle.

ಕಾರ್ಖಾನೆ ಬಂದ್ ಬೀದಿಗೆ ಬಿದ್ದ ಕಾರ್ಮಿಕರು

ಸೂಕ್ತ ಕಾರಣ ನೀಡದೆ ಬೀಗ ಜಡಿದ ಕಾರ್ಖಾನೆ ಮಾಲೀಕ ಯಾವುದೇ ಮುನ್ಸೂಚನೆ ನೀಡದೆ ಕಾರ್ಮಿಕರನ್ನು ದುಸ್ಥಿತಿಗೆ ತಲ್ಲಿದ್ದಾರೆ

0
post ad

ನಂಜನಗೂಡು : ದುಡಿದು ತಿನ್ನುತ್ತಿದ್ದ ಕಾರ್ಮಿಕರ ಬದುಕನ್ನು ಡೆಡ್ಲಿ ಕೊರೋನಾ ಕಸಿದುಕೊಂಡಿದೆ.
ಡೆಡ್ಲಿ ಕೋರೋನಾ ಸಂಕಷ್ಟದ ನಡುವೆ ಕಾರ್ಖಾನೆ ಬಂದ್ ನಿಂದಾಗಿ ಕಾರ್ಖಾನೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ಹದಿನೈದು ವರ್ಷಗಳಿಂದ ನಡೆಯುತ್ತಿದ್ದ ಕಾರ್ಖಾನೆ ಬಾಗಿಲು ಮುಚ್ವಿದ್ದರಿಂದ 35 ಮಂದಿ ಕಾರ್ಮಿಕರು ಬೀದಿಪಾಲಾಗಿದ್ದಾರೆ.
ನಂಜನಗೂಡು ಪಟ್ಟಣದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಜೆ ಜೇಸ್ ಪೇಪರ್ ರಿಸೈಕ್ಲಿಂಗ್ ಕಾರ್ಖಾನೆ ಬಂದ್ ಘೋಷಣೆ ಮಾಡಿತ್ತು.
ಸೂಕ್ತ ಕಾರಣ ನೀಡದೆ ಬೀಗ ಜಡಿದ ಕಾರ್ಖಾನೆ ಮಾಲೀಕ ಯಾವುದೇ ಮುನ್ಸೂಚನೆ ನೀಡದೆ ಕಾರ್ಮಿಕರನ್ನು ದುಸ್ಥಿತಿಗೆ ತಲ್ಲಿದ್ದಾರೆ.


ಬೆಳ್ಳಂಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ
ಕಾರ್ಖಾನೆಯ ಮುಂಭಾಗದಲ್ಲಿ ನೋಟಿಸ್ ಅಳವಡಿಸಿರುವುದನ್ನು ನೋಡಿ ಶಾಕ್ ಆಗಿದ್ದು, ತಕ್ಷಣ ಪ್ರತಿಭಟನೆಗೆ ಕಾರ್ಮಿಕರು ಮುಂದಾಗಿದ್ದಾರೆ.
ಕಾರ್ಖಾನೆ ಪುನರಾರಂಭಕ್ಕೆ ಒತ್ತಾಯಿಸಿರುವ ಕಾರ್ಮಿಕರು ಕುಟುಂಬ ಸಮೇತ ಪ್ರತಿಭಟನೆ ಗೆ ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾರ್ಮಿಕ ಸಂಘಟನೆ ಮುಖಂಡ ಶೇಷಾದ್ರಿ ಮುಂದೆ ಉಗ್ರ ಹೋರಾಟದ ಸುಳಿವು ನೀಡಿದರು.
ಈ ಬಗೆಗೆ ಕಾರ್ಮಿಕ ಅಧಿಕಾರಿಗಳು ಇನ್ನು ಸ್ಪಂದಿಸಬೇಕಿದೆ.