Take a fresh look at your lifestyle.

ವರ್ಗಾವಣೆ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಉದಯ ಟಿವಿ ನೌಕರರ ಯೂನಿಯನ್

ದಮನ ಧೋರಣೆಯನ್ನು ವಿರೋಧಿಸಿ ಉದಯ ಟಿವಿ ನೌಕರರ ಯೂನಿಯನ್ ನ ಸರ್ವ ಸದಸ್ಯರ ಸಭೆ

0
post ad

ಬೆಂಗಳೂರು : ಕರ್ನಾಟಕದ ಪ್ರಖ್ಯಾತ ಮನೋರಂಜನಾ ವಾಹಿನಿಯಾದ ಉದಯ ಟಿವಿಯ ಆಡಳಿತ ಮಂಡಳಿ ನೌಕರರ ಬಗೆಗೆ ತಾಳಿರುವ ದಮನ ಧೋರಣೆಯನ್ನು ವಿರೋಧಿಸುತ್ತಾ, ಉದಯ ಟಿವಿ ಎಂಪ್ಲಾಯಿಸ್ ಯೂನಿಯನ್ ನ ಸರ್ವ ಸದಸ್ಯರ ಸಭೆ ನಡೆಯಿತು. ಬಸವೇಶ್ವರನಗರದಲ್ಲಿರುವ ಟಿಯುಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸರ್ವ ಸದಸ್ಯರ ಸಭೆಯಲ್ಲಿ ಯೂನಿಯನ್ ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗೆಗೆ ಸದಸ್ಯರು ಸಮಗ್ರ ಚರ್ಚೆ ನಡೆಸಿದರು. ಆಡಳಿತ ವರ್ಗ ಕಾನೂನು ಬಾಹಿರವಾಗಿ ಮಾಡಿರುವ ವರ್ಗಾವಣೆಯನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಉದಯ ಟಿವಿ ನೌಕರರ ಯೂನಿಯನ್ ಎಚ್ಚರಿಕೆಯನ್ನು ನೀಡಿತು.
ಯೂನಿಯನ್ ನ ಅಧ್ಯಕ್ಷರಾದ ಜಿ ಆರ್ ಶಿವಶಂಕರ್ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಿಬ್ಬಂದಿಯನ್ನು ಅಂತರಾಜ್ಯಗಳಿಗೆ ವರ್ಗಾವಣೆಯನ್ನು ವಿರೋಧಿಸಿ ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗೆಗೂ ಚರ್ಚಿಸಲಾಯಿತು. ಇತ್ತೀಚೆಗೆ ಉದಯ ವಾಹಿನಿಯ ಆಡಳಿತ ವರ್ಗ ಬೆಂಗಳೂರು ಕೇಂದ್ರದಲ್ಲಿ ಕಾರ್ಯನಿರ್ವಹಿಸಲಾಗುತ್ತಿರುವ ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಿತ್ತು. ಈ ವರ್ಗಾವಣೆಯನ್ನು ವಿರೋಧಿಸಿ ಜುಲೈ 24 ರಂದು ಉದಯ ಟಿವಿ ಕಚೇರಿಯೊಳಗೆ ಮೌನ ಪ್ರತಿಭಟನೆಯನ್ನು ಕೈಗೊಂಡಿದ್ದರು. ಸನ್ ನೆಟ್ ವರ್ಕ್ ನ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ್ ಕುಮಾರ್, ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಶಾಂತಿ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತಾದರೂ ಒಂದು ವಾರದ ಅಂತರದಲ್ಲಿ ಮತ್ತಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಯೂನಿಯನ್ ನ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿತ್ತು.