Take a fresh look at your lifestyle.

ಟೊಯೋಟಾ ಕಾರ್ಮಿಕರಿಗೆ ರೈತರ ಬೆಂಬಲ ಸೂಚಿತ ಜಾಥಾ

ಮಂಡ್ಯ ,ಮೈಸೂರು ,ಕೊಡಗು ,ಚಾಮರಾಜನಗರ ಭಾಗದ ರೈತರು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಪೆರೇಡ್ ನಲ್ಲಿ ಭಾಗವಹಿಸಲು ಬಂದಿದ್ದರು, ಈ ವೇಳೆ ಅವರು ಟೊಯೋಟಾ ಕಂಪನಿ ಮುಂಭಾಗದಿಂದ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸುತ್ತಾ ಬೃಹತ್ ಜಾಥಾವನ್ನು ನಡೆಸಿದರು

0
post ad

ಬಿಡದಿ : ಟೊಯೋಟಾ ಆಡಳಿತ ಮಂಡಳಿಯ ಕಾರ್ಮಿಕಾತೀತ ಕೆಲಸದ ವಿಧಾನ ಮತ್ತು ದೇಶದ ಕಾನೂನುಗಳು, ಸರ್ಕಾರಗಳನ್ನು ಲೆಕ್ಕಿಸದ ಮೊಂಡು ಧೋರಣೆಗಳ ವಿರುದ್ಧ ಸ್ವಾಭಿಮಾನ ಹೋರಾಟಕ್ಕೆ ಇಳಿದಿರುವ ಕಾರ್ಮಿಕರಿಗೆ ದೇಶದ ಬೆನ್ನೆಲುಬಾದ ರೈತನ ಬೆಂಬಲ ದೊರೆತಿದೆ.


ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವಂತೆ ಒತ್ತಾಯಿಸಿ ರಾಜಧಾನಿಯಲ್ಲಿ ಪೆರೇಡ್ ನಡೆಸಲು ಬಿಡದಿ ಮಾರ್ಗದಲ್ಲಿ ಚಲಿಸಿದ ರೈತರು ಟೊಯೋಟಾ ಕಾರ್ಮಿಕರನ್ನು ಬೇಟಿ ಮಾಡಿ ತಮ್ಮ ನೈತಿಕ ಬೆಂಬಲ ಸೂಚಿಸಿದರು.

ಈ ವೇಳೆ ಟೊಯೋಟಾ ಕಾರ್ಮಿಕ ಸಂಘ ರೈತರಿಗೆ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಿತ್ತು. ಖುದ್ದು ಟಿಕೆಎಂ ಕಾರ್ಮಿಕರೇ ರೈತರಿಗೆ ಉಪಾಹಾರವನ್ನು ನೀಡಿ ಅವರ ಹೋರಾಟಕ್ಕೆ ಶಕ್ತಿ ತುಂಬಿದರು.
ಬೆಂಗಳೂರಿಗೆ ಹೊರಟಿದ್ದ ಸುಮಾರು 5,000 ರೈತರು ಟೊಯೋಟಾ ಕಂಪನಿ ಮುಂಭಾಗದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡಿದರು.
ಮಂಡ್ಯ ,ಮೈಸೂರು ,ಕೊಡಗು ,ಚಾಮರಾಜನಗರ ಭಾಗದ ರೈತರು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಪೆರೇಡ್ ನಲ್ಲಿ ಭಾಗವಹಿಸಲು ಬಂದಿದ್ದರು, ಈ ವೇಳೆ ಅವರು ಟೊಯೋಟಾ ಕಂಪನಿ ಮುಂಭಾಗದಿಂದ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸುತ್ತಾ ಬೃಹತ್ ಜಾಥಾವನ್ನು ನಡೆಸಿದರು.
ಟೊಯೋಟಾ ಕಾರ್ಮಿಕ ಸಂಘ ಮುಂದಿನ ಗುರುವಾರ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ರೈತ ಮುಖಂಡರು ಭರವಸೆ ನೀಡಿದರು.
ಟೊಯೋಟಾ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವು 79ನೇ ದಿನಕ್ಕೆ ಕಾಲಿಟ್ಟಿದೆ.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 79 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ. ಇಂದು ವಿಶೇಷವಾಗಿ ರೈತರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿದರು.